ಭಟ್ಕಳ (Bhatkal) : ಇಲ್ಲಿನ ಚೌಥನಿಯ ಶ್ರೀ ಕಾಳಿಕಾಂಬಾ (Kalikamba) ದೇವಸ್ಥಾನದಲ್ಲಿ ಮಹಾದೀಪಾರಾಧನೆಯು ಶ್ರೀ ಕ್ಷೇತ್ರದ ಆಡಳಿತ ಸಮಿತಿ ಹಾಗೂ ವಿಶ್ವಕರ್ಮ ಬ್ರಾಹ್ಮಣ ಯುವಕ ಸಂಘದ ಆಶ್ರಯದಲ್ಲಿ ನಿನ್ನೆ ನ.೩೦ರಂದು ನಡೆಯಿತು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಸಂಜೆ ೭ ಗಂಟೆಯಿಂದ ಆರಂಭಗೊಂಡ ಈ ಮಹಾದೀಪಾರಾಧನೆಯಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೀಪವನ್ನು ಬೆಳಗಿಸಿದರು. ಆರಂಭದಲ್ಲಿ ಶ್ರೀ ಕಾಳಿಕಾಂಬಾ (Kalikamba) ಭಜನಾ ಮಂಡಳಿ ಯವರಿಂದ ಭಜನೆ ಹಾಗೂ ಶ್ರೀ ಕಾಳಿಕಾಂಬಾ ಮಹಿಳಾ ಸಂಘದವರಿಂದ ಕುಣಿತ ಭಜನೆ ನಡೆಯಿತು. ನಂತರ ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ಗಜಾನನ ಎನ್ ಆಚಾರ್ಯ ದೀಪ ಹಚ್ಚಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶ್ರೀ ಕಾಳಿಕಾಂಬಾ ದೇವಿಯ ಮಹಾಪೂಜೆಯ ನಂತರ ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ನಡೆಯಿತು.
ಇದನ್ನೂ ಓದಿ : Scuba Diving/ ವಿವಾದಕ್ಕೀಡಾದ ಹೊಸ ಬಿಡ್ ಅನುಮೋದನೆ