ಭಟ್ಕಳ (Bhatkal) : ಇಲ್ಲಿನ ಸೋನಾರಕೇರಿಯ ಜ್ಞಾನೇಶ್ವರಿ ಮಹಿಳಾ ಮಂಡಳಿ, ದೈವಜ್ಞ ಯುವಕ ಮಂಡಳಿ ಮತ್ತು ದೈವಜ್ಞ ವೆಂಕಟೇಶ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆಯು (Women’s Day) ಸೋನಾರಕೇರಿಯಲ್ಲಿರುವ ದೈವಜ್ಞ (Daivajna) ಸಭಾಭವನದಲ್ಲಿ ಜರುಗಿತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಕಾರ್ಯಕ್ರಮವನ್ನು ಪ್ರವೀಣ ಶಾಂತ ಕೊಲ್ಲೆ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಮಹಿಳೆಯರು ಕ್ರಿಯಾಶೀಲರಾಗಿ ಸಮಾಜಕ್ಕೆ ಶಕ್ತಿಯಾಗಿ ಬೆಳೆಯಬೇಕು.  ಮಹಿಳೆಯರು ಸಾಧನೆ, ಸ್ವಾಭಿಮಾನದಿಂದ ಬದುಕಬೇಕೆಂದರು. ಅತಿಥಿಯಾಗಿ ಉಪಸ್ಥಿತರಿದ್ದ ಮಂಗಳೂರಿನ ಪುಷ್ಪ ಕೃಷ್ಣನಂದ ಶೇಟ ಮಾತನಾಡಿ, ಸೊಸೆಯನ್ನು ಕೂಡ ಮಗಳಿನಂತೆ ಪ್ರೀತಿಸಬೇಕು. ಸಂಸ್ಕೃತಿ ಯನ್ನು ಉಳಿಸಿ ಬೆಳೆಸುವ ಜೊತೆಗೆ ಕುಟುಂಬವನ್ನು, ಸಮಾಜವನ್ನು ಕಟ್ಟುವ ಕಾರ್ಯ ಮಹಿಳೆಯ ಪಾತ್ರ ಮುಖ್ಯವಾದುದು ಎಂದರು.

ಇದನ್ನೂ ಓದಿ : Car-auto accident/ ಕಾರು-ಆಟೋ ಜಖಂ; ಮೂವರಿಗೆ ಗಾಯ

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಡಾಕ್ಟರ ಸವಿತಾ ಕಾಮತ ಮಾತನಾಡಿದರು. ಈ ಸಂದರ್ಭದಲ್ಲಿ ಶಿಕ್ಷಕಿ ಸವಿತಾ ರತ್ನಾಕರ ಶೇಟರಿಗೆ ದೈವಜ್ಞ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಬೇಬಿ ಸೂರ್ಯಕಾಂತ ಶೇಟ, ಸುವರ್ಣ ಮಂಜುನಾಥ್ ಶೇಟ, ಸರಸ್ವತಿ ಅಣ್ಣಪ್ಪ ಶೇಟ, ವಾಣಿ ಗಣೇಶ ಭಟ್ ಮುಂತಾದವರನ್ನು ಸನ್ಮಾನಿಸಲಾಯಿತು.
ಮಹಿಳಾ ದಿನಾಚರಣೆಯ (Women’s Day) ಅಂಗವಾಗಿ ಮಹಿಳೆಯರಿಗೆ ಸ್ಪರ್ಧಾ ಕಾರ್ಯಕ್ರಮವನ್ನು ನಡೆಸಲಾಗಿತ್ತು. ಪ್ರಕಾಶ ಕೃಷ್ಣ ರಾಯ್ಕರ ರಸಪ್ರಶ್ನೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು ಸವಿತಾ ರತ್ನಾಕರ್ ಶೇಟ ಹಾಗೂ ಸುಪ್ರಿಯಾ ಶೇಟ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಅಣ್ಣಪ್ಪ ಶೇಟ, ಸುಧೀರ್ ಶೇಟ, ಸಂದೀಪ ಶೇಟ, ಸುನೀಲ ಶೇಟ ಹಾಗೂ ಜ್ಞಾನೇಶ್ವರಿ ಮಹಿಳಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

ಇದನ್ನೂ ಓದಿ : Hit and Run/ ಮುರ್ಡೇಶ್ವರದಲ್ಲಿ ಹಿಟ್‌ ಎಂಡ್‌ ರನ್‌ ಪ್ರಕರಣ