ಭಟ್ಕಳ (Bhatkal) : ಗೋ ಮಾಂಸಕ್ಕಾಗಿ ಗರ್ಭಿಣಿ ಹಸುವನ್ನು ಕಡಿದು ಹಸುವಿನ ಹೊಟ್ಟೆಯಲ್ಲಿರುವ ಕರುವನ್ನು ಭಟ್ಕಳ ತಾಲೂಕಿನ ಹೆಬಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಕನೀರ ಭಾಗದ ಹೊಳೆದಂಡೆಯ ದಡದಲ್ಲಿ ಚೀಲದಲ್ಲಿ ಸುತ್ತಿ ಎಸೆದ ಗೋಹಂತಕರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಭಟ್ಕಳ ಹಿಂದೂ ಜಾಗರಣ ವೇದಿಕೆ (HJV) ಸಹಾಯಕ ಆಯುಕ್ತರಿಗೆ ಮನವಿ (Memorandum) ಸಲ್ಲಿಸಿದೆ. ಸಹಾಯಕ ಆಯುಕ್ತರ ಅನುಪಸ್ಥಿತಿಯಲ್ಲಿ ತಹಸೀಲ್ದಾರ ಮನವಿ ಸ್ವೀಕರಿಸಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಭಟ್ಕಳ ತಾಲೂಕಿನ ಹೆಬಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಕನೀರ ಭಾಗದ ಹೊಳೆ ದಂಡೆಯಲ್ಲಿ ಗರ್ಭಿಣಿ ಹಸುವನ್ನು ಹಿಂಸಾತ್ಮಕವಾಗಿ ಹತ್ಯೆ ಮಾಡಿ ಅದರ ಹೊಟ್ಟೆಯಲ್ಲಿರುವ ಕರುವನ್ನು ಹಾಗೂ ಅಂಗಾಂಗಗಳನ್ನು ಎಸೆದು ಕ್ರೌರ್ಯವನ್ನು ಮೆರೆದಿದ್ದಾರೆ. ಭಟ್ಕಳದಲ್ಲಿ ಗೋ ಹತ್ಯೆ ಮಾಡಲು ಹಲವು ಭಾಗಗಳಲ್ಲಿ ಗೋವುಗಳನ್ನು ಅಕ್ರಮವಾಗಿ ಸಾಗಿಸಿದ್ದು, ಹಾಗೂ ಗೋವುಗಳನ್ನು ಕೂಡಿಟ್ಟು ಗೋ ಹತ್ಯೆ ಮಾಡುತ್ತಿರುವ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಅಲ್ಪಸಂಖ್ಯಾತರನ್ನು ಓಲೈಸಲು ಅಕ್ರಮ ಗೋ ಸಾಗಾಟ ಮತ್ತು ಗೋ ಹತ್ಯೆಗೆ ಪರೋಕ್ಷವಾಗಿ ಸಹಕರಿಸುವ ಮೂಲಕ ಬಹುಸಂಖ್ಯಾತ ಹಿಂದೂಗಳ ಭಾವನೆಗೆ ಧಕ್ಕೆ ತರಲಾಗುತ್ತಿದೆ ಎಂದು ಹಿಂಜಾವೇ ಖಂಡಿಸಿದೆ.
ಇದನ್ನೂ ಓದಿ : Hackathon/ ೨೪ ತಾಸಿನ ರಾಷ್ಟ್ರೀಯ ಹ್ಯಾಕಥಾನ್ ಯಶಸ್ವಿ
ಈ ಕೂಡಲೇ ಎಲ್ಲಾ ಚೆಕ್‌ಪೋಸ್ಟ್‌ಗಳನ್ನು ಕಾರ್ಯ ಪ್ರವೃತ್ತಗೊಳಿಸಿ ಅಕ್ರಮ ಗೋ ಸಾಗಾಟಕ್ಕೆ ಕಡಿವಾಣ ಹಾಕಬೇಕು. ರಾತ್ರಿ ಸಮಯದಲ್ಲಿ ಮನೆಯಲ್ಲಿ ಸಾಕಿದ ಗೋವುಗಳನ್ನು ಕಳ್ಳತನ ಮಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಹಿಂದೆಯೂ ಸಹ ಹಲವು ಬಾರಿ ಭಟ್ಕಳದಲ್ಲಿ ಪ್ರತಿಭಟನೆ ಮಾಡಿ ತಾಲೂಕು ಆಡಳಿತಕ್ಕೆ ಮನವಿ ನೀಡಿ ಸೂಕ್ತ ಕ್ರಮಕ್ಕೆ ಆಗ್ರಹಿಸಲಾಗಿತ್ತು. ತದನಂತರವೂ ತಾಲೂಕು ಆಡಳಿತವು ಪೊಲೀಸ್ ಇಲಾಖೆಯೊಂದಿಗೆ ಸೂಕ್ತ ಸಮನ್ವಯ ಸಾಧಿಸಿ ಅಕ್ರಮ ಗೋ ಸಾಗಾಟ ಹಾಗೂ ಗೋ ಹತ್ಯೆಯನ್ನು ಸಂಪೂರ್ಣವಾಗಿ ಕಡಿವಾಣ ಹಾಕುವಲ್ಲಿ ವಿಫಲವಾಗಿದೆ. ಇದಕ್ರುಕೆ ಹೆಬಳೆ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ನಡೆದಿರುವ ಘಟನೆಯೇ ಸಾಕ್ಷಿ ಎಂದು ಹಿಂಜಾವೇ ಹೇಳಿದೆ.
ಇದನ್ನೂ ಓದಿ : Silver umbrella/ ಕಾರವಾರದ ದೇಗುಲದಲ್ಲಿ ಕದ್ದ ಬೆಳ್ಳಿ ಛತ್ರಿ ಗೋವಾದಲ್ಲಿ ಪತ್ತೆ
ಪದೇ ಪದೇ ಗೋ ಹಂತಕರು ಹಿಂದೂಗಳ ಭಾವನೆಗೆ ಧಕ್ಕೆ ತರಲೆಂದೇ ಇಂತಹ ಅಮಾನವೀಯ ಹೇಯ ಕೃತ್ಯವನ್ನು ಮಾಡುತ್ತಿರುವುದು ಕಂಡುಬರುತ್ತಿದೆ. ಹೊನ್ನಾವರ ಘಟನೆ ಮಾಸುವ ಮುನ್ನವೇ ಕೋಮು ಸೂಕ್ಷ್ಮ ಪ್ರದೇಶ ಭಟ್ಕಳದಲ್ಲಿ ಇಂತಹ ಘಟನೆ ಸಂಭವಿಸುತ್ತಿರುವುದು ಭಟ್ಕಳದಲ್ಲಿ ಅಶಾಂತಿ ಮತ್ತು ಗಲಭೆ ಸೃಷ್ಟಿಸುವ ಹುನ್ನಾರವಾಗಿದೆ. ಒಂದೊಮ್ಮೆ ಈ ಆಗ್ರಹವನ್ನು ನಿರ್ಲಕ್ಷ್ಯ ಮಾಡಿ ಅಮಾನವೀಯವಾಗಿ ಗೋವುಗಳನ್ನು ಹತ್ಯೆ ಮಾಡಿದ ಹಂತಕರನ್ನು ಬಂಧಿಸದೇ ಇದ್ದಲ್ಲಿ ಭಟ್ಕಳದ ಹಿಂದೂ ಜಾಗರಣ ವೇದಿಕೆ ಸಮಸ್ತ ಹಿಂದೂ ಸಮಾಜವನ್ನು ಒಗ್ಗೂಡಿಸಿಕೊಂಡು ಜಿಲ್ಲೆಯಾದ್ಯಂತ ಬೃಹತ್ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಹಿಂಜಾವೇ ಎಚ್ಚರಿಸಿದೆ.
ಇದನ್ನೂ ಓದಿ : Pregnant cattle/ ಭಟ್ಕಳದಲ್ಲಿ ಅಮಾನುಷ ಕೃತ್ಯ
ಈ ಸಂದರ್ಭದಲ್ಲಿ ಹಿಂದೂ ಜಾಗರಣಾ ವೇದಿಕೆ ಪದಾಧಿಕಾರಿಗಳು, ಬಿಜೆಪಿ ಮುಖಂಡರಾದ ಶ್ರೀಕಾಂತ ನಾಯ್ಕ ಆಸರಕೇರಿ, ಸುಬ್ರಾಯ ದೇವಾಡಿಗ ಹೆಬಳೆ, ಜಾಲಿ ಗ್ರಾಮ ಪಂಚಾಯತ ಸದಸ್ಯ ದಯಾ ನಾಯ್ಕ, ಶ್ರೀನಿವಾಸ ನಾಯ್ಕ ಹನುಮಾನ ನಗರ, ಯಶೋಧರ ನಾಯ್ಕ ಮತ್ತಿತರರು ಇದ್ದರು.
ಇದನ್ನೂ ಓದಿ : online game/ ಪಾನಿ ಪುರಿಗೆ ಇಲಿ ಪಾಷಾಣ ಸೇರಿಸಿ ತಿಂದ ಭಟ್ಕಳದ ಯುವಕ !