ಭಟ್ಕಳ (Bhatkal) : ರೈಲು ಪ್ರಯಾಣಿಕರೇ, ನೀವು ಓದಲೇಬೇಕಾದ ಸುದ್ದಿಯಿದು. ಕೊಂಕಣ ರೈಲ್ವೆಯು ರಸ್ತೆ ಕೆಳ ಸೇತುವೆ (RUB) ನಿರ್ಮಾಣ ಕಾಮಗಾರಿ ನಡೆಸುತ್ತಿದೆ. ಈ ಹಿನ್ನೆಲೆ ರೈಲು ಸಂಚಾರದಲ್ಲಿ ಭಾರೀ ಪ್ರಮಾಣದಲ್ಲಿ ವ್ಯತ್ಯಯವಾಗಲಿದೆ (Mega Block).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಕೊಂಕಣ ರೈಲ್ವೇ (Konkan Railway) ಕಾರವಾರ (Karwar) – ಹಾರವಾಡ (Harwad) ವಿಭಾಗದ ನಡುವೆ Km ೫೧೨/೨೧೦ ರಲ್ಲಿ ಬಾಕ್ಸ್ ತಳ್ಳುವ ತಂತ್ರದ ಮೂಲಕ ರಸ್ತೆ ಕೆಳ ಸೇತುವೆ (RUB) ನಿರ್ಮಾಣ ಕೈಗೊಳ್ಳಲಾಗಿದೆ. ಅದಕ್ಕಾಗಿ ಗುರುವಾರ, ೨೧ ನವೆಂಬರ್ ಮತ್ತು ಭಾನುವಾರ, ೧ ಡಿಸೆಂಬರ್ ರಂದು ನಾಲ್ಕು ಗಂಟೆಗಳ ಮೆಗಾ ಬ್ಲಾಕ್ (Mega Block) ಮಾಡಲು ನಿರ್ಧರಿಸಿದೆ. ಹೀಗಾಗಿ ಪನ್ವೆಲ್‌ (Panvel) ಸಹಿತ  ಕೊಂಕಣ ರೈಲ್ವೆ ಮಾರ್ಗದ  ಮೂಲಕ ದಕ್ಷಿಣಕ್ಕೆ ಹೊರಡುವ ಎಕ್ಸ್‌ಪ್ರೆಸ್ ರೈಲುಗಳು ನಿಲುಗಡೆಯಾಗಲಿವೆ.

ವಿಡಿಯೋ ಸಹಿತ ಇದನ್ನೂ ಓದಿ :  ನಾಳೆಯಿಂದ ಮುರ್ಡೇಶ್ವರದಲ್ಲಿ ಮೀನುಗಾರಿಕೆ ದಿನಾಚರಣೆ

ನವೆಂಬರ್‌ ೨೦ರಂದು ಹೊರಡುವ ರೈಲು ಸಂಖ್ಯೆ ೦೯೦೫೭ ಉದ್ನಾ ಜಂಕ್ಷನ್‌ – ಮಂಗಳೂರು (Mangaluru) ರೈಲು  ಮಡಗಾಂವ್ (Madgaon) ಜಂಕ್ಷನ್‌- ಕಾರವಾರ ವಿಭಾಗ ನಡುವೆ ೧೨೦ ನಿಮಿಷ ಸಂಚಾರ ನಿಯಂತ್ರಿಸಲಾಗುತ್ತದೆ. ನ.೩೦ರಂದು ಹೊರಡುವ ರೈಲು ನಂ. ೧೧೦೯೭ ಪುಣೆ (Pune) ಜಂಕ್ಷನ್‌ – ಎರ್ನಾಕುಲಂ ಎಕ್ಸ್‌ಪ್ರೆಸ್ (Ernakulam express) ಮಡಗಾಂವ್ ಜಂಕ್ಷನ್‌ ಮತ್ತು ಕಾರವಾರ ವಿಭಾಗ ನಡುವೆ ೧೨೦ ನಿಮಿಷ ನಿಯಂತ್ರಿಸಲಾಗುತ್ತದೆ. ಇನ್ನು, ನ.೨೧ರಂದು ಮಧ್ಯಾಹ್ನ ೨.೧೦ಕ್ಕೆ ಹೊರಡುವ ರೈಲು ನಂ. ೦೬೬೦೧ ಮಡಗಾಂವ್ ಜಂಕ್ಷನ್‌ – ಮಂಗಳೂರು ಜಂಕ್ಷನ್‌ ವಿಶೇಷ ಪ್ರಯಾಣವು ಒಂದು ಗಂಟೆ ತಡವಾಗಿ ಅಂದರೆ ಮಧ್ಯಾಹ್ನ ೩.೧೦ಕ್ಕೆ ಮಡಗಾಂವ್‌ ಜಂಕ್ಷನ್‌ನಿಂದ ಹೊರಡಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವಿಡಿಯೋ ಸಹಿತ ಇದನ್ನೂ ಓದಿ :  ನಾನು ತುಂಬಾ ಕಾಸ್ಟ್ಲಿ, 100 ಕೋಟಿ ಸಾಕಾಗೊಲ್ಲ