ಭಟ್ಕಳ (Bhatkal) : ಕರ್ನಾಟಕ ಮಾಧ್ಯಮ ಅಕಾಡೆಮಿ ೨೦೨೩ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ (Media Award) ಭಟ್ಕಳದ ಆನಂದ ಬೈದನಮನೆ ಆಯ್ಕೆಯಾಗಿದ್ದಾರೆ. ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಕಟಿಸಿರುವ ಪ್ರಶಸ್ತಿ ಪುರಸ್ಕೃತ ೩೦ ಪತ್ರಕರ್ತರ ಪಟ್ಟಿಯಲ್ಲಿ ಆನಂದ ಬೈದನಮನೆ ಒಬ್ಬರಾಗಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳ ಡೈರಿ ಫೇಸ್‌ಬುಕ್‌ ಪೇಜ್‌ ಫಾಲೋವ್‌ ಮಾಡಲು ಇಲ್ಲಿ ಕ್ಲಿಕ್‌ ಮಾಡಿ.

ಭಟ್ಕಳ ತಾಲೂಕಿನ ಮುಂಡಳ್ಳಿ ಗ್ರಾಮದ ಆನಂದ ಪರಮೇಶ್ವರ ಬೈದನಮನೆ ಸದ್ಯ ಬೆಂಗಳೂರಿನಲ್ಲಿ (Bengaluru) ವಾಸವಾಗಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದಿಂದ (Karnataka University) ಎಂ.ಎ. ಪತ್ರಿಕೋದ್ಯಮ ವಿದ್ಯಾರ್ಹತೆ ಪಡೆದಿರುವ ಇವರು, ಪ್ರಸ್ತುತ ಏಷಿಯಾನೆಟ್‌ ಸುವರ್ಣ ನ್ಯೂಸ್‌ನ (Suvarna News) ಪೊಲಿಟಿಕಲ್‌ ಬ್ಯೂರೋ ಹೆಡ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ :  ಸಂದೀಪ ಸಾಗರಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ

ಎಂ.ಎ. ಪದವಿ ಪಡೆದ ನಂತರ ಆನಂದ ಬೈದನಮನೆ  ಶಿರಸಿಯ (Sirsi) ಎಂ.ಎಂ. ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ೧ ವರ್ಷ ಪತ್ರಿಕೋದ್ಯಮದ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಒಟ್ಟು ೨೪ ವರ್ಷಗಳ ಕಾಲ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿದ ಅನುಭವವಿರುವ ಆನಂದ ಬೈದನಮನೆ, ಕೆಲವು ತಿಂಗಳುಗಳ ಕಾಲ ಸಂಜೆವಾಣಿ ಹುಬ್ಬಳ್ಳಿ ಆವೃತ್ತಿಯಲ್ಲಿ ವರದಿಗಾರರನಾಗಿ ಸೇವೆ ಆರಂಭಿಸಿದರು.

ಇದನ್ನೂ ಓದಿ :  ರಾಜ್ಯದ ಜನತೆಗೆ ಬಿಗ್ ಶಾಕ್

೬ ವರ್ಷಗಳ ಕಾಲ ಈಟಿವಿ (Etv Kannada) ಕನ್ನಡ ಚಾನೆಲ್‌ನಲ್ಲಿ ಚಿಕ್ಕಮಗಳೂರು ಜಿಲ್ಲಾ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ. ೩ ವರ್ಷಕ್ಕೂ ಹೆಚ್ಚು ಕಾಲ ಬೆಂಗಳೂರಿನಲ್ಲಿ ಕಸ್ತೂರಿ (Kasturi) ಚಾನೆಲ್‌ನಲ್ಲಿ ವರದಿಗಾರರಾಗಿದ್ದರು. ನಂತರ ಜನಶ್ರೀ (Janashri) ವಾಹಿನಿಯಲ್ಲಿ ೩ ವರ್ಷ ವರದಿಗಾರ ಮತ್ತು ವಿಶೇಷ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಿದ್ದಾರೆ. ೪ ವರ್ಷ ಟಿವಿ೯ (TV9) ವಾಹಿನಿಯಲ್ಲಿ ರಾಜಕೀಯ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಕಳೆದ ಏಳು ವರ್ಷಗಳಿಂದ ಏಷಿಯಾನೆಟ್‌ ಸುವರ್ಣ ನ್ಯೂಸ್‌ನಲ್ಲಿ ರಾಜಕೀಯ ವಿಭಾಗದ ಮುಖ್ಯಸ್ಥರಾಗಿದ್ದಾರೆ.

ಇದನ್ನೂ ಓದಿ :   ಚಿದರಂಬರಂ, ಜೀತು ಮಾಧವನ್‌ ಜೋಡಿಯಲ್ಲಿ ಹೊಸ ಚಿತ್ರ

ಪತ್ರಕರ್ತರ ಸಂಘಟನೆಯಲ್ಲೂ ಮುಂಚೂಣಿಯಲ್ಲಿರುವ ಇವರು, ಪ್ರೆಸ್‌ ಕ್ಲಬ್‌ ಆಫ್‌ ಬೆಂಗಳೂರು ಇದರ ಉಪಾಧ್ಯಕ್ಷರಾಗಿ ೨ ವರ್ಷ ಮತ್ತು ಜಂಟಿ ಕಾರ್ಯದರ್ಶಿಯಾಗಿ ೫ ವರ್ಷ ಕಾರ್ಯನಿರ್ವಹಿಸಿದ್ದಾರೆ. ಬೆಂಗಳೂರಿನ ಕವಿಪವಿ ಸಂಘಟನೆಯ ಉಪಾಧ್ಯಕ್ಷರಾಗಿ ೪ ವರ್ಷ ಜವಾಬ್ದಾರಿ ನಿರ್ವಹಿಸಿರುವ ಇವರು ಪ್ರಸ್ತುತ  ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ನಿರ್ದೇಶಕರಾಗಿದ್ದಾರೆ. ಪತ್ರಿಕೋದ್ಯಮದಲ್ಲಿ ಸುದೀರ್ಘ ಸೇವೆ ಗುರುತಿಸಿ ಇವರಿಗೆ ಮಾಧ್ಯಮ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಗೆ (Media Award) ಆಯ್ಕೆಮಾಡಲಾಗಿದೆ.

ಇದನ್ನೂ ಓದಿ : ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಮಹಾ ಅನ್ನಸಂತರ್ಪಣೆ