ಭಟ್ಕಳ (Bhatkal): ಮೀನುಗಾರಿಕಾ ಮತ್ತು ಬಂದರು, ಒಳ ನಾಡು ಜಲ ಸಾರಿಗೆ, ಜಿಲ್ಲಾ ಉಸ್ತುವಾರಿ ಸಚಿವ (district incharge minister) ಮಂಕಾಳ ವೈದ್ಯ (Mankal Vaidya) ಅವರ ಅಧ್ಯಕ್ಷತೆಯಲ್ಲಿ ತಾಲೂಕು ಪಂಚಾಯತ ಸಭಾಭವನದಲ್ಲಿ ಮಂಗಳವಾರ ನಡೆದ ತ್ರೈಮಾಸಿಕ ಕೆ.ಡಿ.ಪಿ. ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿವಿಧ ಇಲಾಖೆಗಳಲ್ಲಿ ಇರುವ ಸಿಬ್ಬಂದಿ ಕೊರತೆ (lack of staff) ವಿಷಯ ಮಾರ್ದನಿಸಿತು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಇಲಾಖಾವಾರು ಪ್ರಗತಿ ಪರಿಶೀಲನೆಯನ್ನು ಸಚಿವ ಮಂಕಾಳ ವೈದ್ಯ, ಅಧಿಕಾರಿಗಳಿಂದ ಸಿಬ್ಬಂದಿ ಕೊರತೆ ಸಮಸ್ಯೆಯನ್ನು ಎದುರಿಸಬೇಕಾಯಿತು. ಆರೋಗ್ಯ (health) ಇಲಾಖೆ, ಕೃಷಿ (agriculture) ಇಲಾಖೆ, ಶಿಕ್ಷಣ (education) ಇಲಾಖೆಗಳಲ್ಲಿ ಇರುವ ಸಿಬ್ಬಂದಿ ಕೊರತೆ (lack of staff) ಬಗ್ಗೆ ಅಧಿಕಾರಿಗಳು ಪ್ರಸ್ತಾಪಿಸಿದರು. ಹಾಗಂತ ಈ ಮೂರೇ ಇಲಾಖೆಯಲ್ಲಿ ಸಮಸ್ಯೆ ಇರೋದು ಅಂತಲ್ಲ. ಇದರ ಹೊರತಾಗಿ ಬೇರೆ ಇಲಾಖೆಗಳಲ್ಲೂ ಸಿಬ್ಬಂದಿ ಕೊರತೆಯಿದೆ.
ವಿಡಿಯೋ ಸಹಿತ ಇದನ್ನೂ ಓದಿ : ಭಟ್ಕಳದಲ್ಲಿ ಶಂಕಿತ ಎರಡು ಕಾಲರಾ ಪ್ರಕರಣ ಪತ್ತೆ
ತಾಲೂಕು ಆರೋಗ್ಯಾಧಿಕಾರಿ ಡಾ.ಸವಿತಾ ಕಾಮತ ಮಾತನಾಡಿ, ತಾಲೂಕು ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆಯಿದೆ. ಅದರಲ್ಲೂ ಸ್ಟಾಫ್ ನರ್ಸ್ ಕೊರತೆ ಇದೆ ಎಂದು ಹೇಳಿದರರು. ಜನರನ್ನು ಸ್ಪಂದಿಸಲು ಸಮಸ್ಯೆ ಆಗುತ್ತಿದೆ ಎಂದ ಅವರು, ಸ್ಟಾಫ್ ನರ್ಸಗಳ ಬೇಡಿಕೆಯನ್ನು ಸಚಿವರ ಮುಂದಿಟ್ಟರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಮಂಕಾಳ ವೈದ್ಯ, ಭಟ್ಕಳದಲ್ಲಿ ೨೫೦ ಬೆಡ್ ನಿರ್ಮಾಣ ಆಗದಿದ್ದರೆ ಸ್ಟಾಫ್ ನರ್ಸ್ ಸಮಸ್ಯೆ ಬಗೆಹರಿಯುವುದಿಲ್ಲ. ಯಾವ ರೋಗಿನೂ ವಾಪಸು ಕಳುಹಿಸಬೇಡಿ. ಸಿಬ್ಬಂದಿ ಕೊರತೆ ಸರಿಪಡಿಸಲು ಸರಕಾರದ ಮಟ್ಟದಲ್ಲಿ ೨೫೦ ಬೆಡ್ ಆಸ್ಪತ್ರೆಯ ಅನುಮತಿ ಪಡೆದುಕೊಳ್ಳಲು ಶತಪ್ರಯತ್ನ ಮಾಡುತ್ತಿದ್ದೇನೆ. ಇದರಿಂದ ಆಸ್ಪತ್ರೆಯಲ್ಲಿ ಅಂದಾಜು ೧೦೦ ವೈದ್ಯಕೀಯ ಸಿಬ್ಬಂದಿ ಜಾಸ್ತಿ ಆಗಲಿದ್ದಾರೆ ಎಂದರು.
ಇದನ್ನೂ ಓದಿ : ನರೇಗಾ ಕೂಲಿಕಾರರ ಮಗನಿಗೆ ೭ ಚಿನ್ನದ ಪದಕ
ಕೃಷಿ ಇಲಾಖೆ ಅಧಿಕಾರಿ ಮಾತನಾಡಿ, ಈ ಬಾರಿ ವಾಡಿಕೆ ಮಳೆಗಿಂತ ಜಾಸ್ತಿ ಮಳೆ ಆಗಿದೆ. ೪೬ ಎಕರೆ ಕೃಷಿ ಭೂಮಿ ಹಾನಿ ಆಗಿದೆ. ಈ ಬಗ್ಗೆ ಸರ್ವೇ ನಡೆಸಿ ವರದಿಯನ್ನು ಕಂದಾಯ ಇಲಾಖೆಗೆ ನೀಡಿದ್ದೇವೆ. ಸದ್ಯ ಇಲಾಖೆಯ ಅಂದಾಜು ಹಾನಿ ಪರಿಹಾರ ೫.೧೩ ಲಕ್ಷವಿದೆ ಎಂದರು. ಸಿಬ್ಬಂದಿ ಕೊರತೆ ಬಗ್ಗೆ ಸಚಿವರ ಗಮನಕ್ಕೆ ತಂದ ಅವರು, ಸದ್ಯ ಮಾವಳ್ಳಿ ಕಟ್ಟಡ ನಿರ್ಮಾಣದ ಹಂತದಲ್ಲಿದೆ. ಬೀಜ ಮತ್ತು ಕೃಷಿ ಉಪಕರಣಗಳ ದಾಸ್ತಾನಿಗೆ ಇದರಿಂದ ಅನೂಕೂಲವಾಗಿದೆ ಎಂದರು.
ಇದನ್ನೂ ಓದಿ : ಮೈಸೂರು ದಸರಾಕ್ಕೆ ಜಿಲ್ಲೆಯ ನೋಡಲ್ ಅಧಿಕಾರಿ ನೇಮಕ
ಆ ಬಳಿಕ ಶಿಕ್ಷಣ ಇಲಾಖೆ ಅಧಿಕಾರಿ ಮಾತನಾಡಿ, ಶೈಕ್ಷಣಿಕ ಇಲಾಖೆಯ ಈ ವರ್ಷ ಪಠ್ಯಪುಸ್ತಕ, ಶೂ ಬಟ್ಟೆ ಸಂಪೂರ್ಣ ವಿತರಣೆ ಆಗಿದೆ. ೧೪ ಅತಿಥಿ ಉಪನ್ಯಾಸಕ ಕೊರತೆ ಇದೆ ಎಂದು ಸಚಿವರಲ್ಲಿ ವಿಷಯ ಪ್ರಸ್ತಾಪಿಸಿದರು. ಇದಕ್ಕೆ ಸಚಿವ ಮಂಕಾಳ ವೈದ್ಯ ಪ್ರತಿಕ್ರಿಯಿಸಿ, ಅಂಗನವಾಡಿಯಿಂದ ಶಾಲೆಯ ತನಕ ಶಿಕ್ಷಣಕ್ಕೆ ಯಾವುದೇ ಕೊರತೆ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಿಮ್ಮದು. ಪ್ರತಿ ತಿಂಗಳಿಗೊಮ್ಮೆ ವಿವಿಧ ಶಾಲೆಗಳಿಗೆ ಅಧಿಕಾರಿಗಳು, ನೀವು ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಬೇಕು. ಎಲ್ಲೂ ಸಿಗದ ನೆಮ್ಮದಿ ಶಾಲೆಯಲ್ಲಿ ಸಿಗುತ್ತದೆ. ಶಾಲೆಗಳಿಗೆ ಭೇಟಿ ನೀಡಿ. ಕೊರತೆ ಆಗದಂತೆ ನೋಡಿಕೊಳ್ಳಿ. ರಾಜ್ಯಕ್ಕೆ ಮೊದಲ ಸ್ಥಾನ ಬರುವಂತೆ ನಿಮ್ಮ ಪ್ರಯತ್ನ ಇರಲಿ. ಪಾಲಕರ ಸಹಕಾರ ಪಡೆದು ವಿದ್ಯಾರ್ಥಿಗಳಿಗೆ ಶಿಕ್ಷಣ ಸಿಗುವಂತೆ ಮಾಡಬೇಕು ಎಂದರು.
ಇದನ್ನೂ ಓದಿ : ಸೆಪ್ಟೆಂಬರ್ ೨೪ರಂದು ವಿವಿಧೆಡೆ ಅಡಿಕೆ ಧಾರಣೆ