ಭಟ್ಕಳ (Bhatkal) : ಮನೆಯಿಂದ ಹೊರಹೋದ ವ್ಯಕ್ತಿ ನಾಪತ್ತೆಯಾಗಿರುವ (missing) ಬಗ್ಗೆ ಭಟ್ಕಳ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ (case registered).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಭಟ್ಕಳದ ಮುಗ್ದಂ ಕಾಲೋನಿಯ ಅಬ್ದುಲ್ ಕಯುಮ್ ಕೋತ್ವಾಲ್ (೬೦) ಕಾಣೆಯಾದವರು.  ಇವರು ಮಾನಸಿಕ ಅಸ್ವಸ್ಥರಂತೆ ವರ್ತಿಸುತ್ತಿದ್ದು, ನ.೨೫ರಂದು ಬೆಳಗ್ಗೆ ೧೦.೩೦ಕ್ಕೆ ಕರಿಕಲ್‌ಗೆ ಹೋದವರು ಮನೆಗೂ ಬಾರದೇ ಎಲ್ಲಿಗೋ ಹೋಗಿ ಕಾಣೆಯಾಗಿದ್ದಾರೆ (missing) ಎಂದು ದೂರಿನಲ್ಲಿ (complaint) ತಿಳಿಸಲಾಗಿದೆ. ಗೋಧಿ ಮೈಬಣ್ಣ, ಗುಂಡನೆಯ ಮುಖ, ತೆಳ್ಳನೆಯ ಮೈಕಟ್ಟು, ೫.೬ ಅಡಿ ಎತ್ತರ ಹೊಂದಿದ್ದಾರೆ. ಹಿಂದಿ, ಮರಾಠಿ, ಉರ್ದು ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೊರಡುವಾಗ ಕಪ್ಪು ಬಣ್ಣದ ಬಿಳಿ ಗೆರೆಯ ಅಂಗಿ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದಾರೆ. ಇವರು ಸಾರ್ವಜನಿಕರಿಗೆ ಕಂಡು ಬಂದಲ್ಲಿ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ ೦೮೩೮೫-೨೨೭೩೩೩, ಪಿ.ಐ ಗ್ರಾಮೀಣ ಠಾಣೆ ದೂರವಾಣಿ ಸಂಖ್ಯೆ: ೯೪೮೦೮೦೫೨೫೨, ಅಥವಾ ಪೊಲೀಸ್ ಕಂಟ್ರೋಲ್ ರೂಂ ಕಾರವಾರ ದೂರವಾಣಿ ಸಂಖ್ಯೆ:೦೮೩೮೨- ೨೨೬೫೫೦/೧೧೨/೧೦೦ ನ್ನು ಸಂಪರ್ಕಿಸುವಂತೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್‌ಐ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ : ಕೆಲಸ ಮಾಡುತ್ತಿದ್ದ ಲಾಡ್ಜ್ ನಲ್ಲೇ ಯುವಕ ನೇಣಿಗೆ ಶರಣು