ಭಟ್ಕಳ (Bhatkal) : ತಾಲೂಕಿನ ಜಾಲಿ ಸರಕಾರಿ ಪ್ರೌಢಶಾಲೆಯ (Government Higschool) ೨೧ ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪರೀಕ್ಷೆಗೆ (SSLC exam) ಹಾಜರಾಗಿದ್ದು, ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗುವುದರ ಮೂಲಕ ಶಾಲಾ ಫಲಿತಾಂಶ (SSLC result) ಶೇ.೧೦೦ ಆಗಿದೆ. ಈ ಸರ್ಕಾರಿ ಪ್ರೌಢಶಾಲೆ ನಿರಂತರ ಮೂರನೇ ಬಾರಿ ಈ ಸಾಧನೆ ಮಾಡಿ ಹ್ಯಾಟ್ರಿಕ್ ಸಾಧಿಸಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
೨೧ ವಿದ್ಯಾರ್ಥಿಗಳಲ್ಲಿ ೯ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, ೧೧ ವಿದ್ಯಾರ್ಥಿಗಳು ಪ್ರಥಮ ದರ್ಜೆ ಮತ್ತು ಓರ್ವ ವಿದ್ಯಾರ್ಥಿ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ತೃಪ್ತಿ ಜಟ್ಟ ನಾಯ್ಕ (೬೦೫ಅಂಕ/೯೬.೮%) ಶಾಲೆಗೆ ಪ್ರಥಮ, ಧನಶ್ರೀ ಈರಯ್ಯ ಗೊಂಡ (೫೯೭/೯೫.೫೨%) ದ್ವಿತೀಯ ಮತ್ತು ಕೌಶಿಕ್ ಕುಪ್ಪಯ್ಯ ನಾಯ್ಕ (೫೯೫/೯೫.೨%) ಶಾಲೆಗೆ ತೃತೀಯ ಸ್ಥಾನ ಪಡೆದಿದ್ದಾರೆ.
ಇದನ್ನೂ ಓದಿ : Judgement/ ತಂದೆ-ಮಗ ದೋಷಿ ಎಂದು ತೀರ್ಪಿತ್ತ ನ್ಯಾಯಾಲಯ
ಜಾಲಿ ಸರಕಾರಿ ಪ್ರೌಢಶಾಲೆ ಪ್ರಾರಂಭವಾದಾಗಿನಿಂದ ಇದುವರೆಗಿನ ೧೫ ಎಸ್ ಎಸ್ ಎಲ್ ಸಿ ಬ್ಯಾಚ್ ಗಳಲ್ಲಿ ೧೦ ಸಲ ನೂರಕ್ಕೆ ನೂರರಷ್ಟು ಸಾಧನೆ (SSLC result) ಮಾಡಿದೆ. ವಿದ್ಯಾರ್ಥಿಗಳ ಈ ಸಾಧನೆಗೆ ಶಾಲಾ ಮುಖ್ಯೋಪಾಧ್ಯಾಯಿನಿ ಮತ್ತು ಶಿಕ್ಷಕ ವೃಂದ, ಎಸ್.ಡಿ.ಎಂ.ಸಿ. ಅಧ್ಯಕ್ಷರು ಮತ್ತು ಸದಸ್ಯರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕ್ಷೇತ್ರ ಸಮನ್ವಯಾಧಿಕಾರಿಗಳು, ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಊರ ನಾಗರಿಕರು ಹಾಗೂ ಸಂಘ ಸಂಸ್ಥೆಗಳ ಮುಖಂಡರು ಹರ್ಷ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ICSE result/ ಐಸಿಎಸ್‌ಇ ಪರೀಕ್ಷೆಯಲ್ಲಿ ವಿದ್ಯಾಂಜಲಿ ಶಾಲೆ ಸಾಧನೆ