ಸಾಗರ (Sagar): ತಾಲೂಕಿನ ಮೇಲಿನ ಗೋಳಗೋಡು, ಖಂಡಿಕಾ, ಹುಳೇಗಾರು, ಗುಡ್ಡೇದಿಂಬ, ಕಲ್ಮಕ್ಕಿ ಗ್ರಾಮಗಳಲ್ಲಿ ಕಳೆದೊಂದ ಒಂದೂವರೆ ತಿಂಗಳಿಂದ ಚಿರತೆಯೊಂದು (leopard) ಓಡಾಡುತ್ತಿರುವುದು ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ. ಈ ಗ್ರಾಮಗಳಲ್ಲಿ ವಾಸದ ಮನೆಗಳ ಹತ್ತಿರ ಚಿರತೆ ಬಂದು ಹೋಗುತ್ತಿದೆ. ಅದನ್ನು ಹಿಡಿದು ಸ್ಥಳಾಂತರಿಸಬೇಕು ಎಂದು ಸಾಗರದ ವಲಯ ಅರಣ್ಯಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಚಿರತೆಯು (leopard) ಸಾಕು ನಾಯಿಗಳನ್ನ , ದನ-ಕರುಗಳನ್ನು ಹಿಡಿದು ತಿನ್ನುತ್ತಿದ್ದು, ಭಯದ ವಾತಾವರಣ ನಿರ್ಮಾಣವಾಗಿದೆ. ಇತ್ತೀಚೆಗೆ ಮೇಲಿನ ಗೋಳಗೋಡು ವಾಸಿ ರತ್ನಮ್ಮ ಶಿವರಾಮ ಅವರ ಮನೆಯ ಅಂಗಳಕ್ಕೆ ಚಿರತೆ ಬಂದಿತ್ತು. ಅಲ್ಲಿಯ ನಿವಾಸಿಗಳೆಲ್ಲ ಒಟ್ಟಾಗಿ ಕೂಗಿಕೊಂಡಾಗ ಚಿರತೆ ಓಡಿ ಹೋಗಿದೆ. ಚಿರತೆ ಮನುಷ್ಯರನ್ನ ಕೊಲ್ಲುವುದಕ್ಕಿಂತ ಮುಂಚಿತವಾಗಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಇದನ್ನೂ ಓದಿ :   ಅಂಜುಮನ್‌ ಕಾಲೇಜು ಬಳಿ ಗಾಂಜಾ ಮಾರಾಟ !