ಭಟ್ಕಳ (Bhatkal) : ತಾಲೂಕಿನ ಹೆಬಳೆಯ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ದ್ವಿತೀಯ ವರ್ಷದ ಕಾರ್ತಿಕ ದೀಪೋತ್ಸವ (Kartikotsava) ವಿಜೃಂಭಣೆಯಿಂದ ಸಂಪನ್ನಗೊಂಡಿತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಕಾರ್ತಿಕ ದೀಪೋತ್ಸವ (Kartikotsava) ನಿಮಿತ್ತ ಸಂಜೆ ಸೂರ್ಯಾಸ್ತದ ಬಳಿಕ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಶ್ರೀಧರ ನಾಯ್ಕ ಗೋಯ್ದಮನೆ ದೇವರ ಎದುರಿಗೆ ಇಡಲಾದ ಬೃಹತ್ ತುಪ್ಪದ ದೀಪ ಬೆಳಗುವ ಮೂಲಕ ದೀಪೋತ್ಸವಕ್ಕೆ ಚಾಲನೆ ನೀಡಿದರು. ಸಮಿತಿಯ ಸದಸ್ಯರು ಉಳಿದ ತುಪ್ಪದ ದೀಪ ಬೆಳಗಿ ಅಧ್ಯಕ್ಷರಿಗೆ ಜೊತೆಯಾದರು. ನಂತರ ನೆರೆದಿದ್ದ ಎಲ್ಲ ಭಕ್ತಾದಿಗಳು ದೇವಾಲಯದ ಒಳಗೆ ಹಾಗೂ ಹೊರಗೆ ಇಡಲಾದ ಎಣ್ಣೆಯ ದೀಪಗಳನ್ನು ಬೆಳಗಿದರು. ದೇವಸ್ಥಾನದ ಸುತ್ತಲೂ ಬೆಳಕಿನ ಹಬ್ಬದಂತೆ ಗೋಚರಿಸುತ್ತಿತ್ತು. ಬಳಿಕ ಸ್ಥಳೀಯ ಭಕ್ತಾದಿಗಳಿಂದ ಭಜನಾ ಕಾರ್ಯಕ್ರಮ ನಡೆಯಿತು. ಭಜನೆ ಮುಗಿದ ಮೇಲೆ ಸಿದ್ಧಿವಿನಾಯಕ ದೇವರಿಗೆ ಮಹಾಪೂಜೆ ಮತ್ತು ಮಹಾ ಮಂಗಳಾರತಿ ನಡೆಯಿತು. ಸೇರಿದ್ದ ಎಲ್ಲ ಭಕ್ತಾದಿಗಳಿಗೂ ಪ್ರಸಾದ ಹಂಚಲಾಯಿತು. ಸಲಹಾ ಸಮಿತಿಯ ಸದಸ್ಯರು ಸಹಕರಿಸಿದರು. ಸಾವಿರಾರು ಭಕ್ತರು ದೀಪೋತ್ಸವದಲ್ಲಿ ಭಾಗಿಯಾದರು.

ಇದನ್ನೂ ಓದಿ :  ಆರೆನ್ನೆಸ್‌ ಪ್ರೌಢಶಾಲೆಗೆ ಸಮಗ್ರ ವೀರಾಗ್ರಣಿ

ಇದಕ್ಕೂ ಮೊದಲು ಮಧ್ಯಾಹ್ನ ಶ್ರೀದೇವರಿಗೆ ಪೂಜೆ ನಡೆಯಿತು. ಪೂಜೆಯ ಬಳಿಕ ಸ್ಥಳೀಯ ಹೋಟೆಲ್ ಉದ್ಯಮಿ ಹೊನ್ನಪ್ಪ ನಾಯ್ಕರಿಂದ ದೇವಸ್ಥಾನಕ್ಕೆ ಸ್ಟೀಲ್ ನಿಂದ ತಯಾರಿಸಲಾದ ರೈಲಿಂಗ್ ಸ್ಟ್ಯಾಂಡ್ ನ್ನು ದೇಣಿಗೆ ರೂಪದಲ್ಲಿ ಸಮರ್ಪಿಸಿದರು. ಭಕ್ತಾದಿಗಳಿಗೆ ಶಿಸ್ತುಬದ್ಧವಾಗಿ ದೇವರ ದರ್ಶನ ಪಡೆಯಲು ಅನುಕೂಲವಾಗುವ ದೃಷ್ಟಿಯಿಂದ ಈ ರೈಲಿಂಗ್‌ ಸ್ಟ್ಯಾಂಡ್‌ ಅಳವಡಿಸಲಾಗಿದೆ. ಹೊನ್ನಪ್ಪ ನಾಯ್ಕರನ್ನು ಮತ್ತವರ ಪತ್ನಿ, ತಾಯಿಯವನ್ನು ಆಡಳಿತ ಮಂಡಳಿಯವರು  ಶಾಲು ಹೊದಿಸಿ, ಫಲಪುಷ್ಪ ನೀಡಿ ಗೌರವಿಸಿದರು.

ಇದನ್ನೂಓದಿ : ಧರ್ಮ, ವೇದಸಂರಕ್ಷಣೆಗೆ ಮಠಗಳು ಸಂಘಟಿತವಾಗಲಿ