ಭಟ್ಕಳ (Bhatkal) : ತಾಲೂಕಿನ ಜಾಲಿ ಸರಕಾರಿ ಪ್ರೌಢಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿನಿ ನಿಧಿ ಯಶ್ವಂತ ನಾಯ್ಕ ಜಿಲ್ಲಾ ಮಟ್ಟದ ಕರಾಟೆ (Karate) ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಉತ್ತರ ಕನ್ನಡ ಶೈಕ್ಷಣಿಕ ಜಿಲ್ಲಾಮಟ್ಟದ ೧೭ ವರ್ಷ ವಯೋಮಿತಿಯೊಳಗಿನ ಪ್ರೌಢಶಾಲಾ ಕ್ರೀಡಾಕೂಟವು ಕುಮಟಾದಲ್ಲಿ ನಡೆದಿತ್ತು.
ಈಕೆಯು ಶಿಕ್ಷಕ ದಂಪತಿ ಯಶ್ವಂತ ರಾಮಚಂದ್ರ ನಾಯ್ಕ ಮತ್ತು ಸೀಮಾ ಯಶ್ವಂತ ನಾಯ್ಕರವರ ಪುತ್ರಿಯಾಗಿದ್ದಾಳೆ. ಕರಾಟೆ (Karate) ಸ್ಪರ್ಧೆಯಲ್ಲಿ ಈಕೆಯ ಈ ಸಾಧನೆಗೆ ಶಾಲಾ ಮುಖ್ಯಾಧ್ಯಾಪಕಿ, ಶಿಕ್ಷಕವೃಂದ, ಎಸ್ ಡಿಎಂಸಿ ಅಧ್ಯಕ್ಷರು, ಪದಾಧಿಕಾರಿಗಳು, ಜಾಲಿ ಊರಿನ ಹಿರಿಯರು ಮತ್ತು ಸಂಘ ಸಂಸ್ಥೆಗಳ ಮುಖ್ಯಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.

ಇದನ್ನೂ ಓದಿ :  ಬಸ್‌ ನಿಲ್ದಾಣ ಪಾರ್ಕಿಂಗ್‌ ಸ್ಥಳದಲ್ಲಿದ್ದ ಬೈಕ್‌ ಕಳವು