ಭಟ್ಕಳ (Bhatkal) : ತಹಸೀಲ್ದಾರರ ಕಚೇರಿಯಲ್ಲಿ ಏಜೆಂಟರ ಹಾವಳಿ ಹೆಚ್ಚಾಗಿದೆ. ಇದಕ್ಕೆ ಕಡಿವಾಣ ಹಾಕಬೇಕು. ಇಲ್ಲವಾದರೆ ಸಂಬಂಧಿಸಿದ ಅಧಿಕಾರಿಯನ್ನು ಹೊಣೆ ಮಾಡಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವದು ಎಂದು ಉತ್ತರ ಕನ್ನಡ ಉಸ್ತುವಾರಿ ಸಚಿವ ಮಂಕಾಳ ಎಸ್ ವೈದ್ಯ (Mankal Vaidya) ಎಚ್ಚರಿಸಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಅವರು ಸೋಮವಾರ ತಾಲೂಕು ಪಂಚಾಯಿತಿ ಆವರಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಅದ್ಯಕ್ಷತೆ ವಹಿಸಿ ಮಾತನಾಡಿದರು. ಕಂದಾಯ ಇಲಾಖೆಯ ಕುರಿತು ಅನೇಕ ದೂರುಗಳು ಬರುತ್ತಿವೆ. ಅಲ್ಲಿ ಅಧಿಕಾರಿಗಳಿಗಿಂತ ಏಜೆಂಟರ ಹಾವಳಿ ಹೆಚ್ಚಾಗಿದೆ. ಮತ್ತೆ ಈ ಕುರಿತು ದೂರು ಬರಬಾರದು ಎಂದರು.

ಇದನ್ನೂ ಓದಿ: ಖಾಸಗಿ ಬಸ್ ಹರಿದು ವೃದ್ಧೆ ದುರ್ಮರಣ

ಈ ಸಂದರ್ಭದಲ್ಲಿ ಕಾಯ್ಕಿಣಿ ಗ್ರಾಪಂ ಸದಸ್ಯ ಭಾಸ್ಕರ ನಾಯ್ಕ ಮಾತನಾಡಿ, ಜನನ ಮರಣ ದಾಖಲೆ ತಿದ್ದುಪಡಿ, ಸರ್ಟಿಫಿಕೆಟ್ ನೀಡಲು ಜನರು ತಿಂಗಳು ಗಟ್ಟಲೆ ಪರದಾಡುತ್ತಾರೆ. ಅಲ್ಲಿನ ಸಿಬ್ಬಂದಿ ಜನರೊಂದಿಗೆ ಸರಿಯಾಗಿ ಸ್ಪಂದನೆ ನೀಡುವದಿಲ್ಲ ಎಂದು ದೂರಿದರು.

ಇದನ್ನೂ ಓದಿ:  ಗ್ರಾಮ ಲೆಕ್ಕಾಧಿಕಾರಿಗೆ ಗಾಯ

ಬಳಿಕ ಆ ಸಿಬ್ಬಂದಿಯನ್ನು ಸಚಿವರು ಕರೆದು ಎಚ್ಚರಿಕೆ ನೀಡಿ, ಮುಂದಿನ ದಿನಗಳಲ್ಲಿ ದೂರು ಬರದಂತೆ ನೋಡಿಕೊಳ್ಳಿ. ಇಲ್ಲವಾದರೆ ನಿಮಗೆ ಬೇರೆ ಕಡೆ ವರ್ಗಾವಣೆ ಮಾಡುವದು ಅನಿವಾರ್ಯ ಎಂದರು.

ಇದನ್ನೂ ಓದಿ: ಮುರುಡೇಶ್ವರ, ಇಡಗುಂಜಿಗೆ ಪೂಜಾ ಗಾಂಧಿ ಭೇಟಿ

ಅಂಗನವಾಡಿಗಳು ಪ್ರಾರಂಭವಾಗಿ ಈಗಾಗಲೇ ೩೯ ವರ್ಷ ಕಳೆದಿದೆ. ಜಿಲ್ಲೆಯಲ್ಲಿ ಎಲ್ಲಾ ಅಂಗನವಾಡಿಗಳು ಸ್ವಂತ ಸ್ಥಳದಲ್ಲೆ ಕಾರ್ಯ ನಿರ್ವಹಿಸಬೇಕು ಎನ್ನುವದು ನಮ್ಮ ಅಪೇಕ್ಷೆ. ಇದಕ್ಕೆ ಅಲ್ಲಿನ ಶಿಕ್ಷಕಿಯರು ೨ ಗುಂಟೆ ಭೂಮಿಯನ್ನು ನೋಡಿ ಎಂದು ಹೇಳಿದರೂ ಕೆಲವರು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಸರ್ಕಾರಿ ಭೂಮಿ ಇಲ್ಲದಿದ್ದರೆ ಖಾಸಗಿಯಾಗಿ ಆದರೂ ಸ್ಥಳವನ್ನು ಗುರುತು ಮಾಡಿ. ಸರ್ಕಾರ ನೀಡದಿದ್ದರೂ ನಾನೇ ಭೂಮಿ ಖರೀದಿಸಿ ಅಂಗನವಾಡಿ ನಿರ್ಮಾಣ ಮಾಡಿಸುತ್ತೇನೆ. ನನ್ನ ಕ್ಷೇತ್ರದಿಂದಲೇ ಇದು ಆರಂಭವಾಗಬೇಕು ಎಂದು ಸಚಿವ ಮಂಕಾಳ ಎಸ್ ವೈದ್ಯ (Mankal Vaidya)  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗೆ ಹೇಳಿದರು.

ಇದನ್ನೂ ಓದಿ : ಕಾರು ಡಿಕ್ಕಿಯಾಗಿ ಸ್ಕೂಟಿ ಸವಾರ ಗಂಭೀರ

ಅಬಕಾರಿ ಇಲಾಖೆಯ ಉಪನೀರಿಕ್ಷಕ ವಿಶ್ವನಾಥ ಭಟ್ ತಮ್ಮ ಇಲಾಖೆಯ ಅಂಕಿ ಅಂಶ ನೀಡಿ ಮಾತನಾಡಿದರು. ಪ್ರವಾಸೋದ್ಯಮ ಇಲಾಖೆಗೆ ಒತ್ತು ನೀಡಿ ಮದ್ಯ ಮಾರಾಟದ ಆದಾಯ ಹೆಚ್ಚಾಗುವಂತೆ ಮಾಡಿ ಎಂದು ಸಚಿವರ ಬಳಿ ವಿನಂತಿಸಿದರು. ಅವರ ಮಾತು ಕೇಳಿದ ಸಭೆ ಒಮ್ಮೆ ನಗೆಗಡಲಲ್ಲಿ ತೇಲಿತು. ಬಳಿಕ ಮಾತನಾಡಿದ ಸಚಿವರು, ನಿಮ್ಮ ಆದಾಯ ಹೆಚ್ಚಿಸಲು ಜನರು ಸಾಯಬೇಕಾ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಲಾರಿ ಪಲ್ಟಿಯಾಗಿ ಇಬ್ಬರು ಸಾವು; ಮೂವರು ಗಂಭೀರ

ಭಟ್ಕಳದಲ್ಲಿ ಶಿಕ್ಷಣಕ್ಕೆ ಎಲ್ಲಾ ಅವಕಾಶಗಳಿದ್ದು, ಇಲ್ಲಿ ವಿದ್ಯಾರ್ಜನೆಗೆ ಬೇರೆ ಬೇರೆ ತಾಲೂಕು, ಗ್ರಾಮಾಂತರ ಪ್ರದೇಶಗಳಿಂದ ವಿದ್ಯಾರ್ಥಿಗಳು ಬರುತ್ತಾರೆ. ಅವರಿಗೆ ಹಾಸ್ಟೆಲ್ ಇಲ್ಲಾ ಎಂದು ಯಾರೂ ಹೇಳಬಾರದು. ಪ್ರವೇಶಾತಿ ನೀಡಿ, ಸೌಲಭ್ಯವನ್ನು ಕಲಿಸಬೇಕು ಎಂದು ಅಲ್ಪಸಂಖ್ಯಾತ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಕೃಷಿ, ಸಾರಿಗೆ, ಪಂ.ರಾಜ, ಪಿಡಬ್ಲೂಡಿ, ವಿದ್ಯುತ್, ಅರಣ್ಯ, ಪುರಸಭೆ, ಪ.ಪಂ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿ ಅವರಿಂದ ಅಂಕಿ ಅಂಶಗಳ ಪರೀಶೀಲನೆ ನಡೆಸಿದರು.

ಇದನ್ನೂ ಓದಿ: Na Dsouza/ ಪ್ರಕೃತಿ ಕಾಳಜಿಯ ಮನವುಳ್ಳ ಬರಹಗಾರ

ಈ ಸಂದರ್ಭದಲ್ಲಿ ತಾ.ಪಂ. ಇಒ ವೆಂಕಟೇಶ ನಾಯ್ಕ, ಗ್ಯಾರಂಟಿ ಅನುಷ್ಠಾನದ ಜಿಲ್ಲಾಧ್ಯಕ್ಷ ಸತೀಶ ನಾಯ್ಕ, ಎಸಿ ಡಾ. ನಯನಾ, ತಹಸೀಲ್ದಾರ ನಾಗೇಂದ್ರ ಕೋಳಶೆಟ್ಟಿ, ಪುರಸಭೆ ಉಪಾಧ್ಯಕ್ಷ ಅಲ್ತಾಫ್ ಖರೂರಿ ಸೇರಿದಂತೆ ಇತರರು ಇದ್ದರು.