ಭಟ್ಕಳ (Bhatkal) : ತಾಲೂಕಿನಲ್ಲಿ ಮರಳು ಸಮಸ್ಯೆಯಿಂದ (sand problem) ಜೀವನ ನಡೆಸಲೂ ಕಷ್ಟಪಡುತ್ತಿರುವ ಕೂಲಿ ಕಾರ್ಮಿಕ ಆಕ್ರೋಶ ಇಂದು ಭುಗಿಲೆದ್ದಿತು. ಜಿಲ್ಲಾಧಿಕಾರಿ ಮತ್ತು ಸಚಿವ ಮಂಕಾಳ ವೈದ್ಯ (Mankal Vaidya) ವಿರುದ್ಧ ಸಿಡಿದೆದ್ದ ಕೂಲಿ ಕಾರ್ಮಿಕರು ರಸ್ತೆಗಳಿದು ಬುಧವಾರ ಪ್ರತಿಭಟನೆ ನಡೆಸಿದರು (Labours protest).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಕೂಲಿ ಕಾರ್ಮಿಕರ ಆಕ್ರೋಶ, ದುಃಖ ದುಗುಡ ಎಷ್ಟಿತ್ತೆಂದರೆ ಪ್ರತಿಭಟನೆ ಹಮ್ಮಿಕೊಂಡಿದ್ದ ಸಂಘಟನೆಯ ನಿರೀಕ್ಷೆಗೂ ಮೀರಿ ಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು (labours protest). ತಾಲೂಕಿನ ಮೂಲೆ ಮೂಲೆಗಳಿಂದ ಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗವಹಿಸಿ, ಎಲ್ಲರಿಗೂ ದಿಗಿಲು ಮುಟ್ಟಿಸಿದರು. ಮೆರವಣಿಗೆಯುದ್ದಕ್ಕೂ ಕೂಲಿ ಕಾರ್ಮಿಕರು ತಮ್ಮ ಆಕ್ರೋಶ ಹೊರಹಾಕುತ್ತಿರುವುದು ಕಂಡು ಬಂತು.

ಇದನ್ನೂ ಓದಿ :  ೧೬ರಂದು ಭಟ್ಕಳದಲ್ಲಿ ಬೃಹತ್ ರಕ್ತದಾನ ಶಿಬಿರ

ಆರಂಭದಲ್ಲಿ ಭಟ್ಕಳ ಹಳೆ ಬಸ್ ನಿಲ್ದಾಣ ಬಳಿಯ ಆಟೋ ಚಾಲಕರ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಮೈದಾನದಿಂದ ಮುಖ್ಯ ರಸ್ತೆ ಮಾರ್ಗವಾಗಿ ಪ್ರತಿಭಟನಾ ಮೆರವಣಿಗೆ ನಡೆಯಿತು. ಸಂಶುದ್ದೀನ್ ಸರ್ಕಲ್ ತೆರಳುತ್ತಿದ್ದಂತೆ ಜಿಲ್ಲಾಡಳಿತ ಹಾಗೂ ಸಚಿವರ ವಿರುದ್ದ ಘೋಷಣೆ ಕೂಗುವ ಮೂಲಕ ಕೆಲ ಪ್ರತಿಭಟನಕಾರರು ಹೆದ್ದಾರಿ ತಡೆಗೆ ಮುಂದಾದರು.

ಪೊಲೀಸರು ಹಾಗೂ ಸಂಘಕರು ರಸ್ತೆ ತಡೆ ಮಾಡದಂತೆ ಎಷ್ಟೇ ಹೇಳಿದರೂ ಪ್ರತಿಭಟನಾಕಾರರು ಮಾತು ಕೇಳುವ ಸ್ಥಿತಿಯಲ್ಲಿರಲಿಲ್ಲ. ಈ ಸಂದರ್ಭ  ಪ್ರತಿಭಟನಕಾರರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ, ನೂಕಾಟ ನಡೆಯಿತು. ಹೀಗೆ ತಾಲೂಕಾ ಆಡಳಿತ ಸೌಧಕ್ಕೆ ತೆರಳುವ ತನಕ ಮೂರ್ನಾಲ್ಕು ಕಡೆ ಇದೇ ರೀತಿ ನಡೆಯಿತು.

ಇದನ್ನೂ ಓದಿ :  ಡಿಸಿಎಂ ಬಗ್ಗೆ ಮಂಕಾಳ ವೈದ್ಯ ಏನಂದ್ರು ಗೊತ್ತ?

ಬಳಿಕ ಪ್ರತಿಭಟನಾ ಮೆರವಣಿಗೆ ತಾಲೂಕು ಆಡಳಿತ ಸೌಧಕ್ಕೆ ತೆರಳುತ್ತಿದ್ದಂತೆ ಸಂಘಟಕ ಮಾತಿಗೂ ಬೆಲೆ ನೀಡದ ಪ್ರತಿಭಟನಾಕಾರರು ಸ್ಥಳಕ್ಕೆ ಜಿಲ್ಲಾಧಿಕಾರಿ ಹಾಗೂ ಸಚಿವರು ಬಂದು ಮನವಿ ಸ್ವೀಕರಿಸಬೇಕು. ನಮ್ಮ ಸಮಸ್ಯೆಗೆ ಪರಿಹಾರ ದೊರಕಿಸಿ ಕೊಡಬೇಕು ಎಂದು ಆಗ್ರಹಿಸಿದರು. ಮನವಿ ಸ್ವೀಕರಿಸಲು ಸ್ಥಳಕ್ಕೆ ಸಹಾಯಕ ಆಯುಕ್ತರು ಬಂದರೂ ಸಂಘಟಕರಿಂದ ಮನವಿ ಕೊಡಿಸಲು ಪ್ರತಿಭಟನಕಾರರು ಒಪ್ಪಲಿಲ್ಲ. ಜಿಲ್ಲಾಧಿಕಾರಿ ಹಾಗೂ ಸಚಿವರು ಬರುವುದು ಸಂಜೆ ಆದರೂ, ಅಲ್ಲಿ ತನಕ ನಾವು ಇಲ್ಲೇ ಧರಣಿ ಕುಳಿತುಕೊಳ್ಳುತ್ತೇವೆ ಎಂದು ಪಟ್ಟು ಹಿಡಿದರು.

ಇದನ್ನೂ ಓದಿ : ಹೆಸರೇಳದೆ ಸುನೀಲ ನಾಯ್ಕ ವಿರುದ್ಧ ಮಂಕಾಳ ವೈದ್ಯ ವಾಗ್ದಾಳಿ

ಮಧ್ಯಾಹ್ನ ೨ ಗಂಟೆಯ ಬಳಿಕ ಸಂಘಟಕರು ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು. ತಾಲೂಕಿನ ಮರಳು ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಿ ಕೆಲಸವಿಲ್ಲದ ಬಡ ಕೂಲಿ ಕಾರ್ಮಿಕರಿಗೆ ಸರ್ಕಾರದಿಂದ ನಷ್ಟ ಪರಿಹಾರ ಕೊಡಿಸುವಂತೆ ಆಗ್ರಹಿಸಿ ಮನವಿ ಸಲ್ಲಿಸಿದರು.

ವಿಡಿಯೋ ಸಹಿತ ಇದನ್ನೂ ಓದಿ : ಬೇಕಾಬಿಟ್ಟಿ ಕಾರು ಚಲಾಯಿಸಿದವನಿಗೆ ಬಿತ್ತು ದಂಡ!

ಈ ಸಂದರ್ಭದಲ್ಲಿ ಇಂಜಿನಿಯರ್ಸ್ ಮತ್ತು ಆರ್ಕಿಟೆಕ್ಟ್ ಅಶೋಸಿಯೇಶನ್ ಸಂಘದ ಅಧ್ಯಕ್ಷ ನಾಗೇಂದ್ರ ನಾಯ್ಕ, ಇಂಜಿನಿಯರ್ ಹಾಗೂ ಆರ್ಕಿಟೆಕ್ಚರ್ ಅಸೋಸಿಯೇಷನ್ ಕಾರ್ಯದರ್ಶಿ, ತಾಲೂಕಿನ ಎಲ್ಲಾ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಸಂಚಾಲಕ ಸುರೇಶ ಪೂಜಾರಿ, ಸೆಂಟ್ರಿಂಗ್ ಸಂಘದ ಅಧ್ಯಕ್ಷ ಲೋಕೇಶ ನಾಯ್ಕ, ಕಾರ್ಯದರ್ಶಿ ಶಿವರಾಮ ನಾಯ್ಕ, ಸೆಂಟ್ರಿಂಗ್ ಸಂಘದ ಸಹ ಕಾರ್ಯದರ್ಶಿ ರಾಮ ಹೆಬಳೆ, ಕಟ್ಟಡ ಕೂಲಿ ಕಾರ್ಮಿಕ ಸಂಘದ ಅಧ್ಯಕ್ಷ ಶ್ರೀಧರ ನಾಯ್ಕ ಹೆಬಳೆ, ಕಟ್ಟಡ ಕೂಲಿ ಕಾರ್ಮಿಕ ಸಂಘದ ಮಾಜಿ ಅಧ್ಯಕ್ಷ ಶ್ರೀಧರ ನಾಯ್ಕ ಚೌಥನಿ, ಕಟ್ಟಡ ಕೂಲಿ ಪೇಂಟಿಂಗ್ ಸಂಘದ ರಾಮ ನಾಯ್ಕ, ಮಂಜುನಾಥ ಗೊಂಡ, ಟಿಪ್ಪರ್ ಮಾಲಕರ ಸಂಘದ ಅಜೀಜ್ ಮುಂತಾದವರು ಇದ್ದರು. ಬಿಜೆಪಿ ಮುಖಂಡರು, ಕಾರ್ಯಕರ್ತರು ಮೆರವಣಿಗೆಯಲ್ಲಿ ಪಾಲ್ಗೊಂಡು ಪ್ರತಿಭಟನೆಗೆ ಬೆಂಬಲ ಸೂಚಿಸಿದರು.

ವಿಡಿಯೋ ಸಹಿತ ಇದನ್ನೂ ಓದಿ : ಭಟ್ಕಳದಲ್ಲಿ ಭೀಕರ ಅಪಘಾತ; ಟ್ರಾಫಿಕ್ ಜಾಮ್