ಭಟ್ಕಳ(Bhatkal): ಶಿವಮೊಗ್ಗದಲ್ಲಿ (Shivamogga) ನಡೆದ ೫ನೇ ಓಪನ್ ಅಂತರಾಷ್ಟ್ರೀಯ (International) ಕರಾಟೆ (Karate) ಪಂದ್ಯಾವಳಿ-೨೦೨೪ರಲ್ಲಿ ಭಾಗವಹಿಸಿದ್ದ ಮಣ್ಕುಳಿಯ ಆದ್ಯ ರವಿ ನಾಯ್ಕ (೯ ವರ್ಷ) ಅತ್ಯುತ್ತಮ ಪ್ರದರ್ಶನ ತೋರಿ ಎರಡು ಚಿನ್ನದ ಪದಕ (Gold medal) ಪಡೆದಿದ್ದಾಳೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಕರಾಟೆಯ ಜ್ಯೂನಿಯರ ವಿಭಾಗದ ಕಟಾ ಹಾಗೂ ಕುಮಿತೆ ಪ್ರದರ್ಶನದಲ್ಲಿ ಚಿನ್ನದ ಪದಕ (Gold medal) ಪಡೆದು ಕೀರ್ತಿ ತಂದಿದ್ದಾಳೆ. ಈ ಪಂದ್ಯಾವಳಿಯಲ್ಲಿ ನೇಪಾಳ ಮತ್ತು ಶ್ರೀಲಂಕಾ ದೇಶದ ಕ್ರೀಡಾಪಟುಗಳು ಭಾಗವಹಿಸಿದ್ದರು. ಆನಂದ ಆಶ್ರಮ ಕಾನ್ವೆಂಟ್‌ ಶಾಲೆಯಲ್ಲಿ ೫ನೇ ತರಗತಿ ಓದುತ್ತಿರುವ ಈಕೆ ಮಣ್ಕುಳಿಯ ನಿವಾಸಿಯಾದ ರವಿ ನಾಯ್ಕ ಹಾಗೂ ಪ್ರೇಮಲತಾ ದಂಪತಿಯ ಪುತ್ರಿಯಾಗಿದ್ದಾಳೆ. ಈ ಹಿಂದೆಯೂ ಅನೇಕ ಪಂದ್ಯಾವಳಿಯಲ್ಲಿ ಪದಕಗಳನ್ನು ಈಕೆ ಜಯಿಸಿದ್ದಾಳೆ. ಈಕೆಯ ಸಾಧನೆಗೆ ಭಟ್ಕಳದ ಶೋಟೋಕಾನ್ ಕರಾಟೆ ಶಾಲೆಯ ತರಬೇತುದಾರರು, ಶಿಕ್ಷಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ವಿಡಿಯೊ ಸಹಿತ ಇದನ್ನೂ ಓದಿ :  ಗರ್ಭಿಣಿಯ ಗರ್ಭಕೋಶದಲ್ಲಿ ಮಲಮತ್ತ; ಸರ್ಕಾರಿ ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ