ಬೆಂಗಳೂರು (Bengaluru) : ವೇತನ ತಾರತಮ್ಯ ವಿರೋಧಿಸಿ ಕರ್ನಾಟಕ ಹಾಲು ಮಹಾಮಂಡಳ (KMF) ಅಧಿಕಾರಿಗಳು ಹಾಗೂ ಸಿಬ್ಬಂದಿ ಫೆ.೧ರಿಂದ ಮುಷ್ಕರಕ್ಕೆ ಮುಂದಾಗಿದ್ದಾರೆ. ಹೀಗಾಗಿ ಹಾಲಿನ (Nandini Milk) ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಪ್ರಮುಖವಾಗಿ ೭ನೇ ವೇತನ ಆಯೋಗದ ವರದಿಯಂತೆ ವೇತನ ಪರಿಸ್ಕರಣೆ, ಸೌಲತ್ತುಗಳನ್ನು ಯಥಾವತ್‌ ಜಾರಿ ಮಾಡುವಂತೆ ಪಟ್ಟು ಹಿಡಿದು ಫೆ.೧ರಂದು ಎಲ್ಲಾ ಚಟುವಟಿಕೆ ಸ್ಥಗಿತಗೊಳಿಸಲು ಕೆಎಂಎಫ್‌ ಹಾಗೂ ಎಲ್ಲಾ ಒಕ್ಕೂಟದ ಅಧಿಕಾರಿಗಳು, ಸಿಬ್ಭಂದಿ ಸಂಘ ನಿರ್ಧರಿಸಿದೆ. ಈ ಬಗ್ಗೆ ಅಧ್ಯಕ್ಷರು, ವ್ಯವಸ್ಥಾಪಕ ನಿದೇರ್ಶಕರಿಗೂ ಮನವಿ ಪತ್ರದಲ್ಲಿ ಹೋರಾಟದ ವಿಷಯ ತಿಳಿಸಲಾಗಿದೆ. ತಾಂತ್ರಿಕ ಅಡೆ-ತಡೆ ನೆಪದಲ್ಲಿ ನ್ಯಾಯಯುತವಾಗಿ ಸಿಗಬೇಕಾದ ಸೌಲಭ್ಯ ಸಿಗುತ್ತಿಲ್ಲ. ೭ನೇ ವೇತನ ಆಯೋಗದ ವರದಿ ಜಾರಿಯಿಂದ ಹಾಲು ಒಕ್ಕೂಟಗಳಿಗೆ ಹೊರೆಯಾಗಲ್ಲ. ಆದರೂ ನಮ್ಮ ಬೇಡಿಕೆಗೆ ಸ್ಪಂದನೆ ಸಿಕ್ಕಿಲ್ಲ. ಹಾಗಾಗಿ ಅನಿರ್ಧಿಷ್ಟಾವಧಿ ಮಷ್ಕರ ಅನಿವಾರ್ಯ ಎಂದು ಸಂಘಟನೆ ಹೇಳಿದೆ.

ಇದನ್ನೂ ಓದಿ : Pallakki/ ಫೆ.೩ರಂದು ಶ್ರೀಧರ ಪದ್ಮಾವತಿ ದೇವಿ ಪಲ್ಲಕ್ಕಿ ಉತ್ಸವ

ಮುಷ್ಕರದಿಂದಾಗಿ ರಾಜ್ಯದ ಹೈನು ಉದ್ಯಮಕ್ಕೆ ಭಾರಿ ಪೆಟ್ಟು ಬೀಳುವ ಸಾಧ್ಯತೆ ಇದೆ. ರಾಜ್ಯದ ಹಲವಾರು ಗ್ರಾಮೀಣ ಪ್ರದೇಶದಲ್ಲಿ ಹೈನುಗಾರಿಕೆಯನ್ನು ನೆಚ್ಚಿಕೊಂಡು ಬದುಕು ನಡೆಸುತ್ತಿದ್ದಾರೆ. ಪ್ರತಿದಿನ ಲಕ್ಷಾಂತರ ಲೀಟರ್‌ ಹಾಲು ಶೇಖರಣೆಯಾಗುತ್ತಿದೆ. ಇದು ನಿಂತರೆ ಪರಿಸ್ಥಿತಿ ದುಸ್ತರವಾಗುವ ಆತಂಕ ಎದುರಾಗಿದೆ. ಜೊತೆಗೆ ನಂದಿನಿ ಹಾಲು (Nandini Milk) ಸರಬರಾಜು ಕೂಡ ನಿಲ್ಲಲಿದೆ. ಕೆಎಂಎಫ್‌ ಮತ್ತು ಒಕ್ಕೂಟಗಳು ಕಳೆದ ಹಲವು ವರ್ಷಗಳಿಂದ ಶೇ. ೧೦ರಷ್ಟು ವಹಿವಾಟು ವೃದ್ಧಿಸಿದ್ದರೂ ಆಡಳಿತ ವೆಚ್ಚವನ್ನು ಶೇ. ೨ರೊಳಗೆ ಇರುವಂತೆ ಪ್ರಯತ್ನ ಮಾಡುತ್ತಿದೆ. ಸದ್ಯದ ಬೆಲೆ ಏರಿಕೆಯ ಕಾರಣದಿಂದಾಗಿ ವಾರ್ಷಿಕ ವೆಚ್ಚವನ್ನು ಶೇ. ೪ ರಿಂದ ೫ಕ್ಕೆ ಹೆಚ್ಚಿಸುವಂತೆ ಕಳುಹಿಸಿದ ಪ್ರಸ್ತಾವನೆಯನ್ನು ಸಹಕಾರ ಇಲಾಖೆ ಸಕಾರಾತಕವಾಗಿ ಸ್ಪಂಡಿಸಿಲ್ಲ ಎಂದು ನೌಕರರ ಸಂಘ ಅಸಮಾಧಾನ ವ್ಯಕ್ತಪಡಿಸಿದೆ.

ಇದನ್ನೂ ಓದಿ : Calender/ ೨೦೨೫ನೇ ವರ್ಷದ ಕ್ಯಾಲೆಂಡರ್‌ ಬಿಡುಗಡೆ

ಕಳೆದ ೨೦೨೪ ಅಕ್ಟೋಬರ್‌ ೧ರಿಂದ ೭ನೇ ವೇತನ ಆಯೋಗ ವರದಿ ಜಾರಿಗೊಳಿಸಲು ಆದೇಶಿಸಲಾದರೂ ತಾಂತ್ರಿಕ ನೆಪವೊಡ್ಡಿ ನಿಲ್ಲಿಸಲಾಗಿದೆ. ನಾವು ಕಳೆದ ಎರಡು- ಮೂರು ತಿಂಗಳಿನಿಂದ ಇದರ ಬಗ್ಗೆ ಮನವಿ ಮಾಡುತ್ತಿದ್ದೇವೆ. ಆದರೂ ಇದರ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಹೋರಾಟ ಅನಿವಾರ್ಯವಾಗಿದೆ. ವೇತನ ಪರಿಷ್ಕರಣೆ ಜಾರಿಗೊಳ್ಳುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಸಂಘ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ : Ginger growers / ಕಣ್ಣೀರು ಸುರಿಸುತ್ತಿರುವ ಶುಂಠಿ ಬೆಳೆಗಾರರು