ಭಟ್ಕಳ: ತೋಟದ ಕೆಲಸ ಮಾಡುತ್ತಿದ್ದ ವ್ಯಕ್ತಿ ಆಕಸ್ಮಿಕವಾಗಿ ಕುಸಿದು ಬಿದ್ದು ಮೃತಪಟ್ಟ ಘಟನೆ (Man dies) ಭಟ್ಕಳ (Bhatkal) ತಾಲೂಕಿನ ಮುಂಡಳ್ಳಿಯಲ್ಲಿ ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಮುಂಡಳ್ಳಿಯ ಮೋಹನ ತಂದೆ ನಾರಾಯಣ ನಾಯ್ಕ (೫೫) ಮೃತ ದುರ್ದೈವಿ. ಈ ಕುರಿತು ಅವರ ಪುತ್ರ ಲೋಕನಾಥ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದಿನಾಂಕ: ೧೭-೦೧-೨೦೨೬ ರಂದು ಬೆಳಿಗ್ಗೆ ೮ ಗಂಟೆಗೆ ಶ್ರೀಧರ ಶನಿಯಾರ ಇವರ ತೋಟಕ್ಕೆ ಅಡಿಕೆ ಹಾಗೂ ತೆಂಗಿನ ಮರದ ಬುಡದ ಕೆಲಸಕ್ಕೆ ಹೋದ ಮೋಹನ ನಾಯ್ಕ ಬೆಳಿಗ್ಗೆ ೮:೪೫ ಗಂಟೆಯ ಸುಮಾರಿಗೆ ಆಕಸ್ಮಿಕವಾಗಿ ಕುಸಿದು ಬಿದ್ದರು. ಅವರಿಗೆ ಉಪಚಾರದ ಕುರಿತು ಭಟ್ಕಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯಾಧಿಕಾರಿಗಳು ಉಪಚರಿಸಿ ಆಸ್ಪತ್ರೆಗೆ ತರುವ ಪೂರ್ವದಲ್ಲಿ ಮೃತಪಟ್ಟಿರುತ್ತಾರೆ ಅಂತ ತಿಳಿಸಿದ್ದಾರೆ (Man dies).

ಇದನ್ನು ಓದಿ: Shrinivasa Kalyanaotsav/ ನಿಚ್ಚಲಮಕ್ಕಿಯ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದಲ್ಲಿ ಜ ೨೨ರಿಂದ ೨೬ರವರೆಗೆ ಧಾರ್ಮಿಕ ಮಹೋತ್ಸವ