ಭಟ್ಕಳ (Bhatkal) : ಮಹಿಳೆಯು (Woman) ದೇವತೆಗಳಾದ ಲಕ್ಷ್ಮಿ, ಸರಸ್ವತಿ ಮತ್ತು ಶಕ್ತಿಯ ಸ್ವರೂಪ. ಪ್ರತಿಯೊಂದು ಕ್ಷೇತ್ರದಲ್ಲಿ ತನ್ನನ್ನು ತಾನು ಸಂಪೂರ್ಣವಾಗಿ ಸಮರ್ಪಿಸಿಕೊಂಡು ಮಹಿಳೆ ಮುನ್ನಡೆಯುತ್ತಿದ್ದಾಳೆ ಎಂದು ಭಟ್ಕಳ ಎಜ್ಯುಕೇಶನ್ ಟ್ರಸ್ಟಿನ ಟ್ರಸ್ಟಿ ಸುಮಿತ್ರಾ ಕೌಶಿಕ ಹೇಳಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಅವರು ಭಟ್ಕಳದ ಶ್ರೀ ಜ್ಞಾನೇಶ್ವರಿ (Jnaneshwari) ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ (women’s day) ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಭಟ್ಕಳ ತಾಲೂಕಿನ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಅತೀ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಮೂಡಭಟ್ಕಳದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯಾಧ್ಯಾಪಕಿ ಗೀತಾ ಗಣಪತಿ ಶಿರೂರು ಅವರನ್ನು ಸನ್ಮಾನಿಸಲಾಯಿತು. ನಂತರ ಮಾತನಾಡಿದ ಗೀತಾ ಶಿರೂರು, ಮಹಿಳೆಗೆ (woman) ಸಹನೆ ಮತ್ತು ತಾಯಿ ಹೃದಯ ದೇವರು ಕೊಟ್ಟ ವರವಾಗಿದೆ. ಶಿಕ್ಷಕ ವೃತ್ತಿಯಲ್ಲಿ ಈ ಎರಡು ಗುಣಗಳು ವಿದ್ಯಾರ್ಥಿಗಳಿಗೆ ಶಿಸ್ತಿನ ಶಿಕ್ಷಣ ನೀಡುವಲ್ಲಿ ಸಹಕಾರಿಯಾಗಿವೆ ಎಂದು ಹೇಳಿದರು.
ಇದನ್ನೂ ಓದಿ : Humanity/ ಆಟೋ ಚಾಲಕರ ಮಾನವೀಯತೆ
ಭಟ್ಕಳ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ. ಸುರೇಶ ನಾಯಕ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಡಾ. ವಿರೇಂದ್ರ ವಿ ಶ್ಯಾನಭಾಗ ಮತ್ತು ಪ್ರಧಾನ ಕಾರ್ಯದರ್ಶಿ ಪಲ್ಲವಿ ಉಪಸ್ಥಿತರಿದ್ದರು. ಪ್ರಶಿಕ್ಷಣಾರ್ಥಿಗಳಾದ ಗಗನಶ್ರೀ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಲಕ್ಷ್ಮಿ ಮತ್ತು ಸಂಗಡಿಗರು ಮಹಿಳಾ ದಿನಾಚರಣೆಯ ಕುರಿತು ಕವನ ವಾಚಿಸಿದರು. ಶ್ರೇಯಾ ನಾಯ್ಕ ಸ್ವಾಗತಿಸಿದರು. ಪ್ರಿಯಾ ನಾಯ್ಕ ವಂದಿಸಿದರು. ಗೀತಾ ನಾಯ್ಕ ನಿರೂಪಿಸಿದರು.
ಇದನ್ನೂ ಓದಿ : Annabhagya/ ಎರಡು ತಿಂಗಳ ಅಕ್ಕಿ ವಿತರಣೆ