ಕಾರವಾರ (Karwar) : ಮೈಸೂರು (Mysuru) ರಾಜ್ಯವು ಕರ್ನಾಟಕ (Karnataka) ಎಂದು ನಾಮಕರಣವಾಗಿ ೧ ನವೆಂಬರ್ ೨೦೨೩ಕ್ಕೆ ೫೦ ವರ್ಷ ಪೂರ್ಣಗೊಂಡಿರುವ ಹಿನ್ನಲೆಯಲ್ಲಿ ಕರ್ನಾಟಕ ಸಂಭ್ರಮ (Karnataka Celebration) ೫೦ರ ಜ್ಯೋತಿ ರಥಯಾತ್ರೆಯು ಕರ್ನಾಟಕ ರಾಜ್ಯದಾದ್ಯಂತ ೨೦೨೩ರ ನ.೨ರಿಂದ ೨೦೨೪ರ ಅ. ೨೯ರವರೆಗೆ ಕರ್ನಾಟಕ ರಾಜ್ಯದಾದ್ಯಂತ ಸಂಚರಿಸುತ್ತಿದೆ. ಉತ್ತರ ಕನ್ನಡ (Uttara Kannada) ಜಿಲ್ಲೆಯಲ್ಲಿ ಅ.೧೯ ರಿಂದ ಅ.೨೯ ವರೆಗೆ ಸಂಚರಿಸಲಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಅ.೧೯ ರಂದು ರಥವು ಭಟ್ಕಳಕ್ಕೆ (Bhatkal) ಆಗಮಿಸಲಿದ್ದು, ಅ.೨೦ ರ ವರೆಗೆ ಭಟ್ಕಳ ತಾಲೂಕಿನಲ್ಲಿ ಕರ್ನಾಟಕ ಸಂಭ್ರಮ (Karnataka Celebration) ೫೦ರ ಜ್ಯೋತಿ ರಥಯಾತ್ರೆಯು ನಡೆಯಲಿದೆ. ಅ. ೨೧ ರಂದು ಬೆಳಿಗ್ಗೆ ೯ ಗಂಟೆಗೆ ಹೊನ್ನಾವರ (Honnavar) ತಾಲೂಕಿಗೆ ಆಗಮಿಸಿ, ತಾಲೂಕಿನಲ್ಲಿ ಸಂಚರಿಸಲಿದೆ. ಅ.೨೨ ರಂದು ಬೆಳಿಗ್ಗೆ ೯ ಗಂಟೆಗೆ ಕಾರವಾರ ತಾಲೂಕಿಗೆ ಆಗಮಿಸಿ, ತಾಲೂಕಿನಲ್ಲಿ ಸಂಚಾರಿಸಲಿದೆ. ಅ.೨೩ ರಂದು ಬೆಳಗ್ಗೆ ೯ ಗಂಟೆಗೆ ಯಲ್ಲಾಪುರ (Yallapur) ತಾಲೂಕಿಗೆ ಆಗಮಿಸಿ, ತಾಲೂಕಿನಲ್ಲಿ ಸಂಚರಿಸಲಿದೆ. ಅ.೨೪ ರಂದು ಬೆಳಿಗ್ಗೆ ೯ ಗಂಟೆಗೆ ಜೋಯಿಡಾ (Joida) ತಾಲೂಕಿಗೆ ಆಗಮಿಸಿ, ತಾಲೂಕಿನಲ್ಲಿ ಸಂಚರಿಸಲಿದೆ. ಅ.೨೫ ರಂದು ಬೆಳಿಗ್ಗೆ ೯ ಗಂಟೆಗೆ ದಾಂಡೇಲಿ (Dandeli) ತಾಲೂಕಿಗೆ ಆಗಮಿಸಿ, ತಾಲೂಕಿನಲ್ಲಿ ಸಂಚರಿಸಲಿದೆ. ಅ.೨೬ ರಂದು ಬೆಳಿಗ್ಗೆ ೯ ಗಂಟೆಗೆ ಹಳಿಯಾಳ (Haliyal) ತಾಲೂಕಿಗೆ ಆಗಮಿಸಿ, ತಾಲೂಕಿನಲ್ಲಿ ಸಂಚರಿಸಲಿದೆ. ಅ.೨೭ ರಂದು ಬೆಳಿಗ್ಗೆ ೯ ಗಂಟೆಗೆ ಮುಂಡಗೋಡ (Mundagod) ತಾಲೂಕಿಗೆ ಆಗಮಿಸಿ, ತಾಲೂಕಿನಲ್ಲಿ ಸಂಚರಿಸಲಿದೆ. ಅ.೨೮ರಂದು ಬೆಳಿಗ್ಗೆ ೯ ಗಂಟೆಗೆ ಶಿರಸಿ (Sirsi) ತಾಲೂಕಿಗೆ ಆಗಮಿಸಿ, ತಾಲೂಕಿನಲ್ಲಿ ಸಂಚರಿಸಲಿದೆ. ಅ.೨೯ ರಂದು ರಂದು ಬೆಳಿಗ್ಗೆ ೯ ಗಂಟೆಗೆ ಸಿದ್ದಾಪುರ (Siddapur) ತಾಲೂಕಿಗೆ ಆಗಮಿಸಲಿದ್ದು ತಾಲೂಕಿನಲ್ಲಿ ಸಂಚರಿಸಲಿದೆ ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ : ಅ.೨೦ರಂದು ರಾಷ್ಟ್ರೀಯ ಮುಕ್ತ ಕರಾಟೆ ಚಾಂಪಿಯನ್ ಶಿಪ್