ಹುಬ್ಬಳ್ಳಿ (Hubballi): ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದ ಇಬ್ಬರು ನಟೋರಿಯಸ್ ಅಂತಾರಾಜ್ಯ ದರೋಡೆಕೋರರ ಮೇಲೆ ಹುಬ್ಬಳ್ಳಿ-ಧಾರವಾಡ ಸಿಸಿಬಿ ಪೊಲೀಸರು ಗುಂಡು ಹಾರಿಸಿದ್ದಾರೆ (Robbers shot). ಮೂಲತಃ ಮಂಗಳೂರು (Mangaluru) ಮೂಲದ ಕುರ್ತಾ ಅಲಿಯಾಸ್ ಭರತಕುಮಾರ ಹಾಗೂ ಫಾರೂಕ್ ಅಲಿಯಾಸ್ ಟೊಮೆಟೊ ಫಾರೂಕ್ ಕಾಲಿಗೆ ಗುಂಡು ಹಾರಿಸಲಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ನ.೮ರಂದು ೧೫ ಜನರ ಗ್ಯಾಂಗ್ ಕಾರು ಅಡ್ಡಗಟ್ಟಿ ಸಾಂಗ್ಲಿ (Sangli) ಮೂಲದ ರಾಹುಲ್ ಸುರ್ವೆ ಎಂಬುವವರ ಕಾರು ಅಡ್ಡಗಟ್ಟಿ ದರೋಡೆ ಮಾಡಿತ್ತು. ಹುಬ್ಬಳ್ಳಿಯ ರೈಲ್ವೆ ನಿಲ್ದಾಣದ ಹತ್ತಿರ ಕಾರು ಚಾಲಕನಿಗೆ ಬೆದರಿಕೆ ಹಾಕಿ ಫಾರೂಕ್ ಹಾಗೂ ಭರತ್ ಗ್ಯಾಂಗ್ ದರೋಡೆ ಮಾಡಿತ್ತು. ಹುಬ್ಬಳ್ಳಿ ಶಹರ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿತ್ತು. ಈ ಪ್ರಕರಣವನ್ನು ಹುಬ್ಬಳ್ಳಿ-ಧಾರವಾಡ ಸಿಸಿಬಿ ಪೊಲೀಸರಿಗೆ ಹಸ್ತಾಂತರಿಸಲಾಗಿತ್ತು.
ವಿಡಿಯೋ ಸಹಿತ ಇದನ್ನೂ ಓದಿ : ಕೈಗಾದಲ್ಲಿ ಇನ್ನೊಂದು ಬಸ್ಸಿಗೆ ಬೆಂಕಿ
ಪ್ರಕರಣದ ತನಿಖೆ ಕೈಗೊಂಡ ಸಿಸಿಬಿ ಪೊಲೀಸರು ಆರೋಪಿಗಳ ಶೋಧ ಕಾರ್ಯ ನಡೆಸಿತ್ತು. ೧೫ ಜನರ ಗ್ಯಾಂಗ್ ನಲ್ಲಿ ಇಬ್ಬರನ್ನು ಮಂಗಳೂರಿನಲ್ಲಿ ಹುಬ್ಬಳ್ಳಿ -ಧಾರವಾಡ ಸಿಸಿಬಿ ಪೊಲೀಸರು ಬಂಧಿಸಿದ್ದರು. ನಿನ್ನೆ ರವಿವಾರ ರಾತ್ರಿ ಸ್ಥಳ ಮಹಜರು ಮಾಡೋ ವೇಳೆ ಬಂಧಿತ ಆರೋಪಿಗಳು ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿ ಪರಾರಿಯಾಗಲು ಯತ್ನಿಸಿದ್ದರು. ಸಿಸಿಬಿ ಇನ್ಸಪೆಕ್ಟರ್ ಮಾರುತಿ ಗುಳ್ಳಾರಿ ಮತ್ತು ಧಾರವಾಡ (Dharwad) ಶಹರ ಠಾಣೆಯ ಪಿಎಸೈ ಸ್ವಾತಿ ಮುರಾರಿ ಅವರು ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಆದಾಗ್ಯೂ ಆರೋಪಿಗಳು ಪರಾರಿಯಾಗಲು ಯತ್ನಿಸಿದಾಗ ಆರೋಪಿಗಳ ಕಾಲಿಗೆ ಮೂರು ಗುಂಡು ಹಾರಿಸಿದ್ದಾರೆ (Robbers shot). ಫಾರೂಕ್ ಕಾಲಿಗೆ ಎರಡು ಮತ್ತು ಭರತ್ ಕಾಲಿ ಒಂದು ಗುಂಡು ತಗುಲಿದೆ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್.ಶಶಿಕುಮಾರ ತಿಳಿಸಿದ್ದಾರೆ.
ವಿಡಿಯೋ ಸಹಿತ ಇದನ್ನೂ ಓದಿ : ಸ್ಕೂಬಾ ಡೈವಿಂಗ್ ಮಾಡಿದ ನಟ ಡಾಲಿ ಧನಂಜಯ್
ಘಟನೆಯಲ್ಲಿ ಮೂವರು ಪೊಲೀಸ್ ಸಿಬ್ಬಂದಿಗೆ ಗಾಯವಾಗಿದೆ. ಗಾಯಾಳುಗಳಿಗೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ (Hubballi KIMS) ಚಿಕಿತ್ಸೆ ನೀಡಲಾಗಿದೆ. ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ ಹುಧಾ ಪೊಲೀಸ್ ಕಮೀಷನರ್ ಎನ್ ಶಶಿಕುಮಾರ ಭೇಟಿ ನೀಡಿ, ಗಾಯಾಳು ಪೊಲೀಸರಿಗೆ ಧೈರ್ಯ ತುಂಬಿದ್ದಾರೆ.
ವಿಡಿಯೋ ಸಹಿತ ಇದನ್ನೂ ಓದಿ : ಮನೆಗೆ ಬೆಂಕಿ ತಗುಲಿ ಅಪಾರ ಹಾನಿ
ನಟೋರಿಯಸ್ ಫಾರೂಕ್ ಮೇಲೆ ವಿವಿಧ ಪೊಲೀಸ್ ಠಾಣೆಯಲ್ಲಿ ೧೭ಕ್ಕೂ ಹೆಚ್ಚು ಪ್ರಕರಣ ದಾಖಲಾಗಿವೆ. ಮಂಗಳೂರು ಸೇರಿದಂತೆ ರಾಜ್ಯ, ಹೊರ ರಾಜ್ಯದಲ್ಲಿ ಕೇಸ್ ದಾಖಲಾಗಿವೆ. ಭರತ್ ಮೇಲೂ ಉತ್ತರ ಕನ್ನಡ (Uttara Kannada) ಜಿಲ್ಲೆಯ ಯಲ್ಲಾಪುರ (Yallapur), ಹಾವೇರಿ (Haveri) ಜಿಲ್ಲೆಯ ಬ್ಯಾಡಗಿ (Byadagi) ಸೇರಿದಂತೆ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೇಸ್ ದಾಖಲಾಗಿವೆ. ಇವರ ಸಹಚರರ ಬಂಧನಕ್ಕೆ ಜಾಲ ಬೀಸಲಾಗಿದೆ. ಮಂಗಳೂರು, ಬೆಂಗಳೂರು(Bengaluru), ಕೇರಳ (Kerala) ಮೂಲದವರು ಈ ದರೋಡೆಯಲ್ಲಿ ಭಾಗಿಯಾಗಿರುವ ಶಂಕೆ ಇದೆ. ಅವರ ಪತ್ತೆಗೆ ಮಹಾರಾಷ್ಟ್ರ(Maharashtra), ಮಂಗಳೂರು ಮತ್ತಿತರ ಕಡೆ ಆರೋಪಿಗಳ ಪತ್ತೆಗೆ ತಂಡಗಳನ್ನು ಕಳಿಸಲಾಗಿದೆ. ಆದಷ್ಟು ಬೇಗ ಉಳಿದ ಆರೋಪಿಗಳನ್ನು ಬಂಧಿಸುತ್ತೇವೆ ಎಂದು ಹುಬ್ಬಳ್ಳಿಯಲ್ಲಿ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಹೇಳಿಕೆ ನೀಡಿದ್ದಾರೆ.
ವಿಡಿಯೋ ಸಹಿತ ಇದನ್ನೂ ಓದಿ : ಕೇರಳ, ಗೋವಾ ಬಿಟ್ಟು ಮುರ್ಡೇಶ್ವರಕ್ಕೆ ಮೋಜು-ಮಸ್ತಿಗೆ ಬರಲಿ