ಭಟ್ಕಳ (Bhatkal) : ಕೊಂಕಣಿ ಬರಹಗಾರ ಮತ್ತು ಹೋರಾಟಗಾರ ಗೋವಾದ (Goa) ಮಂಡಗಾಂವ್‌ನ  (Madgaon) ಫಾ. ಮೌಸಿನ್ಹೋ ಡಿ ಅಟೈಡೆ (Fr. Mousinho de Ataide) ಅಖಿಲ ಭಾರತ ಕೊಂಕಣಿ ಪರಿಷತ್ತಿನ (Konkani Parishat) ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಕಳೆದ ಎರಡು ವರ್ಷಗಳಿಂದ ಈ ಹುದ್ದೆಯಲ್ಲಿದ್ದ ಕುಮಟಾದ (Kumta) ಅರುಣ ಉಭಯ್ಕರ ಅವರಿಂದ ಅಧಿಕಾರ ಸ್ವೀಕರಿಸಲಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

1950ರಲ್ಲಿ ಸಾಲ್ವಡಾರ್ ಡೊ ಮುಂಡೋದಲ್ಲಿ ಜನಿಸಿದ ಫಾ. ಅಟೈಡೆ ಅವರು 1975ರಲ್ಲಿ ಧರ್ಮಗುರುವಾಗಿ ದೀಕ್ಷೆ ಪಡೆದರು.  ದೀಕ್ಷೆಯ ನಂತರ, ಅಟೈಡೆ ಗೋವಾದ ಆರ್ಚ್‌ಡಯಾಸಿಸ್‌ನಲ್ಲಿ ವಿವಿಧ ಹುದ್ದೆಗಳಲ್ಲಿ ಅವರು ಸೇವೆ ಸಲ್ಲಿಸಿದ್ದಾರೆ. ಅವರು ರೋಮ್‌ನ ಅರ್ಬೇನಿಯನ್ ವಿಶ್ವವಿದ್ಯಾಲಯದಿಂದ ಕ್ಯಾನನ್ ಕಾನೂನಿನಲ್ಲಿ ತಮ್ಮ ಶಿಕ್ಷಣ ಪೂರ್ಣಗೊಳಿಸಿದ್ದಾರೆ. ೧೫ ವರ್ಷಗಳ ಕಾಲ ರಾಚೋಲ್‌ನ ಸೆಮಿನರಿಯಲ್ಲಿ ಕ್ಯಾನನ್ ಕಾನೂನಿನ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಅವರು ೧೯೯೦ ರಿಂದ ೨೦೧೯ರವರೆಗೆ ಡಯೋಸಿಸನ್ ನ್ಯಾಯಾಧೀಶರಾಗಿದ್ದರು.

ಇದನ್ನೂ ಓದಿ :   ಆಚಾರ್ಯ ಮಠದಲ್ಲಿ ಶಾರದಾ ಮಾತೆ ಪ್ರತಿಷ್ಠಾಪನೆ

ಪ್ರಸ್ತುತ ಅವರು ಸಾಲಿಗಾವೊ-ಪಿಲರ್ನ್‌ನ ಸೆಮಿನರಿಯಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಲ್ಯಾಟಿನ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ರಾಚೋಲ್‌ನ ಸೆಮಿನರಿಯಲ್ಲಿ ಐತಿಹಾಸಿಕ ಮೊನೊಗ್ರಾಫ್‌ನ ಲೇಖಕರಾಗಿದ್ದಾರೆ. ಕೊಂಕಣಿ ವಲಯಗಳಲ್ಲಿ ಬದ್ಧತೆಯ ಕಾರ್ಯಕರ್ತ ಎಂದು ವ್ಯಾಪಕವಾಗಿ ಪ್ರಸಿದ್ಧರಾಗಿದ್ದಾರೆ.  ಇದೀಗ ಅಖಿಲ ಭಾರತ ಕೊಂಕಣಿ ಪರಿಷತ್ತಿನ (Konkani Parishat) ಅಧ್ಯಕ್ಷರಾಗಿ ಹೊಸ ಜವಾಬ್ದಾರಿ ನಿರ್ವಹಿಸಲಿದ್ದಾರೆ.

ವಿಡಿಯೋ ಸಹಿತ ಇದನ್ನೂ ಓದಿ :  ಹಸಿರು ಪೀಠಕ್ಕೆ ಹೋದವರಿಗೆ ಕಾಂಗ್ರೆಸ್‌ ಬೆನ್ನೆಲುಬು