ಭಟ್ಕಳ (Bhatkal): ಹಾಸ್ಯ ನಟ ಕೋಮಲ್ (Komal) ಹಾಗೂ ಬಿಗ್ ಬಾಸ್ ಖ್ಯಾತಿಯ ತನಿಷಾ ಕುಪ್ಪಂಡ (Tanisha Kuppanda) ಅಭಿನಯದ ಫ್ಯಾನ್ ಇಂಡಿಯಾ “ಕೋಣ” ಚಿತ್ರದ (Kannada Cinema) ಹಾಡಿನ ಚಿತ್ರೀಕರಣವನ್ನು ಸೋಮವಾರ ಮುರುಡೇಶ್ವರ (Murudeshwar) ಹಾಗೂ ಭಟ್ಕಳದಲ್ಲಿ ಚಿತ್ರೀಕರಿಸಲಾಯಿತು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಈ ಚಿತ್ರವನ್ನು ೮ ಎಂ.ಎಂ. ಚಿತ್ರದ ನಿರ್ದೇಶಕ ಹರಿಕೃಷ್ಣ ಎಸ್ ನಿರ್ದೇಶಿಸಿದ್ದು, ನಿರ್ಮಾಪಕಿ ಕಂ ನಟಿ ತನಿಷಾ ಕುಪ್ಪಂಡ, ಕಾರ್ತಿಕ್ ಕಿರಣ್ ಸಂಕಲ್ಪ ಹಾಗೂ ರವಿ ಕಿರಣ್ ನಿರ್ಮಾಣ ಮಾಡಿದ್ದಾರೆ. ಇದೊಂದು ಡಾರ್ಕ್ ಹ್ಯೂಮರ್ ಕತೆಯಾಗಿದೆ.
ಇದನ್ನೂ ಓದಿ: ಸಂಸದ ಕಾಗೇರಿ ಭಟ್ಕಳ ಪ್ರವಾಸ
ಈ ಚಿತ್ರದ (Kannada Cinema) ಸಾಂಗ್ ಚಿತ್ರೀಕರಣಕ್ಕಾಗಿ ಚಿತ್ರ ತಂಡ ಭಟ್ಕಳ ಹಾಗೂ ಮುರುಡೇಶ್ವರಕ್ಕೆ (Murdeshwar) ಬಂದು ಒಂದು ದಿನದ ಚಿತ್ರೀಕರಣವನ್ನು ಮುಗಿಸಿದ್ದಾರೆ. ಬೆಳ್ಳಿಗ್ಗೆ ಮುರುಡೇಶ್ವರ ಭಾಗದಲ್ಲಿ ಸಾಂಗ್ ಚಿತ್ರೀಕರಣ ಮಾಡಿ ಮಧ್ಯಾಹ್ನ ಭಟ್ಕಳದ ಮಾವಿನಕುರ್ವೆ ಪಂಚಾಯತ ವ್ಯಾಪ್ತಿಯ ತಲಗೋಡ ಸಮುದ್ರ ತೀರದಲ್ಲಿ ಚಿತ್ರೀಕರಣ ನಡೆಸಿದ್ದಾರೆ.
ಇದನ್ನೂ ಓದಿ: ಮುರುಡೇಶ್ವರಕ್ಕೆ ಬಂದಿದ್ದ ಹಿರಿಯ ಪತ್ರಕರ್ತ ನಿಧನ
ಚಿತ್ರೀಕರಣದ ಬಳಿಕ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ನಟ ಕೋಮಲ್, ಭಟ್ಕಳದಲ್ಲಿ ಚಿತ್ರೀಕರಣ ಮಾಡುವ ವೇಳೆ ಈ ಭಾಗದ ಜನರು ಒಳ್ಳೆಯ ರೀತಿ ಬೆಂಬಲ ನೀಡಿದ್ದಾರೆ. ಈ ಭಾಗದ ಜನರೊಂದಿಗೆ ಒಂದು ದಿನ ಚಿತ್ರೀಕರಣ ಮಾಡಿ ಸಮಯ ಕಳೆದಿದ್ದು ಗೊತ್ತೆಯಾಗಿಲ್ಲ. ನಮ್ಮ ಕನ್ನಡ ಚಿತ್ರ ರಂಗದ ನಿರ್ಮಾಪಕರಿಗೆ ಈ ಭಾಗದಲ್ಲಿ ಬಂದು ಚಿತ್ರೀಕರಣ ಮಾಡಲು ತಿಳಿಸುತ್ತೇನೆ.
ಬೆಳ್ಳಿಗ್ಗೆ ಮುರುಡೇಶ್ವರದಲ್ಲಿ ಚಿತ್ರೀಕರಣ ಮಾಡಿದ್ದೇವೆ. ವಿಶೇಷವಾಗಿ ಸೋಮವಾರ ಶಿವನ ಆರಿದ್ರ ನಕ್ಷತ್ರದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದು ನಮ್ಮ ಸೌಭಾಗ್ಯವಾಗಿದೆ. ದೇವಸ್ಥಾನದ ಆಡಳಿತ ಮಂಡಳಿಯವರು ಕೂಡ ನಮಗೆ ಸಹಾಯ ಮಾಡಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: Mahaganapati/ ಜ. ೧೯ರಂದು ವರ್ಧಂತ್ಯುತ್ಸವ
ನಂತರ ನಿರ್ಮಾಪಕಿ ಕಂ ನಟಿ ತನಿಷಾ ಕುಪ್ಪಂಡ ಮಾತನಾಡಿ, ನಮ್ಮ ಪ್ರೊಡಕ್ಷನ್ ಚೊಚ್ಚಲ ಚಿತ್ರ ಕೋಣ. ಇದೊಂದು ಸುಂದರ ಚಿತ್ರವಾಗಿದ್ದು ಆದಷ್ಟು ಬೇಗ ಈ ಚಿತ್ರವನ್ನು ನಿಮ್ಮ ಮುಂದೆ ತರಲಿದ್ದೇವೆ. ನಿಮ್ಮೆಲ್ಲರನ್ನು ಮನರಂಜಿಸುವುದು ನಮ್ಮ ಕರ್ತವ್ಯ. ಅದನ್ನು ಪ್ರೋತ್ಸಾಹಿಸಿ ಹರಸುವುದು ನಿಮ್ಮ ಜವಾಬ್ದಾರಿ. ಇಂದು ಸಾಂಗ್ ಚಿತ್ರೀಕರಣಕ್ಕಾಗಿ ಭಟ್ಕಳದ ತಲಗೋಡ ಸಮುದ್ರ ತೀರಕ್ಕೆ ಬಂದಿರುವುದು ನನಗೆ ತುಂಬಾ ಸಂತೋಷವಾಗಿದೆ. ಈ ಭಾಗದ ಜನರು ಕೂಡ ಒಳ್ಳೆಯ ಬೆಂಬಲ ನೀಡಿದ್ದಾರೆ ಎಂದು ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ.
ಸಿನಿಮಾ ಚಿತ್ರೀಕರಣದ ವಿಡಿಯೋವನ್ನು ಯೂಟ್ಯೂಬ್ಯೂಟ್ಯೂಬ್ ನಲ್ಲಿ, ಇನ್ಸ್ಟಾಗ್ರಾಂ ಮತ್ತು ಫೇಸ್‌ಬುಕ್ ನಲ್ಲಿ ವೀಕ್ಷಿಸಬಹುದು.