ಭಟ್ಕಳ (Bhatkal): ಉತ್ತರ ಕನ್ನಡ (Uttara kannada) ಜಿಲ್ಲಾ ಕಬಡ್ಡಿ (Kabaddi) ತಂಡವನ್ನು ರಚಿಸಲು ಕುಮಟಾದ (Kumta) ಮಣಕಿ ಮೈದಾನದಲ್ಲಿ ನವೆಂಬರ್ ೯ ಶನಿವಾರ ಬೆಳಿಗ್ಗೆ ೧೧ ಗಂಟೆಗೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ.  ಆಸಕ್ತ ಬಾಲಕ-ಬಾಲಕಿಯರು ಭಾಗವಹಿಸುವಂತೆ ಉತ್ತರ ಕನ್ನಡ ಜಿಲ್ಲಾ ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ಶ್ರೀಧರ ನಾಯ್ಕ ಕೋರಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ನವೆಂಬರ್ ೨೨ ರಿಂದ ೨೪ ರವರೆಗೆ ಕೋಲಾರ (Kolar) ಜಿಲ್ಲೆಯ ಬೈರೆಗೌಡ ನಗರದಲ್ಲಿ ನಡೆಯಲಿರುವ ಬಾಲಕರು ಹಾಗೂ ಬಾಲಕಿಯರ ರಾಜ್ಯ ಮಟ್ಟದ ಕಬಡ್ಡಿ (Kabaddi) ಚಾಂಪಿಯನ್‌ಶಿಪ್‌ಗೆ ಉತ್ತರ ಕನ್ನಡ ಜಿಲ್ಲಾ ಕಬಡ್ಡಿ ತಂಡವನ್ನು ರಚಿಸಲು ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕಿನ ಜೂನಿಯರ್ ವಿಭಾಗದ ಬಾಲಕ-ಬಾಲಕಿಯರು ಭಾಗವಹಿಸಬಹುದು. ಎಲ್ಲಾ ತಾಲೂಕಿನ ಕಬಡ್ಡಿಯ ಪದಾಧಿಕಾರಿಗಳು ಈ ವೇಳೆ ಹಾಜರಿರಬೇಕೆಂದು ಶ್ರೀಧರ ನಾಯ್ಕ ಕೋರಿದ್ದಾರೆ.

ಇದನ್ನೂ ಓದಿ : DB naik/ ಎಂಭತ್ತರ ಹರೆಯದಲ್ಲೂ ಜೀವನೋತ್ಸಾಹ

ಕ್ರೀಡೆಯಲ್ಲಿ ಭಾಗವಹಿಸುವ ಬಾಲಕರ ತೂಕ ೭೦ ಕೆ.ಜಿ. ಮತ್ತು ಬಾಲಕಿಯರ ತೂಕ ೬೫ ಕೆ.ಜಿ. ಮೀರಿರಬಾರದು.  ದಿನಾಂಕ: ೩೧-೦೧-೨೦೨೫ ವಯಸ್ಸು ೨೦ ವರ್ಷ ಮೀರಬಾರದು. ಒಂದು ವೇಳೆ ಸೂಚಿಸಿರುವ ತೂಕ ಹಾಗೂ ವಯಸ್ಸು ಜಾಸ್ತಿ ಇದ್ದರೆ ಅಂಥವರನ್ನು ಈ ಆಯ್ಕೆ ಪ್ರಕ್ರಿಯೆಯಿಂದ ಅನರ್ಹಗೊಳಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಕೆ.ವಿ. ರಾಜೇಶ (ಮೊ. ೯೮೮೦೪೮೫೮೪೩) ಕಮಲಾಕರ ಕುಮಟಾ (ಮೊ. ೯೫೩೫೩೩೦೭೪೪) ಮತ್ತು ಜಾಫರ್ ಹೈದರ್ (ಮೊ. ೯೮೪೫೫೦೬೦೪) ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ :  ದೋಣಿಯಲ್ಲಿಯೇ ಮೀನುಗಾರ ಸಾವು