ಜೋಯಿಡಾ (Joida) : ಭೌಗೋಳಿಕ ಪ್ರದೇಶ ವ್ಯಾಪ್ತಿಯಿಂದ ಎರಡನೇ ಅತಿ ದೊಡ್ಡ ತಾಲೂಕು ಎಂಬ ಹೆಗ್ಗಳಿಕೆ ಇರುವುದು ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿಗೆ. ಆದರೆ ಇದೊಂದು ಕಗ್ಗಾಡಿನ ಪ್ರದೇಶ. ಅತಿ ಹಿಂದುಳಿದ ತಾಲೂಕು ಪಟ್ಟ ಬೇರೆ. ಇಂತಹ ಕಗ್ಗಾಡಿನಲ್ಲಿ ಬೆಳೆದು, ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ (Hubballi) ಮಾಧ್ಯಮ ಕೃಷಿ ಮಾಡುತ್ತಿರುವ ಪತ್ರಕರ್ತ ಪ್ರಕಾಶ ಶೇಟ ಅವರಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ (Media award) ಅರಸಿ ಬಂದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
೨೦೦೦ನೇ ಇಸ್ವಿಯಲ್ಲಿ ಮಾಧ್ಯಮ ಕ್ಷೇತ್ರಕ್ಕೆ ಕಾಲಿಟ್ಟ ಪ್ರಕಾಶ ಶೇಟ, ಡಿಸೆಂಬರ್ ೨೦೦೦-೨೦೦೫ರ ವರೆಗೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಶಿರಸಿಯಿಂದ (Sirsi) ಪ್ರಕಟವಾಗುವ ಲೋಕಧ್ವನಿ(Loka Dhvani) ದಿನಪತ್ರಿಕೆಗೆ ಜೋಯಿಡಾ (Joida) ತಾಲೂಕಾ ವರದಿಗಾರನಾಗಿ ಕಾರ್ಯನಿರ್ವಹಿಸಿದ್ದರು.
ಇದನ್ನೂ ಓದಿ: ಭಟ್ಕಳದ ಕುವರನಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ
೨೦೦೩-೨೦೦೪ರವರೆಗೆ ಶಿರಸಿಯಿಂದ ಪ್ರಕಟವಾಗುತ್ತಿದ್ದ ಧ್ಯೇಯನಿಷ್ಠ ಪತ್ರಕರ್ತ ವಾರಪತ್ರಿಕೆಗೆ ಜೋಯಿಡಾ ತಾಲೂಕು ವರದಿಗಾರರಾಗಿದ್ದರು. ೨೦೦೫ರಿಂದ ೨೦೦೭ರ ವರೆಗೆ ಹುಬ್ಬಳ್ಳಿಯಲ್ಲಿ ಉಷಾ ಕಿರಣ ದಿನಪತ್ರಿಕೆಯ ಮುಖ್ಯ ವರದಿಗಾರರಾಗಿದ್ದ ಅವರು, ೨೦೦೭ರಿಂದ ೨೦೧೨ರ ವರೆಗೆ ವಿಜಯ ಕರ್ನಾಟಕ (Vijaya Karnataka) ಗದಗ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸಿದ್ದಾರೆ.
ಇದನ್ನೂ ಓದಿ : ಸಂದೀಪ ಸಾಗರಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ
ಜನವರಿ ೨೦೧೨ರಿಂದ ನವೆಂಬರ್ ೨೦೧೫ರ ವರೆಗೆ ಕನ್ನಡಪ್ರಭ (Kannada Prabha) ದಿನಪತ್ರಿಕೆಯ ಹುಬ್ಬಳ್ಳಿ ಮುಖ್ಯ ವರದಿಗಾರರಾಗಿದ್ದರು. ಜನವರಿ ೨೦೧೬ರಿಂದ ೨೦೧೭ ಸಪ್ಟೆಂಬರ್ ವರೆಗೆ ವಿಶ್ವವಾಣಿ (Vishwavani) ದಿನಪತ್ರಿಕೆಯ ಮುಖ್ಯ ವರದಿಗಾರರಾಗಿದ್ದ ಇವರು, ಮುಂಬಡ್ತಿ ಪಡೆದು ೨೦೧೭ರಿಂದ ೨೦೧೯ ಜನವರಿವರೆಗೆ ದಿನಪತ್ರಿಕೆಯ ಹುಬ್ಬಳ್ಳಿ ಬ್ಯೂರೋ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದಾರೆ. ತದ ನಂತರ ೨೦೧೯ರಿಂದ ೨೦೨೧ ಜನವರಿ ವರೆಗೆ ಸಂಯುಕ್ತ ಕರ್ನಾಟಕ (Samyukta Karnataka) ದಿನಪತ್ರಿಕೆಯ ದಾವಣಗೆರೆ (Davanagere) ಹಾಗೂ ಹುಬ್ಬಳ್ಳಿ (Hubballi) ಸ್ಥಾನಿಕ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ ವಿಜಯವಾಣಿ (Vijayavani) ದಿನಪತ್ರಿಕೆಯ ಹುಬ್ಬಳ್ಳಿ ಸ್ಥಾನಿಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ : ಪ್ರಶಸ್ತಿ ಪಡೆದ ಪತ್ರಕರ್ತರ ಬಗ್ಗೆ ನಿಮಗೆ ಗೊತ್ತಾ?
ಪ್ರಶಸ್ತಿಗಳು : ಕಲಘಟಗಿ (Kalaghatagi) ತಾಲೂಕಿನ ಗಂಬಾಪುರ ಗ್ರಾಮದಲ್ಲಿ ಅನಧಿಕೃತ ಕಲ್ಲು ಕ್ವಾರಿಗಳಿಂದ ಜನರು ಅನುಭವಿಸುತ್ತಿರುವ ಕುರಿತು ಬರೆದ ಸರಣಿ ವರದಿಗೆ ಧಾರವಾಡ (Dharwad) ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಪ್ರಕಾಶ ಶೇಟ ಅವರಿಗೆ ಉತ್ತಮ ವರದಿಗಾರ ಪ್ರಶಸ್ತಿ ನೀಡಿದೆ. ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಿಂದ ಕೊಡ ಮಾಡುವ ೨೦೨೩ನೇ ಸಾಲಿನ ಆರ್.ಎಲ್. ವಾಸುದೇವರಾವ್ ಪ್ರಶಸ್ತಿ ಲಭಿಸಿದೆ.
ಇದನ್ನೂ ಓದಿ : Bus fares/ ರಾಜ್ಯದ ಜನತೆಗೆ ಬಿಗ್ ಶಾಕ್
ಕಾರ್ಯಸಾಧನೆ : ೨೦೦೩ರಲ್ಲಿ ಜೋಯಿಡಾ ತಾಲೂಕಿನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಅಂಗನವಾಡಿ ಮಕ್ಕಳಿಗೆ ನೀಡಬೇಕಾದ ಅಕ್ಕಿಯನ್ನು ಸ್ಥಳೀಯ ರೈಸ್‌ಮಿಲ್‌ಗೆ ರಾತ್ರಿ ವೇಳೆ ಕದ್ದು ಮಾರಾಟ ಮಾಡುತ್ತಿದ್ದ ಹಗರಣ ಬಯಲಿಗೆಳೆದಿದ್ದರು. ಪರಿಣಾಮ ಪಿಡಿಒ ಸಹಿತ ನಾಲ್ವರು ಅಧಿಕಾರಿಗಳು ಅಮಾನತುಗೊಂಡರೆ ರೈಸ್ ಮಿಲ್ ಮಾಲೀಕಗೆ ಶಿಕ್ಷೆಯಾಗಿತ್ತು.
ಇದನ್ನೂ ಓದಿ: ಚಿದರಂಬರಂ, ಜೀತು ಮಾಧವನ್ ಜೋಡಿಯಲ್ಲಿ ಹೊಸ ಚಿತ್ರ
ಹಾಸ್ಟೆಲ್‌ನಲ್ಲಿಯೇ ಇದ್ದುಕೊಂಡು ಓದಿ ೨೦೧೦ರಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಶೇ. 89 ಅಂಕ ಪಡೆದಿದ್ದ ಶಿರಹಟ್ಟಿ ಮೂಲದ ನಿಂಗಪ್ಪ ಎಂಬ ಬಾಲಕನ ತಂದೆ-ತಾಯಿ ಅಪಘಾತದಲ್ಲಿ ದುರ್ಮರಣಕ್ಕೀಡಾದ ಬಗ್ಗೆ ಮಾನವೀಯ ವರದಿ ಪ್ರಕಟಿಸಿದ್ದರು. ಪರಿಣಾಮ ದಾನಿಗಳು ಬಾಲಕನ ಖಾತೆಗೆ ೪.೧೨ ಲಕ್ಷ ರೂ. ಜಮೆ ಮಾಡಿದ್ದರು. ಮಾಜಿ ಸಂಸದ ಐ.ಜಿ. ಸನದಿಯವರು ಈತನಿಗೆ ಆಶ್ರಯ ನೀಡಿ ಶಿಕ್ಷಣದ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದರು.
ಇದನ್ನೂ ಓದಿ : ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಮಹಾ ಅನ್ನಸಂತರ್ಪಣೆ
೨೦೧೪ರಲ್ಲಿ ಹುಬ್ಬಳ್ಳಿ ಸಂಚಾರಿ ಪೊಲೀಸರು ವಾಹನಗಳಿಗೆ ದಂಡ ವಿಧಿಸುವ ನೆಪದಲ್ಲಿ ವಾಹನ ಸವಾರರಿಂದ ಹಣ ಕೀಳುವ ದಂಧೆಯನ್ನು ಕುಟುಕು ಕಾರ್ಯಾಚರಣೆ(ಸ್ಟಿಂಗ್ ಆಪರೇಷನ್) ಮಾಡಿ ಬಯಲಿಗೆಳೆದಿದ್ದರು. ಅಕ್ರಮವೆಸಗಿದ ನಾಲ್ವರ ಪೇದೆಗಳು ಅಮಾನತುಗೊಂಡಿದ್ದರು.
ಕಳ್ಳತನವಾಗಿದ್ದ ಬೈಕ್ ಪತ್ತೆ ಹಚ್ಚಿದ ಪೊಲೀಸರು ೧೨ ಸಾವಿರ ರೂ. ಲಂಚ ಪಡೆದು ಬೈಕ್ ಮರಳಿಸಿದ್ದನ್ನು ಕುಟುಕು ಕಾರ್ಯಾಚರಣೆ ನಡೆಸಿದ ಪರಿಣಾಮ ಎಎಸ್‌ಐ ಹಾಗೂ ಪೇದೆ ಅಮಾನತುಗೊಂಡಿದ್ದರು.
ಇದನ್ನೂ ಓದಿ: ಸ್ಥಳೀಯರಿಂದಲೇ ಮರು ನಾಮಕರಣ
ನೋಟ್ ಬ್ಯಾನ್ ಆದ ಬಳಿಕ ೧.೫ ಕೋಟಿ ರೂಪಾಯಿ ಸಾಗಾಟ ಆಗುತ್ತಿದ್ದ ಮಾಹಿತಿ ಪಡೆದ ಬಾಗಲಕೋಟೆಯ (Bagalkot) ಪೇದೆಗಳು ಹಣ ಎಗರಿಸಿದ್ದನ್ನು ವರದಿ ಪ್ರಕಟಿಸಿದಾಗ ಏಳು ಪೇದೆಗಳು ಅಮಾನತುಗೊಂಡಿದ್ದರು.
ಇದನ್ನೂ ಓದಿ: ಭಟ್ಕಳದಲ್ಲಿ ಹಿಟ್ ಎಂಡ್ ರನ್; ಇಬ್ಬರಿಗೆ ಗಾಯ