ಭಟ್ಕಳ: ಇಲ್ಲಿನ ಶ್ರೀ ಮಾರಿಕಾಂಬಾ ದೇವಸ್ಥಾನದ (Marikamba Temple) ಪಾವಿತ್ರ್ಯತೆ ಕಾಪಾಡುವ ಹಾಗೂ ಭಕ್ತರ ವಾಹನ ನಿಲುಗಡೆಯ ದೃಷ್ಠಿಯಿಂದ ದೇವಸ್ಥಾನದ ಮುಂಭಾಗದ ಫುಟ್ ಪಾತ್ ಹಾಗೂ ರಸ್ತೆಯ ಮೇಲೆ ಯಾವುದೇ ತಾತ್ಕಾಲಿಕ ಅಂಗಡಿ ಹಾಕದಂತೆ ಹಾಗೂ ಯಾವುದೇ ರೀತಿಯ ಮಲೀನತೆಗೆ ಅವಕಾಶ ಮಾಡದಂತೆ ಸೂಕ್ತ ಕ್ರಮ ಜರುಗಿಸುವಂತೆ ಆಗ್ರಹಿಸಿ ಶ್ರೀ ಮಾರಿಕಾಂಬಾ ದೇವಸ್ಥಾನದಿಂದ ಸಹಾಯಕ ಆಯುಕ್ತರಿಗೆ ಹಾಗೂ ಪೋಲಿಸ್ ಉಪ ಅಧೀಕ್ಷಕರಿಗೆ ಮನವಿ (memorandum) ಸಲ್ಲಿಸಲಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಶ್ರೀ ಮಾರಿಕಾಂಬಾ ದೇವಸ್ಥಾನವು ಭಟ್ಕಳ (Bhatkal) ನಗರ ಭಾಗದ ಪುರಾತನ ಹಾಗೂ ಪ್ರಮುಖ ದೇವಸ್ಥಾನವಾಗಿದೆ. ಇತ್ತೀಚೆಗೆ ದೇವಸ್ಥಾನದ ಪುನರ್ ಪ್ರತಿಷ್ಠಾಪನೆಯಾಗಿದ್ದು, ಯಾವುದೇ ರೀತಿಯಲ್ಲಿ ಪಾವಿತ್ರ್ಯತೆಗೆ ಧಕ್ಕೆಯಾಗದಂತೆ ನೋಡಿಕೊಂಡು ಬರಲಾಗುತ್ತಿದೆ. ಶ್ರೀ ದೇವಿಯ ದೇವಸ್ಥಾನವು ಮುಖ್ಯ ರಸ್ತೆಯ ಪಕ್ಕದಲ್ಲಿದ್ದು, ದಿನನಿತ್ಯ ಭಕ್ತರು ದೇವಸ್ಥಾನದ ಮುಂಭಾಗದ ರಸ್ತೆ ಬದಿಯಲ್ಲಿ ದ್ವಿಚಕ್ರ ವಾಹನ ನಿಲ್ಲಿಸಿ ದರ್ಶನಕ್ಕೆ ಬಂದು ಹೋಗುತ್ತಾರೆ. ಆದರೆ, ರಂಜಾನ್ (Ramadan) ಸಮಯದಲ್ಲಿ ೧೫ ದಿನಗಳವರೆಗೆ ದೇವಸ್ಥಾನದ ಎದುರಿನ ಸ್ಥಳದಲ್ಲಿ ಅಂಗಡಿ ಮಳಿಗೆ ಹಾಕುವುದರಿಂದ ದೇವಸ್ಥಾನಕ್ಕೆ ಬರುವ ಭಕ್ತರ ದ್ವಿಚಕ್ರ ವಾಹನ ನಿಲ್ಲಿಸಲು ಭಕ್ತರಿಗೆ ತೊಂದರೆ ಉಂಟಾಗುತ್ತಿರುವುದು ಕಂಡು ಬಂದಿರುತ್ತದೆ ಎಂದು ಮನವಿಯಲ್ಲಿ (memorandum) ತಿಳಿಸಲಾಗಿದೆ.
arrested/ ಜಾನುವಾರು ಸಾಗಾಟ: ಭಟ್ಕಳದಲ್ಲಿ ಇಬ್ಬರ ಬಂಧನ
ದೇವಸ್ಥಾನದ ಪಾವಿತ್ರ್ಯತೆ ಕಾಪಾಡುವ ದೃಷ್ಟಿಯಿಂದ ದೇವಸ್ಥಾನಕ್ಕೆ ಹೊಂದಿಕೊಂಡಿರುವ ಫುಟ್ಪಾತ್ ಮೇಲೆ ಹಾಗೂ ಫುಟ್ಪಾತ್ ಗೆ ಹೊಂದಿಕೊಂಡಿರುವ ರಸ್ತೆಯ ಮೇಲೆ ಯಾವುದೇ ರೀತಿಯ ತಾತ್ಕಾಲಿಕ ಅಂಗಡಿಗಳನ್ನು ಹಾಕಲು ಅವಕಾಶ ನೀಡದಂತೆ, ರಾತ್ರಿ ಸಮಯದಲ್ಲಿ ಅಂಗಡಿಕಾರರು ದೇವಸ್ಥಾನದ ಪಕ್ಕದ ಫುಟ್ ಪಾತ್ ಮೇಲೆ ಉಟೋಪಚಾರ ಮಾಡಿ ಮಲೀನ ಮಾಡದಂತೆ ಹಾಗೂ ದೇವಸ್ಥಾನದ ಮುಂಭಾಗದಲ್ಲಿ ದರ್ಶನಕ್ಕೆ ಬರುವ ಭಕ್ತರ ದ್ವಿಚಕ್ರ ವಾಹನಗಳನ್ನು ನಿಲ್ಲಿಸಲು ಸ್ಥಳಾವಕಾಶ ಮಾಡಿಕೊಡುವಂತೆ ದೇವಸ್ಥಾನದ ಮುಂಭಾಗದ ಪ್ರದೇಶವನ್ನು ಖುಲ್ಲಾ ಬಿಟ್ಟು ಬ್ಯಾರಿಕೇಡ್ ಹಾಕಿ ಸೂಕ್ತ ಬಂದೋಬಸ್ತ್ ನೀಡಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.



