ಅಂಕೋಲಾ : ತಾಲೂಕಿನ ಶಿರೂರು ಬಳಿಯ ಗುಡ್ಡಕುಸಿತ(land slide) ಪ್ರಕರಣದಲ್ಲಿ ನಾಪತ್ತೆಯಾಗಿದ್ದ ಮಹಿಳೆಯ ಶವ ಪತ್ತೆಯಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಸಣ್ಣಿ ಹನ್ಮಂತ ಗೌಡ (೫೭) ಮೃತ ಮಹಿಳೆ. ಘಟನೆ ನಡೆದ ೮ ದಿನದ ಬಳಿಕ ಗಂಗಾವಳಿ ನದಿಯ ಗಂಗೆಕೊಳ್ಳ ಸಮೀಪ ಶವ ಪತ್ತೆಯಾಗಿದೆ.

ವಿಡಿಯೋ ಸಹಿತ ಇದನ್ನೂ ಓದಿ : ಭಾರಿ ಮಳೆಗೆ ಮುಳುಗಿದ ದತ್ತ ಮಂದಿರ

ಶಿರೂರು ಗುಡ್ಡ ಕುಸಿತದಿಂದಾಗಿ ಉಳುವರೆ ಗ್ರಾಮದಲ್ಲಿ ಕಾಣಿಸಿಕೊಂಡ ಹಠಾತ್ ನೆರೆಯಲ್ಲಿ ಮಹಿಳೆ ಸಣ್ಣಿ ಗೌಡ ಕಾಣೆಯಾಗಿದ್ದರು.

ಇದನ್ನೂ ಓದಿ : ವಾಹನ ಚಾಲಕ – ಮಾಲಕರಿಗೆ ಪೊಲೀಸ್ ಇಲಾಖೆ ಸೂಚನೆ

ಶಿರೂರು ಗುಡ್ಡ ಕುಸಿತ (land slide) ಘಟನೆಯಲ್ಲಿ ಇದುವರೆಗೂ ೮ ಮಂದಿಯ ಶವ ಪತ್ತೆಯಾಗಿದೆ. ಇನ್ನೂ ಮೂವರಿಗಾಗಿ ಶೋಧ ಮುಂದುವರೆದಿದೆ.

ಇದನ್ನೂ ಓದಿ : ಸಾಲ ತುಂಬಲು ಹೇಳಿದ್ದಕ್ಕೆ ಮಗನಿಂದಲೇ ತಂದೆ ಮೇಲೆ ಹಲ್ಲೆ

NDRF-SDRF, ಮಿಲಿಟರಿ ಕಾರ್ಯಪಡೆಯಿಂದ ಶೋಧ ಕಾರ್ಯ ಮುಂದುವರೆದಿದೆ. ಬೆಂಗಳೂರು ಹಾಗೂ ಹುಬ್ಬಳ್ಳಿ- ಧಾರವಾಡದಿಂದ ಡೀಫ್ ಸರ್ಚ್ ಮೆಟಲ್ ಡಿಟೆಕ್ಟರ್ ಮತ್ತು ನುರಿತ ಶೋಧನಾ ತಂಡಗಳು ಕಾರ್ಯಾಚರಿಸುತ್ತಿವೆ. ಇವರಿಗೆ ಜಿಲ್ಲೆಯ ಎ.ಎಸ್.ಸಿ ತಂಡ, ಶ್ವಾನದಳ ಹಾಗೂ ಪೊಲೀಸ್ ಅಧಿಕಾರಿ/ಸಿಬ್ಬಂದಿ ಸಹಕರಿಸುತ್ತಿದ್ದಾರೆ.

ಇದನ್ನೂ ಓದಿ : ಶಿಕ್ಷಕರಿಗೊಂದು ಶುಭ ಸುದ್ದಿ