ಭಟ್ಕಳ (Bhatkal) : ಇಲ್ಲಿನ ಅಮೀನಾ ಪ್ಯಾಲೇಸ್ ನಲ್ಲಿ ಅಮರ್ ಶಾ ಕರಾಟೆ ಮತ್ತು ಫಿಟ್ನೆಸ್ ಅಕಾಡೆಮಿಯ ವತಿಯಿಂದ ನಡೆದ ರಾಷ್ಟ್ರ ಮಟ್ಟದ ಮುಕ್ತ ಕರಾಟೆ ಸ್ಪರ್ಧೆಯಲ್ಲಿ (Karate Championship) ಭಟ್ಕಳದ ನಾಗಶ್ರೀ ಮಾರ್ಷಲ್ ಆರ್ಟ್ಸ್ ಮತ್ತು ಫಿಟ್ನೆಸ್ ಅಕಾಡೆಮಿಯ ವಿದ್ಯಾರ್ಥಿಗಳು ಭಾಗವಹಿಸಿ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಪಡೆದಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ವ್ಹೈಟ್‌ ಬೆಲ್ಟ್ ಕಟಾ ಮತ್ತು ಫೈಟ್ ವಿಭಾಗದಲ್ಲಿ ಸಿರಿ ಸಂತೋಷ ನಾಯ್ಕ ಚಿನ್ನ ಮತ್ತು ಬೆಳ್ಳಿ ಪದಕ, ಗುರುತೇಜ ರಾಘವೇಂದ್ರ ನಾಯ್ಕ ಚಿನ್ನದ ಪದಕ, ಭಾನುಶ್ರೀ ಅಶೋಕ ನಾಯ್ಕ ಚಿನ್ನ ಮತ್ತು ಕಂಚಿನ ಪದಕ ಹಾಗೂ ಜ್ಯೋತಿ ನಾಯ್ಕಕಂಚಿನ ಪದಕ ಪಡೆದುಕೊಂಡಿದ್ದಾರೆ. ಯೆಲ್ಲೊ ಬೆಲ್ಟ್ ವಿಭಾಗದಲ್ಲಿ ಅಥರ್ವ ನಾಯ್ಕ ಚಿನ್ನದ ಪದಕ, ಅರ್ಹಾನ್ ಎರಡು ಕಂಚಿನ ಪದಕ, ಚಿರಂತ್ ನಾಯ್ಕಕಂಚಿನ ಪದಕ ಹಾಗೂ ಸಂಜನಾ ಗೊಂಡ ಎರಡು ಕಂಚಿನ ಪದಕ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ :  ಮತ್ತೊಂದು ಗೋ ಸಾಗಾಟ ಪ್ರಕರಣ; ಕಳ್ಳತನದ್ದೊ.. ಅಕ್ರಮವೊ?

ಆರೆಂಜ್ ಬೆಲ್ಟ್ ವಿಭಾಗದಲ್ಲಿ *ಆಯುಷ್ಮಾನ್ ಶೆಟ್ಟಿ ಬೆಳ್ಳಿ ಮತ್ತು ಕಂಚಿನ ಪದಕ, ಅಥರ್ವ ಮಂಜುನಾಥ ಗೊಂಡ ಬೆಳ್ಳಿ ಮತ್ತು ಕಂಚಿನ ಪದಕ, ದಿರಾ ಕಿರಣ ನಾಯ್ಕ ಎರಡು ಕಂಚಿನ ಪದಕ, ರಯ್ಯಾನ್ ಚಿನ್ನ ಮತ್ತು ಕಂಚಿನ ಪದಕ ಪಡೆದಿದ್ದಾರೆ. ಬ್ಲ್ಯೂ ಬೆಲ್ಟ್ ವಿಭಾಗದಲ್ಲಿ ಮನಿಷಾ ನಾಯ್ಕ ಬೆಳ್ಳಿ ಮತ್ತು ಕಂಚಿನ ಪದಕ ಪಡೆದಿದ್ದಾರೆ. ಗ್ರೀನ್ ಬೆಲ್ಟ್ ವಿಭಾಗದಲ್ಲಿ ರತನ್ ಪಾವಸ್ಕರ್ ಬೆಳ್ಳಿ ಮತ್ತು ಕಂಚಿನ ಪದಕ ಪಡೆದಿದ್ದಾರೆ. ಬ್ರೌನ್ ಬೆಲ್ಟ್ ವಿಭಾಗದಲ್ಲಿ ಸಾನ್ವಿ ನಾಯ್ಕ ಚಿನ್ನ ಮತ್ತು ಬೆಳ್ಳಿ ಪದಕ ಹಾಗೂ ಯಶಸ್ ಮೊಗೇರ ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಈ ಕರಾಟೆ ಸ್ಪರ್ಧೆಯಲ್ಲಿ (Karate Championship) ವಿದ್ಯಾರ್ಥಿಗಳ ಸಾಧನೆಗೆ ತರಬೇತುದಾರರಾದ ಈಶ್ವರ ನಾಯ್ಕ, ನಾಗಶ್ರೀ ನಾಯ್ಕ ಹಾಗೂ ಪಾಲಕ-ಪೋಷಕರು ಹರ್ಷ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಭಟ್ಕಳ ವೃತ್ತದ ಬಳಿ ಟೂರಿಸ್ಟ್ ಕಾರು ನಿಲುಗಡೆಗೆ ವಿರೋಧ