ಬೆಂಗಳೂರು (Bengaluru): ಗುರುವಾರ ಸಂಜೆ ನ್ಯಾಯಾಲಯದ ಸಭಾಂಗಣದಲ್ಲಿ ಕರ್ನಾಟಕ ಮೇಲ್ಮನವಿ ನ್ಯಾಯಾಧಿಕರಣದ ಕಚೇರಿ (KAT) ಅಧೀಕ್ಷಕ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ (Lokayukta) ಬಲೆಗೆ ಸಿಕ್ಕಿಬಿದ್ದಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಅಧಿಕಾರಿ ಸುರೇಶ್ ಎಸ್. ಬಲೆಗೆ ಬಿದ್ದವರು. ಎಂ. ಎಸ್. ಕಟ್ಟಡದಲ್ಲಿ  ಕೆಎಟಿ ಕೋರ್ಟ್ ಹಾಲ್ ನಂ. ೫ನಲ್ಲಿ ಈ ಘಟನೆ ನಡೆದಿದೆ. ಇವರು ಉತ್ತರ ಕನ್ನಡ (uttarakannada) ಜಿಲ್ಲೆಯ ಶಿರಸಿಯ (Sirsi) ಕೃಷಿಕ ಬಸವರಾಜು ಎಂಬುವರಿಂದ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ : ಗುರು ವಿದ್ಯಾಧಿರಾಜ ಪಿ.ಯು. ಕಾಲೇಜಿನಲ್ಲಿ ವಾರ್ಷಿಕೋತ್ಸವ

ಬಸವರಾಜು ಅವರು ತಮ್ಮ ಊರಿನಲ್ಲಿ ವಸತಿ ಕಟ್ಟಡ ನಿರ್ಮಿಸಲು ೩೫ ಲಕ್ಷ ರೂ.ಸಾಲ ಬಯಸಿದ್ದರು. ಅವರು ಸಾಲಕ್ಕಾಗಿ ಶಿರಸಿಯಲ್ಲಿ ಬ್ಯಾಂಕ್ ವೊಂದನ್ನು ಸಂಪರ್ಕಿಸಿದ್ದರು. ಗೃಹ ಸಾಲ ನೀಡಲು ಸಾಧ್ಯವಾಗುವುದಿಲ್ಲ ಎಂದು ಬ್ಯಾಂಕ್ ಸಿಬ್ಬಂದಿ ಬಸವರಾಜು ಅವರಿಗೆ ತಿಳಿಸಿದ್ದು, ಬದಲಿಗೆ ವ್ಯಾಪಾರ ಸಾಲಕ್ಕೆ ಪ್ರಯತ್ನಿಸುವಂತೆ ಸೂಚಿಸಿದ್ದರು ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ : FOREST LAND/ ಉಳ್ಳವರಿಗೊಂದು, ಬಡವರಿಗೊಂದು ಕಾನೂನಾ ?

ಬ್ಯಾಂಕ್ ಸಿಬ್ಬಂದಿ ಶಿವಲೀಲಾ ಎಂಟರ್‌ಪ್ರೈಸಸ್ ಹೆಸರಿನಲ್ಲಿ ಸಂಸ್ಥೆಯನ್ನು ನೋಂದಾಯಿಸಲು ಸಹಾಯ ಮಾಡಿದ್ದರು. ಕೇವಲ ೩೫ ಲಕ್ಷ ರೂ.ಗಳ ಅಗತ್ಯವಿದ್ದರೂ 1 ಕೋಟಿ ರೂ. ಸಾಲ ಮಂಜೂರು ಮಾಡಲು ಶ್ಯೂರಿಟಿಯಾಗಿ ಬಸವರಾಜು ಅವರಿಂದ ನಾಲ್ಕು ಚೆಕ್ ಗಳನ್ನು ಬ್ಯಾಂಕ್ ತೆಗೆದುಕೊಂಡಿತ್ತು. ಅವರು ಸಾಲದ ಮೊತ್ತವನ್ನು ಅವರ ಹೆಸರಿನಲ್ಲಿ 1 ಕೋಟಿ ರೂ. ಎಂದು ತೋರಿಸಿದ್ದರು. ಆದರೆ ಅವರು ಕೇವಲ 35 ಲಕ್ಷ ರೂ. ಪಡೆದಿದ್ದು, ಉಳಿದ 65 ಲಕ್ಷ ರೂ.ಗಳನ್ನು ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ARREST/ ಭಟ್ಕಳದಲ್ಲಿ ಗಾಂಜಾ ಘಾಟು

ಇದಾದ ನಂತರ 1.05 ಕೋಟಿ ರೂಪಾಯಿ ಬಡ್ಡಿ ಸಮೇತ ಮರುಪಾವತಿ ಮಾಡುವಂತೆ ಬಸವರಾಜುಗೆ ಬ್ಯಾಂಕ್ ನೋಟಿಸ್ ಕಳುಹಿಸಿತ್ತು. ಬ್ಯಾಂಕ್‌ ನ್ಯಾಯಾಲಯದ ಮೊರೆ ಹೋಗಿದ್ದು, ಬ್ಯಾಂಕ್‌ಗೆ ಹಣ ಪಾವತಿಸುವಂತೆ ಬಸವರಾಜುಗೆ ಆದೇಶಿಸಿತ್ತು.

ಇದನ್ನೂ ಓದಿ:  ಮದ್ಯ ಸೇವಿಸಿ ಬೈಕ್‌ ಚಲಾಯಿಸಿದವಗೆ ಬಿತ್ತು ದಂಡ

ಈ ಆದೇಶವನ್ನು ಕೃಷಿಕ ಬಸವರಾಜು ಬೆಂಗಳೂರಲ್ಲಿ (Bengaluru) ಕೆಎಟಿ ಮುಂದೆ ಪ್ರಶ್ನಿಸಿದ್ದರು. ಸುರೇಶ್ ಅವರನ್ನು ಭೇಟಿ ಮಾಡಿದಾಗ ನ್ಯಾಯಾಲಯದ ಆದೇಶಕ್ಕೆ ತಡೆಯಾಜ್ಞೆ ತರುವುದಾಗಿ ಭರವಸೆ ನೀಡಿದ್ದರು. ಕೋರ್ಟ್ ಹಾಲ್ ನಂ.ನಲ್ಲಿ ಕುಳಿತಿದ್ದ ಇಬ್ಬರು ನ್ಯಾಯಮೂರ್ತಿಗಳ ಹೆಸರನ್ನು ಸುರೇಶ್ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇಬ್ಬರು ನ್ಯಾಯಾಧೀಶರಿಗೆ 50,000 ರೂ. ಅಲ್ಲದೆ ಆದೇಶ ಪಡೆಯಲು ನ್ಯಾಯಾಲಯದಲ್ಲಿ ಠೇವಣಿ ಇಡಲು 25 ಲಕ್ಷ ವ್ಯವಸ್ಥೆ ಮಾಡುವಂತೆ ಬಸವರಾಜುಗೆ ತಿಳಿಸಿದ್ದರು.

ಇದನ್ನೂ ಓದಿ : ಬಹರೇನ್‌ನಲ್ಲಿ ಭಟ್ಕಳದ ಕಲಾವಿದನ ಪ್ರದರ್ಶನ

ಬಸವರಾಜು ಅವರಿಗೆ ಸುರೇಶನಿಗೆ ಲಂಚ ಕೊಡಲು ಇಷ್ಟವಿರಲಿಲ್ಲ. ಹೀಗಾಗಿ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕ ಸತೀಶ್ ಎಂ.ಎಚ್. ಅವರನ್ನು ಸಂಪರ್ಕಿಸಿ ದೂರು ದಾಖಲಿಸಿದ್ದರು. ಬಸವರಾಜು ಕೋರ್ಟ್ ಹಾಲ್ ನಂ. ೫ನಲ್ಲಿ ಗುರುವಾರ ಲಂಚದ ಮೊತ್ತವನ್ನು ನೀಡಿದಾಗ ಲೋಕಾಯುಕ್ತ ಅಧಿಕಾರಿಗಳು ಸುರೇಶ್ ಅವರನ್ನು ಬಲೆಗೆ ಬೀಳಿಸಿದ್ದಾರೆ 

ಇದನ್ನೂ ಓದಿ : ಭೀಮಾ ನದಿಯ ಕಡವಿನಕಟ್ಟೆ ಅಣೆಕಟ್ಟಿನಲ್ಲಿ ಹೂಳು