ಭಟ್ಕಳ: ಸ್ಯಾಂಡಲ್‌ವುಡ್‌ನ (sandalwood) ಖ್ಯಾತ ನಿರ್ದೇಶಕ ಹಾಗೂ ನಟ ಬಿ ಎಂ ಗಿರಿರಾಜ್ ಅವರ ಹೊಸ ಕನ್ನಡ ಸಿನಿಮಾ ‘ಮರ್ಗೋಸ ಮಹಲ್’ (Margosa Mahal) ಚಿತ್ರದ ಚಿತ್ರೀಕರಣ ಭಟ್ಕಳ (Bhatkal) ತಾಲೂಕಿನ ವಿವಿಧ ಸ್ಥಳಗಳಲ್ಲಿ ನಡೆಯಿತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಕಳೆದ ಎರಡು–ಮೂರು ದಿನಗಳಿಂದ ಶಿರಸಿ (Sirsi), ಹೊನ್ನಾವರ (Honnavar), ಸಿದ್ದಾಪುರ (Siddapur) ಹಾಗೂ ಗೇರುಸೊಪ್ಪ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಸಿದ ಚಿತ್ರತಂಡವು ಶನಿವಾರ ಸಂಜೆ ಭಟ್ಕಳಕ್ಕೆ ಆಗಮಿಸಿತು. ಮುರ್ಡೇಶ್ವರದ (Murdeshwar) ಮಠದ ಹಿತ್ತಲು, ಬಸ್ತಿ ಪ್ರದೇಶ, ಭಟ್ಕಳ ನಗರದ ಹೈವೇ, ಬಂದರ ಹಾಗೂ ಸೋಡಿಗದ್ದೆ ಸೇರಿದಂತೆ ವಿವಿಧ ಸ್ಥಳಗಳಲ್ಲಿ ತಡರಾತ್ರಿವರೆಗೆ ಶೂಟಿಂಗ್ ನಡೆಸಲಾಯಿತು.

Anant Kumar Hegde/ ಭಟ್ಕಳದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಅನಂತ ಕುಮಾರ ಹೆಗಡೆ ಭಾಗಿ, ರಾಜಕೀಯ ಪುನರಾಗಮನದ ಬಗ್ಗೆ ಕುತೂಹಲ 

ಭಟ್ಕಳ ತಾಲೂಕಿನ ಬೆಳ್ಕೆ ಗ್ರಾಮದ ಮಹದೇವ ಮೊಗೇರ ಅವರ ಪುತ್ರರಾಗಿರುವ ಬಿ ಎಂ ಗಿರಿರಾಜ್ ಅವರು ಈ ಹಿಂದೆ ಮೈತ್ರಿ, ಕನ್ನಡಿಗ, ಜಟ್ಟ, ರಾಮರಸದ ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ದೇಶಿಸಿದ್ದು, ಮಾರ್ಕ್, ಲ್ಯಾಂಡ್ ಲಾರ್ಡ್, ಲವ್ ಮೊಕ್ಟೈಲ್, ಅಲ್ಪಾ, ಬ್ರ್ಯಾಟ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರದ ಸಹ ನಿರ್ದೇಶಕರಾಗಿ ಕಳೆದ ವರ್ಷದ ಸೂಪರ್ ಹಿಟ್ ಬ್ರ್ಯಾಟ್ ಸಿನಿಮಾದಲ್ಲಿ ಅಸೋಸಿಯೇಟ್ ಆಗಿ ಕೆಲಸ ಮಾಡಿದ್ದ ಭಟ್ಕಳದ ಜಯ್ ಡಿ ಭಟ್ಕಳ್ ಕಾರ್ಯನಿರ್ವಹಿಸುತ್ತಿದ್ದಾರೆ.

Vidya Vahini Express/ ಗ್ರಾಮಸ್ಥರ ಪಾಲಿನ ಅಕ್ಷರ ದೇಗುಲ: ಮಾದರಿ ‘ವಿದ್ಯಾವಾಹಿನಿ ಎಕ್ಸ್‌ಪ್ರೆಸ್’ 

ಚಿತ್ರೀಕರಣದ ವೇಳೆ ಮರ್ಗೋಸ ಮಹಲ್’ (Margosa Mahal) ಚಿತ್ರತಂಡವು ಭಟ್ಕಳದ ಪ್ರಸಿದ್ಧ ಫಿಶ್ ಹೋಟೆಲ್ ‘ಕರಾವಳಿ ಹೋಟೆಲ್’ಗೆ ಭೇಟಿ ನೀಡಿ ಸ್ಥಳೀಯ ಆಹಾರವನ್ನು ಸವಿದು ಸಂತೋಷ ವ್ಯಕ್ತಪಡಿಸಿತು. ಬಳಿಕ ಮುಂದಿನ ಚಿತ್ರೀಕರಣಕ್ಕಾಗಿ ಭಟ್ಕಳದಿಂದ ತೆರಳಿತು.

government school/ ಮೂಡಶಿರಾಲಿಯ ಸರಕಾರಿ ಶಾಲೆಯಲ್ಲಿ ಸಂಭ್ರಮ