ಭಟ್ಕಳ (Bhatkal) : ಕರ್ನಾಟಕ ಲೋಕಾಯುಕ್ತ (Lokayukta) ವಿಶೇಷ ತನಿಖಾದಳ ಮುಖ್ಯಸ್ಥ ಎಡಿಜಿಪಿ (ADGP) ಎಂ. ಚಂದ್ರಶೇಖರ ಅವರನ್ನು ಕೂಡಲೇ ಭಾರತೀಯ ಸೇವೆಯಿಂದ ಅಮನತುಗೊಳಿಸಿ ಶಿಸ್ತು ಕ್ರಮ ಕೈಗೊಳ್ಳುವಂತೆ ಜಾತ್ಯತೀತ ಜನತಾದಳ ಆಗ್ರಹಿಸಿದೆ (JDS Demands). ಭಟ್ಕಳ ಘಟಕದ ವತಿಯಿಂದ ಸಹಾಯ ಆಯುಕ್ತರ ಮೂಲಕ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಗುರುವಾರ ಮನವಿ ಸಲ್ಲಿಸಲಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಕರ್ನಾಟಕ ರಾಜ್ಯದಲ್ಲಿ ಲೋಕಾಯುಕ್ತ ವಿಶೇಷ ತನಿಖಾ ಮುಖ್ಯಸ್ಥ ಎಡಿಜಿಪಿ ಆಗಿ ಕಾರ್ಯನಿರ್ವಹಿಸುತ್ತಿರುವ ಎಂ. ಚಂದ್ರಶೇಖರ ಭ್ರಷ್ಟಚಾರ ಸುಲಿಗೆ, ದುರ್ನಡತೆ ಮುಂತಾದ ಕ್ರಿಮಿನಲ್ ಕೇಸಗಳಲ್ಲಿ ಭಾಗಿಯಾಗಿದ್ದಾರೆ. ಅವರನ್ನು ಅಮಾನತುಗೊಳಿಸಿ ಹಾಗೂ ಉನ್ನತ ಮಟ್ಟದ ತನಿಖೆ ನಡೆಸಿ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಜೆಡಿಎಸ್ ಭಟ್ಕಳ ಘಟಕ ಆಗ್ರಹಿಸಿದೆ (JDS demands).
ಇದನ್ನೂ ಓದಿ : ಹೊಳೆಯಲ್ಲಿ ಬಿದ್ದು ಕಾಣೆಯಾಗಿದ್ದ ಕೃಷಿಕನ ಮೃತದೇಹ ಪತ್ತೆ
ಈಗಾಗಲೇ ಸೆ.೩೦ ರಂದು ಕರ್ನಾಟಕ ಜನತಾದಳ ಜಾತ್ಯತೀತ ಪಕ್ಷದ ಶಾಸಕಾಂಗ ನಾಯಕ ಸುರೇಶ ಬಾಬು ಸಿ. ಬಿ. ಅವರು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದು ಈ ಭ್ರಷ್ಟ ಅಧಿಕಾರಿಯ ಚಾರಿತ್ರ್ಯವನ್ನು ವಿವರವಾಗಿ ತಿಳಿಸಿದ್ದಾರೆ. ಈ ಎಲ್ಲಾ ಅಂಶಗಳನ್ನು ಮನಗಂಡು ಭ್ರಷ್ಟ ಅಧಿಕಾರಿಯ ಕಾರ್ಯವೈಖರಿಯನ್ನು ಜೆ ಡಿ ಎಸ್ ಪಕ್ಷ ಭಟ್ಕಳ ಘಟಕ ಖಂಡಿಸುತ್ತದೆ. ಅವರ ವಿರುದ್ಧ ಕ್ರಮ ಜರುಗಿಸಿ ಕೇಂದ್ರ ಗೃಹ ಸಚಿವಾಲಯಕ್ಕೆ ಸೂಕ್ತ ಪ್ರಸ್ತಾವನೆಯನ್ನು ರಾಜ್ಯ ಸರಕಾರದ ಶಿಫಾರಸ್ಸಿನೊಂದಿಗೆ ಕಳುಹಿಸಬೇಕೆಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ : ಅಕ್ಟೋಬರ್ ೩ರಂದು ವಿವಿಧೆಡೆ ಅಡಿಕೆ ಧಾರಣೆ
ಮನವಿ ಬಳಿಕ ಭಟ್ಕಳ ಘಟಕದ ಜೆಡಿಎಸ್ ಅಧ್ಯಕ್ಷ ಈಶ್ವರ ನಾಯ್ಕ ಮಾತನಾಡಿ, ನಮ್ಮ ಜೆಡಿಎಸ್ ನಾಯಕ ಕುಮಾರಸ್ವಾಮಿಯವರಿಗೆ (HD Kumaraswamy) ಕರ್ನಾಟಕ ಲೋಕಾಯುಕ್ತ ವಿಶೇಷ ತನಿಖಾದಳ ಮುಖ್ಯಸ್ಥ ಎಡಿಜಿಪಿ ಎಂ. ಚಂದ್ರಶೇಖರ್ ಅವಹೇಳನಕಾರಿ ಶಬ್ದ ಉಪಯೋಗಿಸಿ ಮಾತನಾಡಿದ್ದಾರೆ. ಇದನ್ನು ನಮ್ಮ ಭಟ್ಕಳ ಘಟಕ ಖಂಡಿಸುತ್ತದೆ ಎಂದರು.
ಇದನ್ನೂ ಓದಿ : ಪ್ಲಾಸ್ಟಿಕ್ ಮುಕ್ತ ಬೀಚ್ ಅಭಿಯಾನ ಕೈಗೊಂಡ ಎನ್ಎಸ್ಎಸ್
ಕುಮಾರಸ್ವಾಮಿಯವರು ಉನ್ನತ ಹುದ್ದೆಯಲ್ಲಿದ್ದಾರೆ. ಇಂತಹವರ ವಿರುದ್ಧ ನೀಚ ಹೇಳಿಕೆ ನೀಡಿರುವ ಭ್ರಷ್ಟ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು.
– ಜೆಡಿಎಸ್ ಮುಖಂಡ ಪಾಂಡು ನಾಯ್ಕ.
ಇದನ್ನೂ ಓದಿ : ಬಿಜೆಪಿಯಿಂದ ಶಾಲಾವರಣ ಸ್ವಚ್ಛತೆ