ಅಂಕೋಲಾ (Ankola): ತಾಲೂಕಿನ ಬೆಳಸೆ ಗ್ರಾಮದಲ್ಲಿ ಪತ್ರ ಬರೆದಿಟ್ಟು ಭಗ್ನಪ್ರೇಮಿಯೋರ್ವ ಆತ್ಮಹತ್ಯೆಗೆ ಶರಣಾಗಿದ್ದಾನೆ.  ನನ್ನ ಪರಿಸ್ಥಿತಿ ಯಾರಿಗೂ ಬರುವುದು ಬೇಡ… ಸಾರಿ ಅಮ್ಮ, ನನ್ನ ಹತ್ರ ಆಗುದಿಲ್ಲ ಎಂದು ಪತ್ರದಲ್ಲಿ ತಾಯಿಯ ಕ್ಷಮೆ ಕೇಳಿದ್ದಾನೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಅಂಕೋಲಾ (Ankola) ತಾಲೂಕಿನ ವಾಸರಕುದ್ರಿಗೆ ಗ್ರಾಪಂ ವ್ಯಾಪ್ತಿಯ ಮೇಲಿನಗುಳಿ ಯುವಕ ಸಂತೋಷ ಗೌಡ (೩೧) ಸಾವಿಗೆ ಶರಣಾದ ಯುವಕ. ಮಾವಿನಮರಕ್ಕೆ ನೇಣು ಬಿಗಿದುಕೊಂಡು ಯುವಕ ಕೊರಳೊಡಿದ್ದಾನೆ. ನಾವಿಬ್ಬರೂ ೮ ವರ್ಷದಿಂದ ಪ್ರೀತಿಸುತ್ತಿದ್ವಿ. ಆದರೆ ನಂಗೆ ಈಗ ಬಿಟ್ಟಿದ್ದಾಳೆ ಎಂದು ಪತ್ರದಲ್ಲಿ ಯುವತಿಯ ಹೆಸರು ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.  ನನಗೆ ಬದುಕಲು ಆಗುತ್ತಿಲ್ಲ, ಊಟಾನೂ ಸೇರುತ್ತಿಲ್ಲ, ನಿದ್ದೆನೂ ಬರುತ್ತಿಲ್ಲ, ನಾವಿಬ್ಬರು ಪ್ರೀತಿ ಮಾಡುವ ಇಡೀ ವಿಷಯ ಊರಿನವರಿಗೂ ಗೊತ್ತು… ಎಂದೆಲ್ಲ ಪತ್ರದಲ್ಲಿ ಬರೆದಿದ್ದಾನೆ.

ಇದನ್ನೂ ಓದಿ : NIA Arrested/ ಬೇಹುಗಾರಿಕೆ ಪ್ರಕರಣದಲ್ಲಿ ೮ ಜನರನ್ನು ಬಂಧಿಸಿದ ಎನ್‌ಐಎ