ಕುಮಟಾ : ತಾಲೂಕಿನ ತಂಡ್ರಕುಳಿ ಗ್ರಾಮಸ್ಥರು ಪರ್ಯಾಯ ಜಾಗದ ವಾಸ್ತವ್ಯಕ್ಕಾಗಿ ಸರಕಾರಕ್ಕೆ ಸಲ್ಲಿಸಿದ ಬೇಡಿಕೆಯನ್ನು ಅತಿ ಶೀಘ್ರವಾಗಿ ಈಡೇರಲು ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಕಾರ್ಯಕರ್ತ ಆರ್ ಕೆ ಅಂಬಿಗ ಅವರ ನೇತೃತ್ವದಲ್ಲಿ ಕರ್ನಾಟಕ ಸರಕಾರದ ಮೀನುಗಾರಿಕಾ ಸಚಿವರೂ ಆಗಿರುವ ಉ.ಕ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯರಿಗೆ ಮನವಿ(memorandum) ಸಲ್ಲಿಸಲಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ದೀವಗಿ ಗ್ರಾ ಪಂ ವ್ಯಾಪ್ತಿಯ ತಂಡ್ರಕುಳಿಯಲ್ಲಿ ೨೦೧೭ನೇ ಇಸ್ವಿಯಲ್ಲಿ ಐಆರ್‌ಬಿಯವರ ಅವೈಜ್ಞಾನಿಕ ಕಾಮಗಾರಿಯ ಕಾರಣದಿಂದ ಗುಡ್ಡ ಕುಸಿತದ ದುರಂತ ನಡೆದಿತ್ತು. ನಂತರದಲ್ಲಿ ಹೆದ್ದಾರಿ ಅಗಲೀಕರಣಕ್ಕಾಗಿಯೂ ಅವೈಜ್ಞಾನಿಕ ರೀತಿಯಲ್ಲೇ ಮದ್ದನ್ನು ಬಳಸಿ ಮೂರು ಬಾರಿ ಭಾರೀ ಗಾತ್ರದ ಕಲ್ಲುಬಂಡೆಗಳನ್ನು ಸ್ಪೋಟಿಸಲಾಗಿತ್ತು. ಇದರಿಂದ ಅಲ್ಲಿಯೇ ಕೆಳಗಡೆ ವಾಸದ ಮನೆಗಳು ಡ್ಯಾಮೇಜ್ ಆಗಿದ್ದು ಅಲ್ಲಿಯ ನಿವಾಸಿಗಳು ಭಯಾನಕ ಸ್ಥಿತಿಯಲ್ಲಿ ಬದುಕನ್ನು ಸಾಗಿಸುತ್ತಾ ಬಂದಿದ್ದಾರೆ.
ಇದನ್ನೂ ಓದಿ : ಮಳೆ ಹೊಡೆತಕ್ಕೆ ಮನೆ ಗೋಡೆ ಕುಸಿತ
ಗುಡ್ಡದ ಕೆಳಭಾಗದಲ್ಲಿ ಹಾಗೂ ಅಘನಾಶಿನಿ ನದಿ ದಂಡೆಯ ಮಧ್ಯದಲ್ಲಿ ಕಾಲ ಕಳೆಯುತ್ತಿರುವ ಅಂಬಿಗರು ಕಳೆದ ಎರಡು ವರ್ಷಗಳ ಹಿಂದೆ ಸುರಕ್ಷತೆಯ ದೃಷ್ಟಿಯಿಂದ ಪರ್ಯಾಯ ಜಾಗಕ್ಕಾಗಿ ಸರಕಾರದ ಗಮನ ಸೆಳೆದಿದ್ದರು. ಅಲ್ಲಿಯೇ ಸನಿಹದಲ್ಲಿರುವ ಕೆಲವಷ್ಟು ಅರಣ್ಯ ಜಾಗವನ್ನು ಕಂದಾಯ ಇಲಾಖೆಗೆ ಮತ್ತು ಬೇರೆಡೆಯಿರುವ ರೆವಿನ್ಯೂ ಜಾಗವನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸುವ ಪ್ರಕ್ರಿಯೆಯ ಮಾತುಕತೆಗೆ ಪ್ರಸ್ತಾವನೆ ಇತ್ತು. ಆ ಪ್ರಸ್ತಾವನೆ ಇದೀಗ ಕಾರ್ಯರೂಪಕ್ಕೆ ಬಂದು ಎಸಿ ಕಾರ್ಯಾಲಯದ ಮಟ್ಟದಲ್ಲಿರುತ್ತದೆ. ಈಗ ಅದನ್ನು ಅತಿ ಶೀಘ್ರವಾಗಿ ಮಂಜೂರು ಮಾಡಿಸಿಕೊಡಬೇಕು ಎಂದು ಉ.ಕ. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯರಲ್ಲಿ ಮನವಿ(memorandum) ಸಲ್ಲಿಸಲಾಗಿದೆ.
ಇದನ್ನೂ ಓದಿ : ಮಳೆ ಹೊಡೆತಕ್ಕೆ ಮನೆ ಗೋಡೆ ಕುಸಿತ
ಬೇಡಿಕೆಯನ್ನು ಆಲಿಸಿದ ಸಚಿವರು ಸಾಧ್ಯವಾದಷ್ಟು ಬೇಗ ಸರಕಾರದ ಮಟ್ಟದಲ್ಲಿ ಪ್ರಯತ್ನಿಸಿ ಮಂಜೂರು ಮಾಡಿಸುವುದಾಗಿ ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ತಂಡ್ರಕುಳಿ ಅಂಬಿಗ ಸಮಾಜದ ಅಧ್ಯಕ್ಷ ಗಣಪಯ್ಯ ನಾಗು ಅಂಬಿಗ, ಪದಾಧಿಕಾರಿಗಳಾದ ರಾಮ ಎಚ್ ಅಂಬಿಗ, ರಾಘವೇಂದ್ರ ಎ ಅಂಬಿಗ, ರಮೇಶ ಆರ್ ಅಂಬಿಗ, ಗಣಪತಿ ಎಸ್ ಅಂಬಿಗ ಇನ್ನಿತರರು ಉಪಸ್ಥಿತರಿದ್ದರು.