ಶಿರಸಿ (Sirsi) : ಹತ್ತು ವರ್ಷದಿಂದ ಪ್ರೀತಿಸುತ್ತಿದ್ದ ಯುವತಿ ಕೈಕೊಟ್ಟ (Love Failure) ಕೋಪಕ್ಕೆ ಆಕೆಯ ಗಂಡನನ್ನು ಸಾರಿಗೆ ಬಸ್ ನಲ್ಲೇ ಭಗ್ನ ಪ್ರೇಮಿ ಚಾಕು ಇರಿದು ಕೊಲೆಮಾಡಿದ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಶಿರಸಿ (Sirsi) ನಗರದಲ್ಲಿ ಶನಿವಾರ ರಾತ್ರಿ ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಶಿವಮೊಗ್ಗ (Shivamogga) ಜಿಲ್ಲೆಯ ಸಾಗರ (Sagar) ತಾಲೂಕಿನ ನೀಚಡಿ ಗ್ರಾಮದ ಗಂಗಾಧರ ಕೊಲೆಯಾದ ದುರ್ದೈವಿ.  ಶಿರಸಿಯ ಪ್ರೀತಮ್‌ ಡಿಸೋಜಾ ಕೊಲೆ ಪಾತಕಿ. ಶಿರಸಿಯಿಂದ ಬೆಂಗಳೂರಿಗೆ (Bengaluru) ಹೋಗುತ್ತಿದ್ದ ವಾಕರಸಾ ಸಂಸ್ಥೆಯ ಬಸ್ (NWKRTC Bus) ನಲ್ಲಿ ಈ ಘಟನೆ ನಡೆದಿದೆ. ತನ್ನ ಹೆಂಡತಿಯೊಂದಿಗೆ ಬೆಂಗಳೂರಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಗಂಗಾಧರ ಹೆಂಡತಿಯ ಮಾಜಿ ಪ್ರಿಯಕರನಿಂದ ಕೊಲೆಯಾಗಿದ್ದಾನೆ. ಬಸ್ಸು ಹೊಸ ಬಸ್‌ ನಿಲ್ದಾಣದಿಂದ ಹಳೇ ಬಸ್‌ ನಿಲ್ದಾಣಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆ ಬಳಿ ಘಟನೆ ನಡೆದಿದೆ.

ಇದನ್ನೂ ಓದಿ : Bike collision/ಭಟ್ಕಳದಲ್ಲಿ ಬೈಕ್‌ಗಳ ಡಿಕ್ಕಿ

ಗಂಗಾಧರ ಮತ್ತು ಆತನ ಹೆಂಡತಿ ಬೆಂಗಳೂರಿಗೆ ಹೊರಟಿದ್ದ ಬಸ್ಸಿನಲ್ಲಿ ಕೊಲೆ ಪಾತಕಿ ಕೂಡ ಬಸ್‌ ಹತ್ತಿದ್ದ. ಈ ಸಂದರ್ಭದಲ್ಲಿ ಗಂಗಾಧರನೊಂದಿಗೆ ತಗಾದೆ ತೆಗೆದ ಕೊಲೆಗಾರ ಪ್ರೀತಮ್‌ ಇದ್ದಕ್ಕಿದ್ದಂತೆ ಚಾಕು ತೆಗೆದು ಎದೆಗೆ ಚುಚ್ಚಿ ಕೊಲೆ ಮಾಡಿ, ಪರಾರಿಯಾಗಿದ್ದಾನೆ. ಗಂಡನನ್ನು ಹಲ್ಲೆಯಿಂದ ತಪ್ಪಿಸುವಾಗ ಪೂಜಾರ ಕೈಗೂ ಗಾಯವಾಗಿದೆ. ಸುದ್ದಿ ತಿಳಿದು ಕಾರ್ಯಾಚರಣೆಗೆ ಇಳಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ : Kadambotsav/ ನಿಗದಿ ಆಯ್ತು ಕದಂಬೋತ್ಸವ ದಿನ

ಕಳೆದ ಹತ್ತು ವರ್ಷದಿಂದ ಶಿರಸಿಯ ಪೂಜಾಳನ್ನು ಪ್ರೀತಮ್ ಡಿಸೋಜ ಪ್ರೀತಿಸುತಿದ್ದ. ಆಕೆಯೂ ಈತನನ್ನು ಪ್ರೀತಿಸುತಿದ್ದಳು. ಆದರೆ ಕೆಲಸಕ್ಕಾಗಿ ಬೆಂಗಳೂರಿಗೆ ಹೋದ ಪೂಜಾ ಅಲ್ಲಿ ಪರಿಚಯವಾದ ಸಾಗರದ ನೀಚಡಿ ಮೂಲದ ಗಂಗಾಧರನನ್ನು ನಾಲ್ಕು ತಿಂಗಳ ಹಿಂದೆ ವಿವಾಹವಾಗಿದ್ದಳು (love failure). ಪೂಜಾಳ ಸಂಬಂಧಿಕರ ಕಾರ್ಯಕ್ರಮಕ್ಕೆ ಶಿರಸಿ ತಾಲೂಕಿನ ಅಚನಳ್ಳಿಗೆ ಗಂಗಾಧರ ಪತ್ನಿಯೊಂದಿಗೆ ಆಗಮಿಸಿದ್ದ. ಈ ವಿಷಯ ತಿಳಿದ ಪ್ರೀತಮ್‌, ಅವರು ವಾಪಸ್ಸಾಗುವ ಅದೇ ಬಸ್ಸಿಗೆ ಹತ್ತಿ ಕೊಲೆ ಮಾಡಿದ್ದಾನೆ.

ಇದನ್ನೂ ಓದಿ : Micro Finance/ ಮೈಕ್ರೋ ಫೈನಾನ್ಸ್‌ಗೆ ಮತ್ತೊಂದು ಬಲಿ