ಭಟ್ಕಳ (Bhatkal) : ಪುರಾಣ ಪ್ರಸಿದ್ಧ ಅಳ್ವೆಕೋಡಿ (Alvekodi) ಶ್ರೀ ದುರ್ಗಾಪರಮೇಶ್ವರಿ (Durgaparameshwari) ದೇವಸ್ಥಾನದಲ್ಲಿ ಮಾರಿ ಜಾತ್ರಾ (Mari Jathre) ಮಹೋತ್ಸವ ಆರಂಭಗೊಂಡಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಪ್ರತಿ ಎರಡು ವರ್ಷಕ್ಕೊಮ್ಮೆ ಮಾರಿ ಜಾತ್ರೆ (Mari Jathre) ನಡೆಯುತ್ತಿದ್ದು, ಈವರೆಗೆ ಐದು ಜಾತ್ರೆಯನ್ನ ಯಶಸ್ವಿಯಾಗಿ ನಡೆಸಲಾಗಿದೆ. ಈ ಬಾರಿ ನಡೆಯುತ್ತಿರುವ ಜಾತ್ರೆ ಆರನೆಯದ್ದಾಗಿದೆ. ಈ ಬಾರಿಯೂ ಅಳ್ವೆಕೋಡಿ ಶ್ರೀ ದುರ್ಗಾಪರಮೇಶ್ವರಿ ಸನ್ನಿದಾನದಲ್ಲಿ ಭಕ್ತರ ಸಹಕಾರದಿಂದ ಅತಿ ವಿಜೃಂಭಣೆಯಿಂದ ಜಾತ್ರೆ ನಡೆಯುತ್ತಿದೆ.

ವಿಡಿಯೋ ಸಹಿತ ಇದನ್ನು ಓದಿ : Kannada cinema/ ಭಟ್ಕಳ, ಮುರುಡೇಶ್ವರದಲ್ಲಿ ಕೋಣ ಚಿತ್ರೀಕರಣ

ಮಂಗಳವಾರ ಬೆಳಿಗ್ಗೆ ೬ ಗಂಟೆಗೆ ದೇವತಾ ಪ್ರಾರ್ಥನೆ, ಗಣಪತಿ ಪೂಜೆ, ಪುಣ್ಯಾಹವಾಚನ, ನಾಂದಿ ಸಮಾರಾಧನೆ ನಡೆಯಿತು. ೮ಕ್ಕೆ ಪೂರ್ಣಕಲಶದೊಂದಿಗೆ ಮಾರಿಕಾಂಬೆಗೆ ಪ್ರಾಣ ಪ್ರತಿಷ್ಠಾಪನೆ, ಮಂಗಳಾಷ್ಟಕ, ವೇದಘೋಷ, ವಾದ್ಯಗಳೊಂದಿಗೆ ಮಹಾಮಂಗಳಾರತಿ ನೆರವೇರಿತು. ನಂತರ ಆಡಳಿತ ಕಮಿಟಿ, ಮಾರಿಜಾತ್ರಾ ಕಮಿಟಿಯವರಿಗೆ ಮಾರಿಕಾಂಬ ದೇವಿಯ ಪ್ರಸಾದ ವಿತರಿಸಿ ಭಕ್ತಾದಿಗಳ ಸೇವೆ ಪ್ರಾರಂಭವಾಯಿತು.

ಇದನ್ನು ಓದಿ : ಸಂಸದ ಕಾಗೇರಿ ಭಟ್ಕಳ ಪ್ರವಾಸ

Mankal Vaidyaಸ್ಥಳೀಯ ಶಾಸಕ, ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ದಂಪತಿ ಆಗಮಿಸಿ ಶ್ರೀ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.

ಇದನ್ನು ಓದಿ : ಮುರುಡೇಶ್ವರಕ್ಕೆ ಬಂದಿದ್ದ ಹಿರಿಯ ಪತ್ರಕರ್ತ ನಿಧನ

ಮಧ್ಯಾಹ್ನ ಮಾರಿಕಾಂಬಾ ದೇವಿಯ ಸಾನ್ನಿಧ್ಯದಲ್ಲಿ ನೈವೇದ್ಯ ಮತ್ತು ಮಹಾಮಂಗಳಾರತಿ ನಡೆದು ಮಹಾ ಅನ್ನಸಂತರ್ಪಣೆ ಪ್ರಾರಂಭವಾಯಿತು. ತಾಲೂಕು ಜಿಲ್ಲೆ ನೆರೆ ಜಿಲ್ಲೆಗಳಿಂದ ಭಕ್ತರು ಆಗಮಿಸಿ ಶ್ರೀ ದೇವಿಗೆ ಸೇವೆ ಸಲ್ಲಿಸುತ್ತಿರುವುದು ಕಂಡುಬಂತು. ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ರಾಮ ಮೊಗೇರ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯುತ್ತಿವೆ.

ಇದನ್ನು ಓದಿ : Mahaganapati/ ಜ. ೧೯ರಂದು ವರ್ಧಂತ್ಯುತ್ಸವ

ಸಂಜೆ ೪.೩೦ಕ್ಕೆ ಭಜನಾ ಕಾರ್ಯಕ್ರಮ ಇರುವುದು. ರಾತ್ರಿ ೯ ಗಂಟೆಗೆ ಪ್ರಸಿದ್ಧ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಸುಂಕದಕಟ್ಟೆ ಇವರಿಂದ ಸಂಪೂರ್ಣ ದೇವಿ ಮಹಾತ್ಮ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

ಇದನ್ನು ಓದಿ : Mankal Vaidya/ ಕೇಂದ್ರ ಸರ್ಕಾರ ಯಾರಿಗೂ ವಾಹನ ನೀಡಿಲ್ಲ

ನಿನ್ನೆ ಜ.೧೩ರಂದು ಸೋಮವಾರ ಮಧ್ಯಾಹ್ನ ಎಲ್ಲಾ ಭಕ್ತಾದಿಗಳು ಶ್ರೀ ಕಂಚಿನ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಕಾಯಿ, ಹೂ, ಹಣ್ಣು, ಬಳೆ, ಸೀರೆ, ಅರಿಸಿನ, ಕುಂಕುಮ ಇತ್ಯಾದಿ ಸುವಾಸಿನಿ ದ್ರವ್ಯಗಳೊಂದಿಗೆ ತೆರಳಿದ್ದರು. ಶ್ರೀ ಕಂಚಿನ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪೂಜೆಯನ್ನು ಕೊಟ್ಟು ಅಲ್ಲಿಂದ ಪ್ರಸಾದವನ್ನು ತೆಗೆದುಕೊಂಡು ಬೈಕ್‌ ರ್ಯಾಲಿಯಲ್ಲಿ ಬರಲಾಯಿತು.  ಶಿರಾಲಿ, ಸಾರದೊಳೆ, ಮಾವಿನಕಟ್ಟೆ, ಯಕ್ಷಿಮನೆ, ಸಣಬಾವಿ, ಶ್ರೀರಾಮ ಭಜನಾ ಮಂದಿರಕ್ಕೆ ಬಂದು ಅಲ್ಲಿಂದ ವಾದ್ಯಾದಿಗಳೊಂದಿಗೆ ಕಾಲ್ನಡಿಗೆಯಲ್ಲಿ ಹೊರೆ ಕಾಣಿಕೆಯೊಂದಿಗೆ ದೇವಸ್ಥಾನಕ್ಕೆ ಬರಲಾಯಿತು.

ಇದನ್ನು ಓದಿ : ಭಟ್ಕಳದಲ್ಲಿ “ಭೂ ಸುರಕ್ಷಾ” ಯೋಜನೆಗೆ ಚಾಲನೆ

ಹೊರೆ ಕಾಣಿಕೆ ಸ್ವೀಕಾರ ನಂತರ ಮಾರಿಕಾಂಬಾ ಮೂರ್ತಿ ಮತ್ತು ಮಾತಂಗಿ ಮೂರ್ತಿಯನ್ನು ಸಾಯಂಕಾಲ ೭ ಘಂಟೆ ಸುಮಾರಿಗೆ ಗದ್ದುಗೆಗೆ ಕರೆದೊಯ್ಯಲಾಯಿತು. ಶ್ರೀ ದೇವಿಯಲ್ಲಿ ದೀಪ ಸ್ಥಾಪನೆ, ಮಾಹಾಪ್ರಾರ್ಥನೆ ಫಲ ಸಮರ್ಪಣೆ, ಅಡುಗೆ ಛತ್ರದಲ್ಲಿ ಒಲೆಗೆ ಅಗ್ನಿ ಪ್ರತಿಷ್ಠಾಪನೆ ಹಾಗೂ ಮಾರಿಕಾಂಬ ಪ್ರತಿಷ್ಠಾಪನಾ ಸ್ಥಾನದಲ್ಲಿ ಗಣಪತಿ ಪೂಜನಾ, ಪುಣ್ಯಾಹವಾಚನ, ಸ್ಥಳ ಶುದ್ಧಿ, ರಾಕ್ಷೋಘ್ನ ಹವನ, ದೀಕ್ಷಾಬಲಿ, ಹೊಸ ಆಭರಣಗಳ ಸಮರ್ಪಣೆ ನಡೆಯಿತು.

ಇದನ್ನು ಓದಿ : ಜ.೧೪ರಿಂದ ಭಂಡೂರು ಜಾತ್ರಾ ಮಹೋತ್ಸವ

ನಾಳೆ ಜ.೧೫ರ ಬುಧವಾರ ಬೆಳಿಗ್ಗೆ ೭ರಿಂದ ಸುಪ್ರಭಾತ ಪೂಜೆ, ಭಕ್ತಾದಿಗಳಿಂದ ಸೇವೆ ಪ್ರಾರಂಭವಾಗಲಿದೆ. ೧೧.೩೦ಕ್ಕೆ ಮಾರಿಕಾಂಬಾ ದೇವಿಯಲ್ಲಿ ನೈವೇದ್ಯ ಮಹಾಮಂಗಳಾರತಿ ಮತ್ತು ಅನ್ನಸಂತರ್ಪಣೆ ಜರುಗುವುದು. ಸಂಜೆ ೫ ಗಂಟೆಗೆ ಶ್ರೀ ಮಾರಿಕಾಂಬಾ ಮೂರ್ತಿ ಮತ್ತು ಶ್ರೀ ಮಾತಾಂಗಿ ಮೂರ್ತಿಯ ವಿಸರ್ಜನಾ ಮೆರವಣಿಗೆ ಪ್ರಾರಂಭವಾಗಲಿದೆ. ಚಂಡೆ, ಗೊಂಬೆ ಕುಣಿತ, ವಿವಿಧ ಸ್ತಬ್ಧ ಚಿತ್ರಗಳೊಂದಿಗೆ ಭವ್ಯ ಮೆರವಣಿಗೆ ನಡೆಯಲಿದೆ. ದಾರಿಯ ಮಧ್ಯ ಗಡಿವೀರ ಸ್ಥಳ, ಮಠದ ಜಟ್ಟ ಸ್ಥಳ, ತಣ್ಣಿರು ಕಟ್ಟೆ‌, ದೇವಿ ಅಮ್ಮನಮನೆ ಕುಶ್ಚಾಂಡ, ದೊಂದಿ, ಕುಂಕುಮ ಇತ್ಯಾದಿ ನಡೆಯಲಿದೆ.

ಇದನ್ನು ಓದಿ : ಕಾರು ಪಲ್ಟಿಯಾಗಿ ಭಟ್ಕಳ ದಂಪತಿ ಸಾವು

ರಾತ್ರಿ ೯ ಗಂಟೆಗೆ ಕಂಚಿನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮಾರಿ ಮೂರ್ತಿ ಮತ್ತು ಮಾತಾಂಗಿ ಮೂರ್ತಿಗಳಿಗೆ ದೃಷ್ಟಿ, ದೀಪಾಗ್ನಿ ನಡೆಯಲಿದೆ. ನಂತರ ಪೂಜೆ ಪ್ರಸಾದ ಸ್ವೀಕಾರ, ಮಾತಾಂಗಿ ಮೂರ್ತಿಗೆ ಸಮಸ್ತ ಭಜಕರಿಂದ ಬಲಿ ಪೂಜೆ, ಇಡಗಾಯಿ ಒಡೆಯುವುದು ಆದ ನಂತರ ಮಾತಂಗಿ ಮೂರ್ತಿಯನ್ನು ವೆಂಕಟಾಪುರ ನದಿಯಲ್ಲಿ ವಿಸರ್ಜನೆ ಮಾಡಲಾಗುತ್ತದೆ.

ಇದನ್ನು ಓದಿ : Chlorine leakage/ ದಾಖಲಾಯ್ತು ದೂರು; ಅಸ್ವಸ್ಥರು ಯಾರ್ಯಾರು?

ಜ.೧೬ರಂದು ಗುರುವಾರ ಪ್ರಧಾನ ಮಾರಿಕಾಂಬ ಮೂರ್ತಿಗೆ ಕಲಾಸಂಕೋಚ ಹವನ ಮಾಡಿ ವಿಸರ್ಜಿಸಲಾಗುತ್ತದೆ. ಶ್ರೀ ದೇವಿಯ ದ್ವಾದಶಿ ಕಲಶ ಸಂಪ್ರೋಕ್ಷಣೆ ನಡೆಯಲಿದೆ ಎಂದು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ತಿಮ್ಮಪ್ಪ ಹೊನ್ನಿಮನೆ, ನಾರಾಯಣ ದೈಮನೆ, ಬಿಳಿಯ ನಾಯ್ಕ, ಹನುಮಂತ ನಾಯ್ಕ. ದೇವಪ್ಪ ಮೊಗೇರ, ಬಾಬು ಅಳಿಕೂಸನ್ಮನೆ, ವಿಠಲ ದೈಮನೆ, ಯಾದವ ಮೊಗೇರ ಇನ್ನಿತರರು ಉಪಸ್ಥಿತರಿದ್ದರು.

ಈ ಸುದ್ದಿಗೆ ಸಂಬಂಧಿಸಿದ ವಿಡಿಯೋವನ್ನು ಯೂಟ್ಯೂಬ್ ಚಾನೆಲ್ಇನ್ಸ್ಟಾಗ್ರಾಂ ಮತ್ತು ಫೇಸ್‌ಬುಕ್‌ ನಲ್ಲಿ ವೀಕ್ಷಿಸಬಹುದು.