ಭಟ್ಕಳ (Bhatkal) : ಗುಳಿಗೆ ಸೇವಿಸಿ ಅಸ್ವಸ್ಥನಾದ ಮೀನುಗಾರ (Fisherman) ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಕೊನೆಯುಸಿರೆಳೆದ ಘಟನೆ ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಮೀನುಗಾರಿಕೆ ಕೆಲಸ ಮಾಡಿಕೊಂಡಿರುವ (Fisherman) ನಾನ್ಸಾಯ ಚಮ್ರು ಖರೀಯಾ (೪೭) ಮೃತ ದುರ್ದೈವಿ. ಇವರು ಜಾರ್ಖಂಡ (Jarkhand) ರಾಜ್ಯದ ಸಿಮ್ಡೆಗಾ ಜಿಲ್ಲೆಯವರು. ಕಳೆದ ೪ ತಿಂಗಳ ಹಿಂದಿನಿಂದ ಭಟ್ಕಳದ ತೆಂಗಿನಗುಂಡಿ ಬಂದರಿನಲ್ಲಿ ಮೀನುಗಾರಿಕಾ ಬೋಟಿನಲ್ಲಿ ಕೆಲಸ ಮಾಡಿಕೊಂಡಿದ್ದರು. ಇಂದು ನ. ೧೬ರಂದು ಬೆಳಿಗ್ಗೆ ಜ್ವರ ಬಂದಿದ್ದಕ್ಕೆ ಊಟ ಮಾಡಿ ಗುಳಿಗೆಯನ್ನು ನುಂಗಿ ಅಸ್ವಸ್ಥರಾಗಿದ್ದರು.

ಇದನ್ನೂ ಓದಿ : TV9 Expo/ ಒಳ್ಳೊಳ್ಳೆಯ ರಿಯಲ್ ಎಸ್ಟೇಟ್ ಆಫರ್​; ಉತ್ತಮ ಸ್ಪಂದನೆ

ತಕ್ಷಣ ಅವರನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿ ವೈದ್ಯರು ಪರೀಕ್ಷಿಸಿದಾಗ ಆಸ್ಪತ್ರೆಗೆ ತರುವ ಮುನ್ನವೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಭಟ್ಕಳ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ದೂರು (complaint) ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ (case registered) ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.