ಭಟ್ಕಳ: ಇಂದು ಬೆಳಿಗ್ಗೆ ನಗರದ ಮಾರಿಕಾಂಬಾ ದೇಗುಲದಲ್ಲಿ ಮಾರಿಯಮ್ಮನ ಪ್ರತಿಷ್ಠಾಪಿಸುವ ಮೂಲಕ ಪ್ರಸಿದ್ಧ ಮಾರಿ ಜಾತ್ರೆಗೆ ಚಾಲನೆ (mari Jathre begins) ನೀಡಲಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಇಂದು (ಜುಲೈ ೩೧)ಬುಧವಾರದಂದು ಮುಂಜಾನೆ ಮಾರಿ ದೇವಿಯನ್ನು ಭಕ್ತರು ಎಡಬಿಡದೆ ಸುರಿಯುತ್ತಿರುವ ಮಳೆಯಲ್ಲೇ ಮೆರವಣಿಗೆಯ ಮೂಲಕ ಇಲ್ಲಿನ ಪೇಟೆ ರಸ್ತೆಯಲಿರುವ ಶ್ರೀ ಮಾರಿಕಾಂಬಾ ದೇವಾಲಯಕ್ಕೆ ಕರೆತಂದರು. ಭಕ್ತರ ಜಯಘೋಷ, ಚಂಡೆ ವಾದ್ಯದೊಂದಿಗೆ ಸಕಲ ಸಂಭ್ರಮದಿಂದ ಮೆರವಣಿಗೆ ನಡೆಯಿತು.
ಇದನ್ನೂ ಓದಿ : ಗೇರುಸೊಪ್ಪ ಜಲಾಶಯದಿಂದಲೂ ನೀರು ಬಿಡುಗಡೆ
ಅದ್ದೂರಿಯಾಗಿ ಕರೆತರಲಾದ ಮಾರಿ ದೇವಿಯ ಮೂರ್ತಿಗೆ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಪ್ರತಿಷ್ಠಾಪಿಸಲಾಯಿತು. ಮಾರಿಕಾಂಬಾ ದೇವಿಯ ಎದುರಿಗೆ ಗರ್ಭಗುಡಿಯ ಹೊರಗಡೆ ಪ್ರತಿಷ್ಠಾಪನೆ ಮಾಡಿ ಪೂಜಾ ಕೈಂಕರ್ಯಗಳನ್ನು ಆರಂಭಿಸಲಾಗಿದೆ. (mari Jathre begins) ಪ್ರತಿಷ್ಠಾಪನೆ ಸಂದರ್ಭದಲ್ಲೇ ಭಕ್ತರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ದೇವಿಯ ದರ್ಶನ, ಪೂಜಾ ಸೇವೆ, ಹರಕೆ ಸೇವೆ ಆರಂಭಗೊಂಡಿದೆ. ದೇವಿಯ ದರ್ಶನಕ್ಕೆ ಸರತಿ ಸಾಲು, ಹರಕೆ ವ್ಯವಸ್ಥೆ ಮಾಡಲಾಗಿದೆ.
ಇದನ್ನೂ ಓದಿ : ಆ.೧ ರಿಂದ ಲಿಂಗನಮಕ್ಕಿ ಅಣೆಕಟ್ಟಿನಿಂದ ನೀರು ಬಿಡುಗಡೆ
ಎರಡು ದಿನಗಳ ಮಾರಿ ಜಾತ್ರೆ (Mari Jathre) ನಡೆಯಲಿದೆ. ನಾಳೆ (ಆಗಸ್ಟ್ ೨ ರಂದು) ಸಂಜೆ ೪.೩೦ಕ್ಕೆ ಮಾರಿ ದೇವಿಗೆ ವಿಸರ್ಜನಾ ಪೂಜೆ ನೆರವೇರಲಿದೆ. ಭಕ್ತರು ತಲೆ ಮೇಲೆ ದೇವಿ ಮೂರ್ತಿಯನ್ನು ಹೊತ್ತು ಮೆರವಣಿಗೆಯಲ್ಲಿ ಸಾಗಲಿದ್ದಾರೆ. ಜಾಲಿಕೋಡಿ ಸಮುದ್ರದಲ್ಲಿ ಮೂರ್ತಿ ವಿಸರ್ಜನೆ ಮಾಡುವ ಮೂಲಕ ಮಾರಿ ಜಾತ್ರೆ ಮುಕ್ತಾಯಗೊಳ್ಳಲಿದೆ.
ಇದನ್ನೂ ಓದಿ : ಚದುರಂಗ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ
ತವರುಮನೆಯ ಪೂಜೆ:
ನಿನ್ನೆ ತಡರಾತ್ರಿಯವರೆಗೂ ವಿಶ್ವಕರ್ಮ ಸಮಾಜದವರಿಂದ ತವರು ಮನೆಯ ವಿಶೇಷ ಪೂಜೆಯನ್ನು ನೆರವೇರಿಸಿದರು. ಆ ಬಳಿಕ ಮೂರ್ತಿಗೆ ವಿಶ್ವಕರ್ಮ ಮಹಿಳೆಯರಿಂದ ಸುಹಾಸಿನಿ ಪೂಜೆ, ಷೋಡಶೋಪಚಾರ, ಮಹಾಮಂಗಳಾರತಿ ನಡೆಯಿತು. ಈ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜದ ಬಂಧುಗಳು, ಊರಿನ ಭಕ್ತರು ಪಾಲ್ಗೊಂಡಿದ್ದರು.
ಇದನ್ನೂ ಓದಿ : ಮಾರಿಯಮ್ಮ ಸಾಗುವ ರಸ್ತೆ ದುರಸ್ತಿ ಮಾಡಿ