ಭಟ್ಕಳ: ಇಂದಿನಿಂದ ೨ ದಿನಗಳ ಕಾಲ ನಡೆಯುವ ಭಟ್ಕಳ ತಾಲೂಕಿನ ಪ್ರಸಿದ್ಧ ಮಾರಿ ಜಾತ್ರೆಗೆ ಬುಧವಾರ ಸಂಜೆ ಸಚಿವ ಮಂಕಾಳ ವೈದ್ಯ ವಿಶೇಷ ಪೂಜೆ ಸಲ್ಲಿಸಿ (mari worship) ಮಾರಿ ದೇವಿಯ ಆಶೀರ್ವಾದ ಪಡೆದುಕೊಂಡರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಈ ವೇಳೆ ಮಾತನಾಡಿದ ಅವರು, ರಾಜ್ಯದಾದ್ಯಂತ ವಿಪರೀತವಾಗಿ ಮಳೆ ಸುರಿಯುತ್ತಿದೆ. ಇದರಿಂದ ಈಗಾಗಲೇ ಸಾಕಷ್ಟು ಅನಾಹುತಗಳು ಸಂಭವಿಸಿ ಸಾವು ನೋವು ಸಂಭವಿಸಿದೆ. ಇನ್ನಾದರೂ ಮಳೆ ಸ್ವಲ್ಪ ಕಡಿಮೆಯಾಗಿ ಜನರು ಸುಭಿಕ್ಷೆಯಿಂದ ಬಾಳುವಂತಾಗಲಿ ಎಂದರು.
ಇದನ್ನೂ ಓದಿ : ಭಟ್ಕಳದ ಸನಿಹ ವಿಮಾನ ನಿಲ್ದಾಣ ಆಗುತ್ತಾ?!
ಮಳೆ ಬೇಕು ನಿಜ. ಆದರೆ ಅತಿವೃಷ್ಟಿಯಾಗಬಾರದು. ನಮ್ಮ ಪ್ರಜೆಗಳು ಸುಖ ಸಂತೋಷದಿಂದ ಇರುವಂತಾಗಲಿ. ಅತಿವೃಷ್ಟಿ ಎಲ್ಲಿಯೂ ಬೇಡ. ಆ ದೇವಿ ಎಲ್ಲರಿಗೂ ಸನ್ಮಂಗಳವನ್ನು ಉಂಟುಮಾಡಲಿ ಎಂದು ದೇವಿಯ ಬಳಿಯಲ್ಲಿ ಪ್ರಾರ್ಥಿಸಿದ್ದೇನೆ ಎಂದರು.
ಇದನ್ನೂ ಓದಿ : ಜುಲೈ ೩೧ರಂದು ವಿವಿಧೆಡೆ ಅಡಿಕೆ ಧಾರಣೆ
ಈ ವೇಳೆ ಮಾರಿಯಮ್ಮಗೆ ಪೂಜೆ ಸಲ್ಲಿಸಿದ (mari worship) ಅರ್ಚಕರು, ಸಚಿವರಿಗೆ ಮಲ್ಲಿಗೆ ಹೂವಿನ ಹಾರ ಹಾಕಿ, ದೇವಿಯ ಪ್ರಸಾದ ನೀಡಿದರು. ಈ ಸಂದರ್ಭದಲ್ಲಿ ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ಮಹಿಳಾ ಘಟಕದ ಅಧ್ಯಕ್ಷೆ ನಯನಾ ನಾಯ್ಕ, ಗೋಪಾಲ ನಾಯ್ಕ, ಮಾರಿಗುಡಿಯ ಅಧ್ಯಕ್ಷ ಪರಮೇಶ್ವರ ನಾಯ್ಕ ಕೋಣೆಮನೆ ಮತ್ತಿತರರು ಇದ್ದರು.