ಹೊನ್ನಾವರ (Honnavar) : ತಮಿಳುನಾಡಿನಿಂದ ಪಿವಿಸಿ ಸೀಟ್ ಗಳನ್ನು ಹೊತ್ತುಕೊಂಡು ಭಟ್ಕಳಕ್ಕೆ (Bhatkal) ಬರುತ್ತಿದ್ದ ಲಾರಿ ಪಲ್ಟಿಯಾದ (overturned) ಘಟನೆ ಫೆ.೩ರಂದು ರಾತ್ರಿ ೮.೩೦ ರ ಸುಮಾರಿಗೆ ಹೊನ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿವಿಡಿಯೋ

ಹೊನ್ನಾವರ ತಾಲೂಕಿನ ಗೇರುಸೊಪ್ಪ ಬಳಿಯ ಸೂಳೆಮುರ್ಕಿ ತಿರುವಿನ ಹತ್ತಿರ  ರಾಷ್ಟ್ರೀಯ ಹೆದ್ದಾರಿ 69ರಲ್ಲಿ ಈ ಘಟನೆ ನಡೆದಿದೆ. ರಸ್ತೆಯು ತೀವ್ರ ತಿರುವಿನಿಂದ ಕೂಡಿದ್ದರೂ ಸಹ ತನ್ನ  ವೇಗವನ್ನು ನಿಯಂತ್ರಿಸದೇ ಇರುವುದರಿಂದ ಅಪಘಾತ ನಡೆದಿದೆ. ಸಾಗರ (Sagar) ಕಡೆಯಿಂದ ಹೊನ್ನಾವರ ಕಡೆಗೆ ಅತಿವೇಗ ಹಾಗೂ ಅಜಾಗೂರೂಕತೆಯಿಂದ ಚಲಾಯಿಸಿಕೊಂಡು ಬಂದು ತನ್ನ ಚಾಲನಾ ನಿಯಂತ್ರಣ ಕಳೆದುಕೊಂಡು ಲಾರಿಯನ್ನು ಹೆದ್ದಾರಿ ಎಡಬದಿಯಲ್ಲಿ ಪಲ್ಟಿ ಕೆಡವಿ (overturned) ಅಪಘಾತಪಡಿಸಲಾಗಿದೆ.

ಇದನ್ನು ಓದಿ : Marriage Anniversary/ ಪುಸ್ತಕ ಮಾರಾಟದಿಂದ ಬಂದ ಹಣ ಕ್ಯಾನ್ಸರ್ ರೋಗಿಗಳಿಗೆ ದಾನ

ಲಾರಿ ಜಖಂಪಡಿಸಿದಲ್ಲದೇ ಹೆದ್ದಾರಿ ಬದಿಯಲ್ಲಿದ್ದ ವಿದ್ಯುತ್ ಕಂಬವನ್ನು ಸಹ ಜಖಂಪಡಿಸಲಾಗಿದೆ. ಅಪಘಾತಕ್ಕೀಡಾದ ಲಾರಿಯಲ್ಲಿ ಲೋಡ್ ಮಾಡಿಕೊಂಡು ಬಂದಿದ್ದ ಪಿವಿಸಿ ಶೀಟ್‌ಗಳನ್ನು ಭಟ್ಕಳದ ಶ್ರೀ ನಾಗಶ್ರೀ ಡಿಸ್ಟ್ರಿಬ್ಯೂಟರ್ ಗೆ ತಲುಪಿಸಬೇಕಾಗಿತ್ತು. ಆ ಶೀಟ್‌ಗಳನ್ನು ಅಪಘಾತಕ್ಕೀಡಾದ ಲಾರಿಯಿಂದ ಇನ್ನೊಂದು ವಾಹನದಲ್ಲಿ ಹಾಕಿಕೊಂಡು ಭಟ್ಕಳದ ಶ್ರೀ ನಾಗಶ್ರೀ ಡಿಸ್ಟ್ರಿಬ್ಯೂಟರ್ ಗೆ ಡೆಲಿವರಿ ಮಾಡಲಾಗಿದೆ.  ಈ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನು ಓದಿ : Bhatkal/ ಖೇತಪೈ ನಾರಾಯಣ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ