ಕಾರವಾರ (Karwar): ಇಲ್ಲಿನ ಪೊಲೀಸ್ ಕವಾಯತು ಮೈದಾನದಲ್ಲಿ ಭಾನುವಾರ ಗಣರಾಜ್ಯೋತ್ಸವ (Republic Day) ಆಚರಿಸಲಾಗಿದ್ದು, ಮೀನುಗಾರಿಕೆ, ಒಳನಾಡು ಜಲ ಮತ್ತು ಬಂದರು ಸಚಿವ ಮಾಂಕಾಳ ಎಸ್ ವೈದ್ಯ (Mankal Vaidya)  ರಾಷ್ಟ್ರಧ್ವಜಾರೋಹಣ ನೆರವೇರಿಸಿ ಗೌರವ ವಂದನೆ ಸ್ವೀಕರಿಸಿದರು. ಉತ್ತರ ಕನ್ನಡ (Uttara Kannada) ಜಿಲ್ಲೆಗೆ ೩೪೬ ಕೋಟಿ ರೂ.ಗಳ ಆರು ಯೋಜನೆಗಳನ್ನು ಸಾಗರಮಾಲಾ ಸೆಲ್ ಪರಿಶೀಲಿಸುತ್ತಿದ್ದು, ೩೦೩ ಕೋಟಿ ಮೌಲ್ಯದ ನಾಲ್ಕು ಯೋಜನೆಗಳಿಗೆ ಈಗಾಗಲೇ ಅನುಮೋದನೆ ದೊರೆತಿದೆ ಎಂದು ಸಚಿವ ಮಂಕಾಳ ವೈದ್ಯ (Mankal Vaidya) ತಮ್ಮ ಭಾಷಣದಲ್ಲಿ ಹೇಳಿದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಉತ್ತರ ಕನ್ನಡ ಜಿಲ್ಲೆ ಭಟ್ಕಳ (Bhatkal) ತಾಲೂಕಿನಲ್ಲಿ  ಮೊದಲ ಮೀನುಗಾರಿಕಾ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ. ಅಳ್ವೆಕೋಡಿ ಮತ್ತು ತೆಂಗಿನಗುಂಡಿ ಮೀನು ಇಳಿಯುವ ಕೇಂದ್ರಗಳನ್ನು ಮೀನುಗಾರಿಕಾ ಬಂದರುಗಳಾಗಿ ಮೇಲ್ದರ್ಜೆಗೇರಿಸಲಾಗಿದೆ. ಮುರ್ಡೇಶ್ವರದಲ್ಲಿ (Murdeshwar) ೨೨೦ ಕೋಟಿ ರೂ.ಗಳ ಹೊರ ಬಂದರು ನಿರ್ಮಾಣ ಕಾಮಗಾರಿ ನಡೆಯುತ್ತಿದೆ ಎಂದು ಅವರು ವಿವರಿಸಿದರು.

ಇದನ್ನೂ ಓದಿ : Kaadumale/ ಉ.ಕ.ದಲ್ಲಿ ಚಿತ್ರೀಕರಣದ ವೇಳೆ ಜಿಗಣೆ, ಹಾವು ಕಾಟ

ಹಾನಿಗೊಳಗಾದ ಮೀನುಗಾರಿಕೆ ಉಪಕರಣಗಳ ಪರಿಹಾರವನ್ನು ೧ ಲಕ್ಷದಿಂದ ೧೦ ಲಕ್ಷಕ್ಕೆ ಹೆಚ್ಚಿಸಲಾಗಿದೆ, ಮೀನುಗಾರಿಕೆ ಸಂಬಂಧಿತ ಮರಣ ಪರಿಹಾರವನ್ನು ೬ ಲಕ್ಷದಿಂದ ೮ ಲಕ್ಷಕ್ಕೆ ಏರಿಸಲಾಗಿದೆ. ಅಂಕೋಲಾ (Ankola) ತಾಲೂಕಿನ ಕೇಣಿ ಗ್ರಾಮದಲ್ಲಿ ೩೦ ಎಂಟಿಪಿಎ (MTPA) ಸಾಮರ್ಥ್ಯದ ಬಂದರು ಅಭಿವೃದ್ಧಿಗೆ ಪಿಪಿಪಿ ಮಾದರಿಯಲ್ಲಿ (PPP Model) ೪೧೧೮ ಕೋಟಿ ರೂ. ಹೆಚ್ಚುವರಿಯಾಗಿ, ಹೊನ್ನಾವರ (Honnavar) ತಾಲೂಕಿನ ಪಾವಿನಕುರ್ವೆ ಗ್ರಾಮದಲ್ಲಿ ೧೪ ಎಂಟಿಪಿಎ ಸಾಮರ್ಥ್ಯದ ೩೦೪೭ ಕೋಟಿ ರೂ.ಗಳ ಗ್ರೀನ್‌ಫೀಲ್ಡ್ ಬಂದರು ಯೋಜನೆಗಾಗಿ ಆರ್‌ಎಫ್‌ಪಿಯನ್ನು ಕೋರಲು ಸಿದ್ಧತೆ ನಡೆಯುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ಇದನ್ನೂ ಓದಿ : Arrested/ ವಿದೇಶಿ ಕರೆನ್ಸಿ, ವಜ್ರ ಸಾಗಿಸುತ್ತಿದ್ದ ಭಟ್ಕಳದ ವ್ಯಕ್ತಿ ಸೆರೆ