ಕಾರವಾರ (Karwar) : ಕೈಗಾ (Kaiga) ಅಣು ವಿದ್ಯುತ್ ಘಟಕಕ್ಕೆ ಉದ್ಯೋಗಿಗಳನ್ನು ಕರೆದೊಯ್ಯುವ ಇನ್ನೊಂದು ಬಸ್ಸಿನಲ್ಲಿ (Kaiga Bus) ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಶನಿವಾರ ಸಂಜೆ ೫.೩೦ರ ಸುಮಾರಿಗೆ ಕೈಗಾ ಅಣು ಘಟಕದ ಉದ್ಯೋಗಿಗಳನ್ನು ಕರೆದೊಯ್ಯುವ ಬಸ್ಸು (Kaiga Bus) ಕುಚೇಗಾರ್ ಬಳಿ ಅನಾಹುತಕ್ಕೆ ಒಳಗಾಗಿದೆ. ಈ ವೇಳೆಯಲ್ಲಿ ಬಸ್ಸಿನಲ್ಲಿ ಪ್ರಯಾಣಿಕರು ಇರಲಿಲ್ಲ.

ಇದನ್ನೂ ಓದಿ: ವೈದ್ಯಕೀಯ ಶಿಬಿರದ ಪ್ರಯೋಜನ ಪಡೆದ ಭಟ್ಕಳಿಗರು

ಬಸ್ಸಿನಲ್ಲಿ ಹೊಗೆ ಬರುತ್ತಿರುವುದನ್ನು ನೋಡಿದ ಸ್ಥಳೀಯರು ಬಸ್ಸು ಚಾಲಕನಿಗೆ ಮಾಹಿತಿ ನೀಡಿದ್ದಾರೆ. ವಾಹನ ನಿಲ್ಲಿಸಿದ ಬಸ್ಸು ಚಾಲಕ ದೊಡ್ಡ ಪ್ರಮಾಣದ ಅಗ್ನಿ ಅನಾಹುತ ತಡೆದಿದ್ದಾರೆ. ನ.೮ರಂದು ಕೈಗಾ ಸಿಬ್ಬಂದಿ ಕರೆದೊಯ್ಯುವ ಬಸ್ಸು ಅಗ್ನಿ ಅನಾಹುತದಲ್ಲಿ ಸಂಪೂರ್ಣ ಹಾನಿಯಾಗಿತ್ತು.

ವಿಡಿಯೋ ಸಹಿತ ಇದನ್ನೂ ಓದಿ: ಸ್ಕೂಬಾ ಡೈವಿಂಗ್‌ ಮಾಡಿದ ನಟ ಡಾಲಿ ಧನಂಜಯ್‌