ಭಟ್ಕಳ (Bhatkal): ಇತ್ತೀಚಿನ ದಿನಗಳಲ್ಲಿ ತಮ್ಮ ಹುಟ್ಟಿದ ಹಬ್ಬವನ್ನಾಗಲಿ ಅಥವಾ ಮದುವೆ ವಾರ್ಷಿಕೋತ್ಸವವನ್ನು (Marriage Anniversary) ವಿಜೃಂಭಣೆಯಿಂದ ಆಚರಿಸುತ್ತಾರೆ. ಆದರೆ ಇಲ್ಲೊಬ್ಬ ಯುವಕ ತಾನು ಬರೆದ ಕವನ ಸಂಕಲನ ಪುಸ್ತಕದ ಮಾರಾಟದಿಂದ ಬಂದ ಹಣವನ್ನು ಇಬ್ಬರು ಕ್ಯಾನ್ಸರ್ ರೋಗಿಗಳಿಗೆ ನೀಡುವ ಮೂಲಕ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾನೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿವಿಡಿಯೋ
ಕಳೆದೆ ವರ್ಷ ಫೆ. ೪ರಂದು ಭಟ್ಕಳ ತಾಲೂಕಿನ ಮುಗಳಿಕೋಣೆ ಶ್ರೀ ಗೋಪಾಲಕೃಷ್ಣ ಕಲ್ಯಾಣ ಮಂಟಪ ಸಭಾಭವನದಲ್ಲಿ ಗಣಪತಿ ನಾಯ್ಕ ಮತ್ತು ವಿಮಲಾ ನಾಯ್ಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಅದೇ ದಿನ ಮದ್ದಾರಮನೆಯ ಯುವ ಸಾಹಿತಿ ಗಣಪತಿ ನಾಯ್ಕ ರಚಿಸಿದ “ನೀ ಬರೆಸಿದಂತೆ” ಕವನ ಸಂಕಲನವನ್ನು ಹಿರಿಯ ಸಾಹಿತಿ ಡಾ. ಸೆಯ್ಯದ್ ಜಮೀರುಲ್ಲಾ ಷರೀಫ್ ಬಿಡುಗಡೆಗೊಳಿಸಿದ್ದರು.
ವಿಡಿಯೋ ಸಹಿತ ಇದನ್ನು ಓದಿ : Bhatkal/ ಖೇತಪೈ ನಾರಾಯಣ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ
ವೃತ್ತಿಯಲ್ಲಿ ಗಣಪತಿ ನಾಯ್ಕ ರೇಡಿಯಮ್ ಡಿಸೈನಿಂಗ್ ಮಾಡುತ್ತಿದ್ದು ತಮ್ಮ ಬಿಡುವಿನ ವೇಳೆ ಆಗಾಗ ಚುಟುಕು ಕವನ ಬರುತ್ತಿರುತ್ತಾರೆ. ಈ ಹವ್ಯಾಸವಾದ ಜೊತೆಯಲ್ಲಿ ಬಡವರಿಗೆ ನಿರ್ಗತಿಕರಿಗೆ ತಮ್ಮ ಸ್ನೇಹಿತರ ಜೊತೆಯಲ್ಲಿ ಸೇರಿಕೊಂಡು ಸಹಾಯ ಮಾಡುತ್ತಿದ್ದಾರೆ.
ಇದನ್ನು ಓದಿ : Cancer Day/ ಕ್ಯಾನ್ಸರ್ ಚಿಕಿತ್ಸೆಯಲ್ಲಿ ರೇಡಿಯೇಷನ್ ಅಕಾಲಜಿಯ ಪಾತ್ರ
ಇವರು ತಮ್ಮ ಮದುವೆಯಲ್ಲಿ ಕ್ಯಾನ್ಸರ್ ರೋಗಿಗಳಿಗೆ ಸಹಾಯ ಮಾಡುವ ಉದ್ದೇಶದಿಂದ ೫೦೦ ಪುಸ್ತಕವನ್ನು ಪ್ರಕಟಿಸಿದ್ದರು. ಈ ಪುಸ್ತಕವನ್ನು ಮಾರಾಟ ಮಾಡಿ ಬಂದಂತಹ ಹಣವನ್ನು ಕ್ಯಾನ್ಸರ್ ರೋಗಿಗಳಿಗೆ ನೀಡುವುದಾಗಿ ತಿಳಿಸಿದ್ದರು. ಗಣಪತಿ ನಾಯ್ಕ ಅವರಿಗೆ ಧರ್ಮ ಪತ್ನಿ ಚಾರ್ಟೆಡ್ ಅಕೌಂಟೆಂಟ್ ಕಚೇರಿಯಲ್ಲಿ ಉದ್ಯೋಗಿಯಾಗಿರುವ ವಿಮಲಾ ನಾಯ್ಕ ಕೂಡ ಸಾಥ್ ನೀಡಿದ್ದರು.
ಇದನ್ನು ಓದಿ : Album release / ಭಕ್ತಿಗೀತೆಗಳ ಅಲ್ಬಮ್ ಬಿಡುಗಡೆ
ಅದರಂತೆ ತಮ್ಮ ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವ (Marriage Anniversary) ಆಚರಣೆ ಮಾಡಿಕೊಳ್ಳುತ್ತಿರುವ ಅವರು ತಮ್ಮ ಮದುವೆ ದಿನ ನೀಡಿದ ಮಾತಿನಂತೆ ನಡೆದುಕೊಂಡಿದ್ದಾರೆ. ತಾವು ಬರೆದ ಪುಸ್ತಕದ ಮಾರಾಟದ 25 ಸಾವಿರ ರೂಪಾಯಿ ಹಣವನ್ನು ಭಟ್ಕಳ ತಾಲೂಕಿನ ಇಬ್ಬರು ಬಡ ಕ್ಯಾನ್ಸರ್ ರೋಗಿಗಳಿಗೆ (Cancer patient) ನೀಡಿದ್ದಾರೆ. ಆ ಮೂಲಕ ಸಮಾಜಕ್ಕೊಂದು ಉತ್ತಮ ಸಂದೇಶ ಸಾರಿದ್ದಾರೆ.
ಇದನ್ನು ಓದಿ : Mankal Vaidya/ ಗೋ ಕಳ್ಳರಿಗೆ ಸಚಿವ ಮಂಕಾಳ ವೈದ್ಯ ಖಡಕ್ ಎಚ್ಚರಿಕೆ
ಇಂದು ವಿಶ್ವ ಕ್ಯಾನ್ಸರ್ ದಿನ (Cancer day) ಕೂಡ ಆಗಿರುವುದರಿಂದ ದಂಪತಿ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಕ್ಯಾನ್ಸರ್ ರೋಗಿಗಳಾದ ೬ ವರ್ಷದ ಬಾಲಕನಿಗೆ ಹಾಗೂ ಓರ್ವ ಮಹಿಳೆಗೆ ಹಣವನ್ನು ನೀಡಿದ್ದಾರೆ. ಈ ಸಂದರ್ಭದಲ್ಲಿ ಭಟ್ಕಳ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸವಿತಾ ಕಾಮತ, ಡಾ. ಸುರಕ್ಷಿತ್ ಶೆಟ್ಟಿ , ಡಾ. ಲಕ್ಷ್ಮೀಶ ನಾಯ್ಕ, ಇತರರು ಇದ್ದರು.
ಇದನ್ನು ಓದಿ : Bike Accident/ ಬೈಕ್ ಡಿಕ್ಕಿಯಾಗಿ ಹೆದ್ದಾರಿ ದಾಟುತ್ತಿದ್ದ ಪಾದಚಾರಿ ಸಾವು