ಬೆಳಗಾವಿ (Belagavi): ಭಾರತೀಯ ರೈಲ್ವೆಯಲ್ಲಿ (Indian railway) ಕೊಂಕಣ ರೈಲ್ವೆಯನ್ನು (konkan railway) ವಿಲೀನ ಮಾಡಲು ಭಾರತೀಯ ರೈಲ್ವೆ ಹೆಜ್ಜೆ ಇಟ್ಟಿರುವುದಾಗಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ (Minister of State for Railways ) ವಿ.ಸೋಮಣ್ಣ (V Somanna) ಹೇಳಿದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಬೆಳಗಾವಿಯಲ್ಲಿ ವಂದೇ ಭಾರತ್ ರೈಲನ್ನು (Vande Bharat train) ಸ್ವಾಗತಿಸಿ ಮಾತನಾಡಿದ ಅವರು, ಮಹಾರಾಷ್ಟ್ರದಿಂದ (Maharashtra) ಕೇರಳ (Kerala)ದವರೆಗೆ ಕೊಂಕಣ ರೈಲ್ವೆ (konkan railway) ಇದೆ. ಇದನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸುವ ಬಗ್ಗೆ ಕೇಂದ್ರ ಸರಕಾರ (central government) ಸಕಾರಾತ್ಮಕ ಹೆಜ್ಜೆ ಇಟ್ಟಿದೆ. ವಿಲೀನದ ಬಗ್ಗೆ ಕರ್ನಾಟಕ(Karnataka), ಕೇರಳ, ಗೋವಾ (Goa) ರಾಜ್ಯಗಳೊಂದಿಗೆ ಮಾತುಕತೆ ನಡೆಸಲಾಗಿದೆ. ಮಹಾರಾಷ್ಟ್ರಕ್ಕೆ ವಿವರಿಸಿದ ನಂತರ ವಿಲೀನ ಪ್ರಕ್ರಿಯೆ ನಡೆಸಲಾಗುವುದು. ಇದರಿಂದ ಪ್ರಯಾಣಿಕರಿಗೆ ಇನ್ನೂ ಹೆಚ್ಚಿನ ಸೇವೆ ಸಿಗಲಿದೆ. ರಾಜ್ಯದ ಬಾಕಿ ಇರುವ ಹಲವು ರೈಲ್ವೆ ಯೋಜನೆಗಳನ್ನು ಹಂತ ಹಂತವಾಗಿ ಈಡೇರಿಸಲಾಗುವುದು ಎಂದರು.

ಇದನ್ನೂ ಓದಿ : CAR/DAR : ಸಶಸ್ತ್ರ ಕಾನ್ಸಟೇಬಲ್ ನೇಮಕಾತಿಯ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

ಬೆಳಗಾವಿ-ಧಾರವಾಡ (Dharwad) ನಡುವೆ ನೇರ ರೈಲ್ವೆ ಕಾಮಗಾರಿ ಮುಂದಿನ ಮೂರು ವರ್ಷಗಳೊಳಗೆ ಈಡೇರಲಿದೆ. ಮೂರು ತಿಂಗಳಲ್ಲಿ ಭೂಸ್ವಾಧೀನ ನಡೆಸಿ ರೈಲ್ವೆ ಇಲಾಖೆಗೆ ಹಸ್ತಾಂತರಿಸಲಾಗುವುದು ಎಂದು ಸಚಿವರು ತಿಳಿಸಿದರು.

ಇದನ್ನೂ ಓದಿ :  ಸೇತುವೆ ಮೇಲಿಂದ ನದಿಗೆ ಬಿದ್ದು ಬೈಕ್‌ ಸವಾರ ಸಾವು