ಕಾರವಾರ (Karwar) : ರಾಜ್ಯದಲ್ಲಿ (Karnataka) ಬಗರ್‌ಹುಕುಂ (Bagarahukum) ಅರ್ಜಿಗಳು ಲಕ್ಷಾಂತರ ಸಂಖ್ಯೆಯಲ್ಲಿ ಬಂದಿವೆ. ಅವುಗಳನ್ನು ಮುಂದಿನ ಆರು ತಿಂಗಳಲ್ಲಿ ಆಂದೋಲನ ಮಾದರಿಯಲ್ಲಿ ವಿಲೇವಾರಿ ಮಾಡುತ್ತೇವೆ. ರೈತರಿಗೆ ಎಲ್ಲ ದಾಖಲಾತಿಯನ್ನು ಮಾಡಿಕೊಡುತ್ತೇವೆ. ರಾಜ್ಯದಲ್ಲಿ ಇದೇ ಪ್ರಪ್ರಥಮ ಬಾರಿಗೆ ಬಗರುಹುಕುಂ ಕುರಿತು ಮಂಜೂರಾತಿಯನ್ನು ಪ್ರಾರಂಭದಿಂದ ಕೊನೆಯವರಿಗೆ ಸಂಪೂರ್ಣವಾಗಿ ಆನ್ ಲೈನ್ ಮೂಲಕ ಶಿರಸಿಯಲ್ಲಿ (Sirsi) ಈ ಅಭಿಯಾನ ಆರಂಭಿಸುತ್ತಿದ್ದೇವೆ ಎಂದು ರಾಜ್ಯದ ಕಂದಾಯ ಸಚಿವ (Revenue Minister) ಕೃಷ್ಣ ಬೈರೇಗೌಡ (Krishna Byre Gowda) ತಿಳಿಸಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಅವರು ಬುಧವಾರ ಶಿರಸಿಯ ಅಂಬೇಡ್ಕರ್ ಭವನದಲ್ಲಿ ಫಲಾನುಭವಿಗಳಿಗೆ ಬಗರಹುಕುಂ ಸಾಗುವಳಿ ಚೀಟಿ, ಪಹಣಿಪತ್ರಿಕೆ, ಪೋಡಿ ದಾಖಲೆ, ಕಂದಾಯ ಗ್ರಾಮಗಳ ಹಕ್ಕುಪತ್ರ ವಿತರಿಸಿ ಮಾತನಾಡಿದರು. ರಾಜ್ಯದಲ್ಲಿ ಅರಣ್ಯ ಹೊರತುಪಡಿಸಿ ಸುಮಾರು ವರ್ಷಗಳಿಂದ ಸರಕಾರಿ ಹಾಗೂ ಖಾಸಗಿ ಜಮೀನಿನಲ್ಲಿ ಮನೆ ಕಟ್ಟಿಕೊಂಡು ಊರಾಗಿ ಬೆಳೆದು ದಾಖಲೆಯಲ್ಲಿ ಗ್ರಾಮವಾಗದ ತಾಂಡಾ, ಹಟ್ಟಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ : ಭಟ್ಕಳದಲ್ಲಿ ಆನ್‌ಲೈನ್ ವಂಚನೆ; ೧ ಲಕ್ಷ ರೂ. ಗೋತಾ
ತ್ರಿಶಂಕು ಪರಿಸ್ಥಿತಿಯಲ್ಲಿರುವ ೩೮೦೦ ತಾಂಡಾ, ಹಟ್ಟಿ ವಸತಿ ಪ್ರದೇಶಗಳಲ್ಲಿ ವಾಸಿಸುವ ೧.೫ ಲಕ್ಷ ಕುಟುಂಬಗಳಿಗೆ ಶಾಶ್ವತ ಹಕ್ಕುಪತ್ರ ನೀಡುತ್ತೇವೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಅನಧಿಕೃತವಾಗಿ ಸರಕಾರಿ ಜಮೀನು ಸಾಗುವಳಿ ಮಾಡಿಕೊಂಡು ಹಕ್ಕುಪತ್ರ ಪಡೆಯುವುದಕ್ಕೆ ಫಾರ್ಮ್ ೫೭ರಲ್ಲಿ ಬಗರ್ ಹುಕುಂ ಸಮಿತಿಗೆ ಅರ್ಜಿ ಸಲ್ಲಿಸಿದವರಲ್ಲಿ ೬೩೦ ರೈತರಿಗೆ ಮುಂದಿನ ಒಂದು ತಿಂಗಳೊಳಗೆ ಹಕ್ಕುಪತ್ರ ನೀಡುತ್ತೇವೆ ಎಂದು ಕಂದಾಯ ಸಚಿವ (Revenue Minister) ಕೃಷ್ಣ ಬೈರೇಗೌಡ (Krishna Byre Gowda) ತಿಳಿಸಿದರು.
ಇದನ್ನೂ ಓದಿ : ಪಿಡಿಒ ಪರೀಕ್ಷೆ ಹಿನ್ನೆಲೆ ವಿಶೇಷ ಬಸ್ !
ಜಿಲ್ಲೆಯಲ್ಲಿ ೧೬ ದಾಖಲೆ ರಹಿತ ಗ್ರಾಮಗಳಿವೆ. ನೂರಾರು ವರ್ಷಗಳಿಂದ ಬಡವರು ಅಲ್ಲಿ ಬದುಕುತ್ತಿದ್ದಾರೆ. ಅದರಲ್ಲಿ ಮುಂಡಗೋಡದಲ್ಲಿ ೮ ಹಾಗೂ ಹಳಿಯಾಳದಲ್ಲಿ ೮ ಗ್ರಾಮಗಳಿದ್ದು ಅವುಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡುತ್ತಿದ್ದೇವೆ. ಅಲ್ಲಿ ವಾಸಿಸುವ ೫೦ ಕುಟುಂಬಗಳಿಗೆ ಈಗ ಹಕ್ಕುಪತ್ರ ನೀಡುತ್ತಿದ್ದು ವಾರದಲ್ಲಿ ೧೧೨೫ ಕುಟುಂಬಕ್ಕೂ ನೀಡುತ್ತೇವೆ. ಬಾಕಿ ೩೦೦ ಕುಟುಂಬಗಳು ಕನಿಷ್ಠ ಶುಲ್ಕ ತುಂಬಬೇಕಿದ್ದು ಅದಾದ ನಂತರ ಅವರಿಗೂ ನೀಡುತ್ತೇವೆ ಎಂದರು.
ಇದನ್ನೂ ಓದಿ : ಉ.ಕ. ಜಿಲ್ಲೆಯ ಮಗುವಿಗೆ ಅಸ್ಥಿಮಜ್ಜೆ ಕಸಿ
ಅರಣ್ಯ ಹಕ್ಕು ಅರ್ಜಿಗಳು ದೊಡ್ಡ ಸಂಖ್ಯೆಯಲ್ಲಿ ವಿಲೇವಾರಿ ಆಗಬೇಕಾಗಿದೆ. ಜಿಪಂ, ತಾಪಂ ಸದಸ್ಯರು ಇಲ್ಲ ಎಂದು ಅರಣ್ಯ ಹಕ್ಕು ಸಮಿತಿ ಸ್ಥಗಿತವಾಗಬಾರದು ಎಂದು ಸಿಎಂ ಸೂಚನೆ ನೀಡಿದ್ದಾರೆ. ಆದ್ದರಿಂದ ಸ್ಥಳಿಯ ಸಂಸ್ಥೆಗಳಲ್ಲಿ ಜನಪ್ರತಿನಿಧಿಗಳಿಲ್ಲದ್ದಿದ್ದರೂ ಆಯಾ ಆಡಳಿತಾಧಿಕಾರಿಗಳೇ ಇದರ ಸದಸ್ಯರನ್ನಾಗಿ ಮಾಡಿಕೊಂಡು ಅರಣ್ಯ ಹಕ್ಕು ಸಮಿತಿ ಕೆಲಸ ಮಾಡಬೇಕು ಎಂದು ಸಚಿವರು ಜಿಲ್ಲಾಧಿಕಾರಿಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ(Mankal Vaidya), ಶಾಸಕರಾದ ಭೀಮಣ್ಣ ನಾಯ್ಕ, ಶಿವರಾಮ ಹೆಬ್ಬಾರ, ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ, ಸಹಾಯಕ ಆಯುಕ್ತೆ ಕೆ.ವಿ.ಕಾವ್ಯಾರಾಣಿ ಮುಂತಾದವರು ಇದ್ದರು.
ಇದನ್ನೂ ಓದಿ : ಶೆಜ್ಜೇಶ್ವರ ದೇವಸ್ಥಾನದ ಅರ್ಚಕ ನಿಧನ