ಕಾರವಾರ (Karwar) : ಐದು ದಿನಗಳ ಹಿಂದೆ ಕಾಣೆಯಾಗಿದ್ದ (missing) ಭಟ್ಕಳದ ಯುವತಿ ಪತ್ತೆಗೆ ಸಹಕರಿಸುವಂತೆ ಉತ್ತರ ಕನ್ನಡ (uttarakannada) ಜಿಲ್ಲಾ ಪೊಲೀಸ್ ಇಲಾಖೆ ಪ್ರಕಟಣೆ ನೀಡಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಭಟ್ಕಳ (Bhatkal) ತಾಲೂಕಿನ ವೆಂಕಟಾಪುರ ಹನಿಫಾಬಾದಿನ ಆಜಾದ್ ನಗರ ಆರನೇ ಕ್ರಾಸ್ ನಿವಾಸಿ ಬಿಬಿಜಾನ್ ಹಸನ ಮುಲ್ಲಾ (೩೦) ಕಾಣೆಯಾದವರು.  ಇವರು ಜ.೧೭ರಂದು ಸಂಜೆ ೪.೩೦ ಗಂಟೆಗೆ ಮನೆಯಲ್ಲಿ ಅಂಗಡಿಗೆ ಸಾಮಾನು ತರುತ್ತೇನೆ ಎಂದು ಹೇಳಿ ಹೋದವರು ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದಾರೆ (missing).

ವಿಡಿಯೋ ಸಹಿತ ಇದನ್ನು ಓದಿ : ಪೊಲೀಸರ ವಿರುದ್ಧ ಆಟೋ ಚಾಲಕರ ದಿಢೀರ್ ಪ್ರತಿಭಟನೆ

ಗೋಧಿ ಬಣ್ಣದ ಉದ್ದನೆ ಮುಖ, ತೆಳ್ಳನೆಯ ಮೈ ಕಟ್ಟು, ೫ ಅಡಿ ಎತ್ತರ ಇದ್ದಾರೆ. ಉರ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೊರಡುವಾಗ ಮ್ಯಾಕ್ಸಿ ಹಾಗೂ ಕಪ್ಪು ಬುರ್ಖಾ ಧರಿಸಿದ್ದರು. ಇವರು ಕಂಡು ಬಂದಲ್ಲಿ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ:೦೮೩೮೫-೨೨೭೩೩೩, ಪಿಎಸ್‌ಐ ಭಟ್ಕಳ ಗ್ರಾಮೀಣ ಠಾಣೆ ದೂರವಾಣಿ ಸಂಖ್ಯೆ:೯೪೮೦೮೦೫೨೫೨, ಕಾರವಾರ ಪೊಲೀಸ್ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ: ೦೮೩೮೨-೨೨೬೫೫೦/೧೧ ಅಥವಾ ೧೦೦ ಸಂಖ್ಯೆಗೆ ಸಂಪರ್ಕಿಸುವಂತೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ಪಿ.ಎಸ್.ಐ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನು ಓದಿ : ಕಾರು ಡಿಕ್ಕಿಯಾಗಿ ಯುವತಿ ಸ್ಥಳದಲ್ಲಿಯೇ ಸಾವು