ಭಟ್ಕಳ (Bhatkal) : ಭಟ್ಕಳದಲ್ಲಿ ಶಾಂತಿ ಭಂಗಕ್ಕೆ ಕಾರಣವಾಗುವಂತಹ ಒಂದರ ಮೇಲೊಂದು ನಡೆಯುತ್ತಿರುವ ಸಂದೇಹಾಸ್ಪದ ದುಷ್ಕೃತ್ಯಗಳನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ನಡೆಸುವಂತೆ ವಿಶ್ವ ಹಿಂದು ಪರಿಷತ್‌ (VHP) ಮತ್ತು ಹಿಂದೂ ಜಾಗರಣಾ ವೇದಿಕೆ (HJV) ಜಂಟಿಯಾಗಿ ಭಟ್ಕಳ ಪೊಲೀಸ್‌ ಉಪಾಧೀಕ್ಷಕರಿಗೆ ಮನವಿ (memorandum) ಸಲ್ಲಿಸಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಡಿ.೨೬ರಂದು ಬೆಳಿಗ್ಗೆ ಕಚೇರಿಗೆ ತೆರಳಿದ ವಿಶ್ವ ಹಿಂದು ಪರಿಷತ್‌ ಮತ್ತು ಹಿಂದೂ ಜಾಗರಣಾ ವೇದಿಕೆಯ ಮುಖಂಡರು ಹಾಗೂ ಕಾರ್ಯಕರ್ತರು ಲಿಖಿತ ಮನವಿ (memorandum) ಸಲ್ಲಿಸಿದ್ದಾರೆ.  ಭಟ್ಕಳದಲ್ಲಿ ಇತ್ತೀಚಿನ ದಿನಗಳಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವಂತಹ ಅನೇಕ ಸಂದೇಹಾಸ್ಪದ ಪ್ರಕರಣಗಳು ಒಂದರ ಮೇಲೊಂದು ಸಂಭವಿಸುತ್ತಿವೆ. ಇವುಗಳ ಬಗ್ಗೆ ಶೀಘ್ರ ಹಾಗೂ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಇದನ್ನೂ ಓದಿ : ಇಬ್ಬರು ಅಯ್ಯಪ್ಪ ಮಾಲಾಧಾರಿಗಳ ಸಾವು

ಡಿ.೨೬ರಂದು ಭಟ್ಕಳದ ತಾಲೂಕು ಪಂಚಾಯತ್‌ ಎದುರಿನ ಹಣ್ಣಿನ ಅಂಗಡಿ ಬೆಂಕಿಗಾಹುತಿ ಆಗಿರುವ ಪ್ರಕರಣದ ಬಗ್ಗೆ ವಿಶ್ವ ಹಿಂದೂ ಪರಿಷತ್‌ ಮತ್ತು ಹಿಂದೂ ಜಾಗರಣಾ ವೇದಿಕೆ ಶಂಕೆ ವ್ಯಕ್ತಪಡಿಸಿದೆ.  ಬೆಳಗಿನ ಜಾವ ಸರಿಸುಮಾರು ೨ ಗಂಟೆಗೆ ಹಿಂದೂ ಅಂಗಡಿಕಾರ ರಾಮಚಂದ್ರ ನಾಯ್ಕ ಎಂಬುವವರ ಹಣ್ಣಿನ ಅಂಗಡಿಗೆ ಅನುಮಾನಾಸ್ಪದ ರೀತಿಯಲ್ಲಿ ಬೆಂಕಿ ಬಿದ್ದಿದೆ. ಅಂಗಡಿಯು ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದನ್ನು ಗಮನಿಸಿದರೆ ಇದೊಂದು ಕಿಡಿಗೇಡಿಗಳ ಶಾಂತಿ ಭಂಗ ಮಾಡುವ ಪೂರ್ವನಿಯೋಜಿತ ದುಷ್ಕೃತ್ಯ ಎನ್ನುವುದು ಮೇಲ್ನೋಟಕ್ಕೆ ಸಂದೇಹ ಪಡುವಂತಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ :  ಡಿ.೨೭ರಂದು ಉತ್ತರ ಕನ್ನಡ ಸಹಿತ ಹಲವೆಡೆ ಮಳೆ

ಡಿ.೧೦ರಂದು ಧಾರ್ಮಿಕ ಪದ್ದತಿಯಂತೆ  ಮರದ ದೇವರ ಬೊಂಬೆಗಳನ್ನು ಒಳಗೊಂಡ ಮಾರಿಹೊರೆಯನ್ನು ಮುರಿನಕಟ್ಟೆಯ (ಬೆಂಡೆಕಾನ ಕ್ರಾಸ್ ಹತ್ತಿರ) ಧಾರ್ಮಿಕ ಶಕ್ತಿ ಸ್ಥಳಕ್ಕೆ ತಲುಪಿಸಲಾಗಿತ್ತು.  ಡಿ.೨೪ರಂದು ರಾತ್ರಿ ೭.೩೦ಕ್ಕೆ ಸಂಪ್ರದಾಯದಂತೆ ಮುಂದಿನ ಗ್ರಾಮವಾದ ಕಂಡೇಕೊಡ್ಲು, ಹುರುಳಿಸಾಲ ಹಾಗೂ ಕಾರ್ಗದ್ದೆ ಗ್ರಾಮಸ್ಥರು ಮಾರಿಹೊರೆಯನ್ನು ಮುಂದಿನ ವೆಂಕಟಾಪುರ ಗ್ರಾಮಕ್ಕೆ ತಲುಪಿಸುವ ಉದ್ದೇಶದಿಂದ ಮುರಿನಕಟ್ಟೆಯಲ್ಲಿ ಇದ್ದಂತಹ ಮಾರಿಹೊರೆಗೆ ಪೂಜೆ ಸಲ್ಲಿಸಲು ಹೋಗಿದ್ದರು. ಆಗ ಅಲ್ಲಿ  ಇಟ್ಟಂತಹ ೨ ದೇವರ ಬೊಂಬೆಗಳು ನಾಪತ್ತೆಯಾಗಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಪೊಲೀಸರ ಗಮನಕ್ಕೆ ತಂದು ಕೂಡಲೇ ಆರೋಪಿಗಳ ಪತ್ತೆಹಚ್ಚುವಂತೆ ಆಗ್ರಹಿಸಿ ಪ್ರಕರಣ ಸಹ ದಾಖಲಿಸಲಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ :   ಮೋರಿಗೆ ಕಾರು ಡಿಕ್ಕಿ; ಅಣ್ಣನ ವಿರುದ್ಧ ತಮ್ಮನಿಂದ ದೂರು

ಡಿ.೨೦ರಂದು ಭಟ್ಕಳ ನಗರದ ನಾಗಪ್ಪ ನಾಯಕ ರಸ್ತೆಯಲ್ಲಿ ಹಿಂದೂಗಳ ಮದುವೆ ಮೆರವಣಿಗೆಯ ಸಂದರ್ಭದಲ್ಲಿ ಅನ್ಯಕೋಮಿನ ಕೆಲ ಕಿಡಿಗೇಡಿಗಳು ಮೆರವಣಿಗೆಯನ್ನು ಅಡ್ಡಗಟ್ಟಿ ಮದುವೆ ಮೆರವಣಿಗೆ ನಡೆಸದಂತೆ ತಾಕೀತು ಮಾಡಿರುವ ಘಟನೆಯೂ ಸಹ ನಡೆದಿರುತ್ತದೆ. ಹೀಗೆ ಒಂದರ ಮೇಲೊಂದು ಶಾಂತಿಭಂಗ ತರುವಂತಹ ಸಂದೇಹಾಸ್ಪದ ಘಟನೆಗಳು ನಡೆಯುತ್ತಿರುವುದು ಭಟ್ಕಳದ ಹಿಂದೂಗಳಲ್ಲಿ ಆತಂಕ ಉಂಟುಮಾಡಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ : ಟ್ಯಾಕ್ಸಿಗೆ ಬೈಕ್‌ ಡಿಕ್ಕಿ; ಗಾಯಾಳು ವಿರುದ್ಧ ದೂರು

ಇಂತಹ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿ ದುಷ್ಕೃತ್ಯಕ್ಕೆ ಕಾರಣೀಕರ್ತರಾದವರನ್ನು ಹಿಡಿದು ಕಾನೂನು ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಇಂತಹವರ ಮನೋಬಲ ಹೆಚ್ಚಾಗಿ ಇನ್ನಷ್ಟು ದುಷ್ಕೃತ್ಯಕ್ಕೆ ಪ್ರೇರಣೆಯಾಗಿ ಭಟ್ಕಳದಲ್ಲಿ ಶಾಂತಿ ಭಂಗಕ್ಕೆ ಕಾರಣರಾಗಬಲ್ಲರು. ಮುಂದಿನ ದಿನಗಳಲ್ಲಿ ಇಂತಹ ಕೃತ್ಯಗಳು ಮುಂದುವರಿದಲ್ಲಿ ಇದರ ವಿರುದ್ಧ ಪ್ರತಿಭಟನೆಯ ಹಾದಿ ಹಿಡಿಯುವುದು ಅನಿವಾರ್ಯವಾಗಲಿದೆ ಎಂದೂ ಮನವಿಯಲ್ಲಿ ಎಚ್ಚರಿಸಲಾಗಿದೆ.

ಇದನ್ನೂ ಓದಿ :   ಕದ್ದ ಸ್ಥಳದಲ್ಲೇ ಬೈಕ್‌ ಬಿಟ್ಟು ಹೋದ…. !

ಇದಾದ ನಂತರ ತಾಲೂಕು ಆಡಳಿತ ಸೌಧಕ್ಕೆ ತೆರಳಿ ಉಪವಿಭಾಗಾಧಿಕಾರಿ ಅನುಪಸ್ಥಿತಿಯಲ್ಲಿ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಗಿದೆ.  ಕಚೇರಿಗೆ  ವಿಶ್ವ ಹಿಂದೂ ಪರಿಷತ್‌ ಅಧ್ಯಕ್ಷ ರಾಮಕೃಷ್ಣ ನಾಯ್ಕ, ಹಿಂದೂ ಜಾಗರಣಾ ವೇದಿಕೆ ಸಂಯೋಜಕ ಜಯಂತ ಬೆಣಂದೂರು, ಮಾಜಿ ಅಧ್ಯಕ್ಷ ದಿನೇಶ ನಾಯ್ಕ, ಬಿಜೆಪಿ ಮುಖಂಡರಾದ ಶ್ರೀಕಾಂತ ನಾಯ್ಕ, ಸುಬ್ರಾಯ ದೇವಡಿಗ, ದೀಪಕ ನಾಯ್ಕ ಮತ್ತಿತರರು ಇದ್ದರು.

ಇದನ್ನೂ ಓದಿ :  ಭಟ್ಕಳದ ಮೂವರು ಉಗ್ರರಿಗೆ ಶಿಕ್ಷೆ ಪ್ರಕಟ