ಕಾರವಾರ (Karwar) : ಪಣಜಿಯ (Panjim) ಕುಖ್ಯಾತ ಕ್ರಿಮಿನಲ್ ಸಿದ್ದಿಕ್ ಎಂದು ಕರೆಯಲ್ಪಡುವ ಸುಲೇಮಾನ್ ಮೊಹಮ್ಮದ್ ಖಾನ್ (೩)  ಎಂಬುವವನಿಂದ ಉತ್ತರ ಕನ್ನಡ (Uttara Kannada) ಮೂಲದ ವಜಾಗೊಂಡ ಭಾರತೀಯ ರಿಸರ್ವ್ ಬೆಟಾಲಿಯನ್ (IRBN) ಕಾನ್‌ಸ್ಟೆಬಲ್ ಅಮಿತ್ ನಾಯ್ಕ ೩ ಕೋಟಿ ರೂ.ಗಳನ್ನು ಪಡೆದು ಗೋವಾ (Goa) ತ್ಯಜಿಸಲು ಯೋಜಿಸಿರುವುದು ಬೆಳಕಿಗೆ ಬಂದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಸಿದ್ದಿಕ್ ಪೊಲೀಸ್ ಕಸ್ಟಡಿಯಿಂದ ಪರಾರಿಯಾಗಲು ಸಹಾಯ ಮಾಡಿದ ನಾಯ್ಕ, ತನಗೆ ಕೌಟುಂಬಿಕ ಸಮಸ್ಯೆಗಳಿವೆ ಎಂದು ವಿಚಾರಣೆ ವೇಳೆ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದ್ದಾನೆ. ೩ ಕೋಟಿ ರೂಪಾಯಿಯೊಂದಿಗೆ ಅಮಿತ್‌ ನಾಯ್ಕ ಎಲ್ಲರಿಂದ ದೂರವಿರಲು ಬಯಸಿದ್ದರು ಮತ್ತು ಗೋವಾಕ್ಕೆ ಹಿಂತಿರುಗಲು ಬಯಸಲಿಲ್ಲ” ಎಂದು ಆರೋಪಿಯನ್ನು ವಿಚಾರಣೆ ನಡೆಸಿದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಇಂಗ್ಲೀಷ್‌ ದೈನಿಕ ಟೈಮ್ಸ್‌ ಆಫ್‌ ಇಂಡಿಯಾಗೆ ತಿಳಿಸಿದ್ದಾರೆ. ಈ ಕುರಿತು ಟೈಮ್ಸ್‌ ಆಫ್‌ ಇಂಡಿಯಾ ವರದಿ ಮಾಡಿದೆ. ಬಂದ ಹಣದಲ್ಲಿ ಸ್ವಲ್ಪ ಆಸ್ತಿ ಖರೀದಿಸಿ ಕುಟುಂಬದಿಂದ ದೂರ ಉಳಿಯಲು ನಾಯ್ಕ ಯೋಜಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ : child trafficking/ ಕಾರವಾರದ ದಂಪತಿಗೆ ೫ ಲ.ರೂ.ಗೆ ಮಗು ಮಾರಾಟ

ಆರೋಪಿ  ಅಪರಾಧ ವಿಭಾಗದ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದಕ್ಕಾಗಿ ಗೋವಾ ಪೊಲೀಸರು ಶನಿವಾರ ಅಮಿತ್‌ ನಾಯ್ಕ್‌ ಅವರನ್ನು ವಜಾಗೊಳಿಸಿ  ಬಂಧಿಸಿದ್ದರು. ಬಂಧನದ ನಂತರ ಅಮಿತ್‌ ನಾಯ್ಕ ಭಾನುವಾರ ಆತ್ಮಹತ್ಯೆಗೆ ಯತ್ನಿಸಿದ್ದರು. ಬಂಧನದಲ್ಲಿದ್ದಾಗ ಶೌಚಾಲಯ ಸ್ವಚ್ಛಗೊಳಿಸುವ ದ್ರವ ಸೇವಿಸಿದ್ದರು. ತಕ್ಷಣ ಅವರನ್ನು ಗೋವಾ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಒಮ್ಮೆ ಪೊಲೀಸ್ ಕಸ್ಟಡಿಗೆ ಮರಳಿದ ನಂತರ ಪ್ರಕರಣದಲ್ಲಿ ಮತ್ತೊಮ್ಮೆ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ : ಕಾರವಾರದ ದಂಪತಿಗೆ ೫ ಲ.ರೂ.ಗೆ ಮಗು ಮಾರಾಟ

ಅಮಿತ್‌ ನಾಯ್ಕ ೨೦೧೩ ರಲ್ಲಿ ಗೋವಾ ಪೊಲೀಸ್‌ ಇಲಾಖೆಗೆ ಸೇರಿದ್ದರು.  ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿದ್ದ ಅಮಿತ ನಾಯ್ಕ ಅವರ ಕುಟುಂಬವು ಗೋವಾಕ್ಕೆ ಸ್ಥಳಾಂತರಗೊಂಡಿತ್ತು. ಗೋವಾದಲ್ಲಿಯೇ ಅಮಿತ ನಾಯ್ಕ ಜನಿಸಿದ್ದರು.  ಅವರ ತಾಯಿ ಮತ್ತು ತಂದೆ ವ್ಯಾಪಾರ ಮಾಡುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ :   ಪದ್ಮಶ್ರೀ ಪುರಸ್ಕೃತ ತುಳಸಿ ಗೌಡ ಇನ್ನಿಲ್ಲ

ಕೀಲಿಯೊಂದಿಗೆ ಪೊಲೀಸ್ ಲಾಕಪ್ ತೆರೆದ ಅಮಿತ ನಾಯ್ಕ, ಆರೋಪಿಯನ್ನು ತನ್ನ ದ್ವಿಚಕ್ರ ವಾಹನದಲ್ಲಿ ಹುಬ್ಬಳ್ಳಿಗೆ (Hubballi) ಕರೆದೊಯ್ದಿದ್ದಾನೆ. ಹುಬ್ಬಳ್ಳಿ ತಲುಪಿದ ನಂತರ ಸಿದ್ದಿಕ್‌ ಅಮಿತ ನಾಯ್ಕನಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಅಮಿತ್‌ ನಾಯ್ಕರ  ಯೋಜನೆಗಳು ಭಗ್ನಗೊಂಡವು. ನಂತರ ಹುಬ್ಬಳ್ಳಿ ಪೊಲೀಸರ ಮುಂದೆ ಶರಣಾಗಲು ನಿರ್ಧರಿಸಿದ್ದಾರೆ. ಆರೋಪಿಗಳು ಪೊಲೀಸ್ ಕಸ್ಟಡಿಯಿಂದ ಪರಾರಿಯಾಗಲು ಸಹಾಯ ಮಾಡಿದ್ದಕ್ಕಾಗಿ ಹಳೆ ಗೋವಾ ಪೊಲೀಸರು ಅಮಿತ ನಾಯ್ಕ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ವಿಡಿಯೋ ಸಹಿತ ಇದನ್ನೂ ಓದಿ :  ಚಲಿಸುತ್ತಿದ್ದ ಶಾಲಾ ವಾಹನಕ್ಕೆ ಬೆಂಕಿ; ಮುಂದೇನಾಯ್ತು?

ಶನಿವಾರ ಗೋವಾ ಪೊಲೀಸರು ಅಮಿತ ನಾಯ್ಕರನ್ನು ಗೋವಾಕ್ಕೆ ಕರೆತಂದಿದ್ದು, ಪ್ರಾಥಮಿಕ ವಿಚಾರಣೆಯ ವೇಳೆ, ಕ್ರೈಂ ಬ್ರಾಂಚ್ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡಲು ಸಿದ್ದಿಕ್ ೩ ಕೋಟಿ ರೂಪಾಯಿ ನೀಡುವುದಾಗಿ ಭರವಸೆ ನೀಡಿದ್ದಾಗಿ ಅವರು ಬಹಿರಂಗಪಡಿಸಿದ್ದಾರೆ. ಬೆಂಗಳೂರಿಗೆ (Bengaluru) ಬಂದ ನಂತರ ಸಂಪೂರ್ಣ ಹಣವನ್ನು ನೀಡುವುದಾಗಿ ಸಿದ್ದಿಕ್ ಭರವಸೆ ನೀಡಿದ್ದಾಗಿ  ಅಮಿತ್‌ ನಾಯ್ಕ ಹೇಳಿಕೊಂಡಿದ್ದಾರೆ. ಸದ್ಯ ಸಿದ್ದಿಕ್ ಬಂಧನಕ್ಕಾಗಿ ಹಲವು ತಂಡಗಳನ್ನು ರಚಿಸಲಾಗಿದೆ. ಆದರೆ ಗೋವಾ ಪೊಲೀಸರಿಗೆ ಇದುವರೆಗೆ ಆರೋಪಿಯನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ.

ಇದನ್ನೂ ಓದಿ : ವಿದ್ಯಾಂಜಲಿ ಶಾಲೆಗೆ ಮತ್ತೊಂದು ರಾಷ್ಟ್ರ ಮಟ್ಟದ ಪ್ರಶಸ್ತಿ