ಭಟ್ಕಳ (Bhatkal): ಇಲ್ಲಿನ ಚಿತ್ರಾಪುರದಲ್ಲಿ ಸಾಹಿತಿ ಶ್ರೀಧರ ಶೇಟ ಅವರ ಸ್ವಗೃಹ ಕಲಾಸಿರಿಯಲ್ಲಿ ಜಿಲ್ಲಾ ಕಸಾಪ, ಭಟ್ಕಳ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕಲಾಸಿರಿ ಪ್ರತಿಷ್ಠಾನದ ವತಿಯಿಂದ ನವೆಂಬರ್ ಮಾಸದುದ್ದಕ್ಕೂ ನಡೆಯುವ ಕನ್ನಡ ಕಾರ್ತಿಕ ಕಾರ್ಯಕ್ರಮದ ಮನೆಯಂಗಳದಲ್ಲಿ ಕಾವ್ಯೋತ್ಸವ ಹಾಗೂ ಕಲಾಸಿರಿ ಪ್ರಶಸ್ತಿ (Award) ಪ್ರದಾನ ಕಾರ್ಯಕ್ರಮ ನಡೆಯಿತು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ರಾಜ್ಯೋತ್ಸವ (Rajyotsava) ನಿಮಿತ್ತ ಕಲಾಸಿರಿಯಲ್ಲಿ ಹಮ್ಮಿಕೊಂಡಿರುವ ಕವಿಗೋಷ್ಠಿಯಲ್ಲಿ ಕಾವ್ಯಸಿರಿಯೇ ಅರಳಿ, ವಿಭಿನ್ನವಾಗಿ ಮತ್ತು ವಿಶಿಷ್ಟವಾಗಿ ಜರುಗಿ ದೀಪಾವಳಿಯ ಸೊಬಗನ್ನು ಹೆಚ್ಚಿಸಿದೆ ಎಂದು ಕಾರ್ಯಕ್ರಮ ಉದ್ಘಾಟಿಸಿ ಸಾಹಿತಿ, ಶಿಕ್ಷಕ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕೋಶಾಧ್ಯಕ್ಷ ಪಿ.ಆರ್. ನಾಯ್ಕ ನುಡಿದರು.
ಇದನ್ನೂ ಓದಿ : ಕೇವಲ ಧರ್ಮ ಪ್ರೀತಿಸುವವರು ಯಾಕೆ ಜನಪ್ರತಿನಿಧಿಯಾಗಬೇಕು?
ಆಪ್ತವಾದ ಮಾತು ಕತೆ, ಸಾಹಿತ್ಯದ ಹೆಜ್ಜೆಗುರುತು, ಅನಿಸಿದ್ದನ್ನು ಗೀಚಿ ಓದಿದ ಕಾವ್ಯಾನುಭವ, ಮನೆ ಮಂದಿಯಂತೆ ಎಲ್ಲರೂ ಸಂಕೋಚವಿಲ್ಲದ ಮಾತಿನ ಭರಾಟೆಯ ಸಂಗಮದಲ್ಲಿ ನಡೆದ ಕವಿಗೋಷ್ಠಿಯು ದೀಪಾವಳಿಯ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕವಿಗಳು ಮತ್ತು ಸಾಹಿತ್ಯಾಸಕ್ತರು ಪಾಲ್ಗೊಂಡಿರುವುದು ನೋಡಿದರೆ ಸಾಹಿತ್ಯ ಸಮ್ಮೇಳನವನ್ನು ನೆನಪಿಸುವಂತಿದ್ದು, ಭಟ್ಕಳದ ನೆಲದಲ್ಲಿ ಸಾಹಿತ್ಯಕ ಕಾರ್ಯಕ್ರಮಗಳಿಗೆ ಸಾಹಿತ್ಯಾಸಕ್ತರು ಹೆಚ್ಚು ಹೆಚ್ಚು ಭಾಗವಹಿಸುತ್ತಿರುವುದು ಮನಸ್ಸಿಗೆ ಹಿತ ಕೊಡುವಂಥದ್ದು ಎಂದರು.
ಇದನ್ನೂ ಓದಿ : ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ ನಾಳೆ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭಟ್ಕಳ ಕಸಾಪ ಅಧ್ಯಕ್ಷ ಗಂಗಾಧರ ನಾಯ್ಕ ಮಾತನಾಡಿ, ಭಟ್ಕಳ ತಾಲೂಕ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ ವಹಿಸಿದ್ದ ಪಿ.ಆರ್.ನಾಯ್ಕ, ಶ್ರೀಧರ ಶೇಟ, ಮಾನಾಸುತ ಶಂಭು ಹೆಗಡೆ ವೇದಿಕೆಯಲ್ಲಿರುವುದು ಕಾರ್ಯಕ್ರಮದ ಘನತೆಯನ್ನು ಹೆಚ್ಚಿಸಿದೆ. ಪರಿಷತ್ತನ್ನು ಈ ಹಿಂದಿನ ಅಧ್ಯಕ್ಷರು ಕಟ್ಟಿ ಬೆಳೆಸಿದ್ದಾರೆ. ವಿಧಾಯಕ ಕಾರ್ಯಕ್ರಮಗಳ ಮೂಲಕ ಜನರನ್ನು ತಲುಪಲು ಎಲ್ಲರ ಸಹಕಾರ ಅಪೇಕ್ಷಿಸುವುದಾಗಿ ತಿಳಿಸಿದರು.
ಇದನ್ನೂ ಓದಿ : ನಗರ ಸ್ಥಳೀಯ ಸಂಸ್ಥೆಗಳ ಉಪ ಚುನಾವಣೆ ಘೋಷಣೆ
ಈ ಸಂದರ್ಭದಲ್ಲಿ ೩೦-೩೫ ವರ್ಷಗಳಿಂದ ಸಾಹಿತ್ಯ ಕೃಷಿಯನ್ನು ಮಾಡಿಕೊಂಡು ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾಗಿ, ನಾಟಕಕಾರರಾಗಿ, ಸಮಾಜ ಸೇವಕರಾಗಿ, ವಕೀಲರಾಗಿ ಸೇವೆ ಸಲ್ಲಿಸುತ್ತಾ ಬಂದಿರುವ ಹಿರಿಯ ಸಾಹಿತಿ ಶಂಕರ ಕೆ. ನಾಯ್ಕರವರಿಗೆ ಕಲಾಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶಿರಾಲಿಯ ಜನತಾ ವಿದ್ಯಾಲಯ ಪದವಿ ಪೂರ್ವ ಕಾಲೇಜಿನಲ್ಲಿ ೨೧ ವರ್ಷಗಳ ಶಿಕ್ಷಣ ಸೇವೆ ಸಲ್ಲಿಸಿದ ಪ್ರಾಂಶುಪಾಲ ಅಮೃತ ರಾಮರಥ ದಂಪತಿ ದಾಂಡೇಲಿಗೆ ವರ್ಗಾವಣೆಗೊಂಡಿರುವ ಪ್ರಯುಕ್ತ ಕಲಾಸಿರಿ ಪ್ರತಿಷ್ಠಾನದ ವತಿಯಿಂದ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಇದನ್ನೂ ಓದಿ : ಕಾರು ಚಲಾಯಿಸುತ್ತಿರುವಾಗಲೇ ಅಸ್ವಸ್ಥರಾಗಿ ಸಾವು
ಸನ್ಮಾನ ಸ್ವೀಕರಿಸಿದ ಶಂಕರ ನಾಯ್ಕ ಮತ್ತು ಅಮೃತ ರಾಮರಥ ಮಾತನಾಡಿ, ಈ ಸನ್ಮಾನದ ಮೂಲಕ ತಮ್ಮ ಜವಾಬ್ದಾರಿ ಇನ್ನಷ್ಟು ಹೆಚ್ಚಾಗಿದೆ ಎಂದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಸಾಹಿತಿಗಳಾದ ನಾರಾಯಣ ಯಾಜಿ ಶಿರಾಲಿ, ಮಾನಾಸುತ ಶಂಭು ಹೆಗಡೆ ಮತ್ತು ಶಿರಾಲಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ವೆಂಕಟೇಶ ನಾಯ್ಕರವರು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕಲಾಸಿರಿ ಪ್ರತಿಷ್ಠಾನದ ಸಾಹಿತ್ಯ ಸೇವೆಯನ್ನು ಪ್ರಶಂಸಿಸಿ ಮಾತನಾಡಿದರು.
ಇದನ್ನೂ ಓದಿ : ನೇಣು ಬಿಗಿದು ಸಾವಿಗೆ ಶರಣಾದ ಯುವಕ
ಭಟ್ಕಳ ಕಸಾಪ ಗೌರವ ಕೋಶಾಧ್ಯಕ್ಷ ಹಾಗೂ ಕಲಾಸಿರಿ ಪ್ರತಿಷ್ಠಾನದ ಸಂಚಾಲಕ ಸಾಹಿತಿ ಶ್ರೀಧರ ಶೇಟ ಸ್ವಾಗತಿಸಿ, ಆಶಯ ನುಡಿಗಳನ್ನಾಡಿದರು. ಕವಿಗೋಷ್ಠಿಯಲ್ಲಿ ಕವಿಗಳಾದ ಎಂ.ಡಿ.ಪಕ್ಕಿ, ವೆಂಕಟೇಶ ಬೈಲೂರು, ಎಂ.ಜಿ. ತಿಲೋತ್ತಮೆ, ಮಂಜುನಾಥ ನಾಯ್ಕ ಯಲ್ವಡಿಕವೂರ, ಸವಿತಾ ನಾಯ್ಕ, ಚಂದ್ರಶೇಖರ ಪಡುವಣಿ, ಜಯಶ್ರೀ ಆಚಾರಿ, ಹೇಮಲತಾ ಶ್ರೀಧರ, ಕೆ.ಎಲ್.ಶಾನಭಾಗ, ರಾಜೀವಿ ಎಂ. ಮೊಗೇರ, ನಂದನ ನಾಯ್ಕ, ಪ್ರಸಾದ ಶಾನಭಾಗ ಸ್ಟರಚಿತ ಕವನಗಳನ್ನು ವಾಚಿಸಿದರು.
ಇದನ್ನೂ ಓದಿ : ಸಾವು ತಂದ ಬೈಕ್ ಟಯರ್ ಪಂಕ್ಚರ್ !
ಕಲಾಸಿರಿ ಪ್ರತಿಷ್ಠಾನದ ಕಾರ್ಯದರ್ಶಿ, ಶಿಕ್ಷಕಿ ಹೇಮಲತಾ ಶ್ರೀಧರ ಶೇಟ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ತಾಲೂಕು ಕಸಾಪ ಕಾರ್ಯದರ್ಶಿ ನಾರಾಯಣ ನಾಯ್ಕ, ಶ್ರೀಶಾ ಶೇಟ, ಮಿತಾ ರಾಮರಥ, ಸುರೇಶ ಮುರ್ಡೇಶ್ವರ, ಮಂಜುನಾಥ ಕೋಡಿಹಿತ್ಲು, ರಾಜಂ ಹಿಚ್ಕಡ, ದೀಪಕ ನಾಯ್ಕ, ಶೀತಲಾ ಚಿತ್ರಾಪುರ ಇನ್ನಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ : ಮೀನು ಹಿಡಿಯಲು ಹೋದವ ಸಮುದ್ರ ಪಾಲು