ಭಟ್ಕಳ (Bhatkal): ನಗರ ಭಾಗದಲ್ಲಿ ಚರಂಡಿ ಹಾಗೂ ರಸ್ತೆ ಕಾಮಗಾರಿಗಳಿಗೆ ಕಳೆದ ಎರಡು ವರ್ಷಗಳಿಂದ ಹಣ ಬಿಡುಗಡೆಯಾಗಿದೆ. ಆದರೆ ಕಾಮಗಾರಿ ಮಾತ್ರ ಮಾಡಿಲ್ಲ. ಜನರಿಗೆ ಸುಳ್ಳು ಭರವಸೆ ಕೊಡುತ್ತಾ ಭಟ್ಕಳವನ್ನು ಅಸ್ವಸ್ಥ ನಗರವನ್ನಾಗಿ ಮಾಡಿದ ಗುತ್ತಿಗೆದಾರರ ವಿರುದ್ದ ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಶನಿವಾರದಂದು ಸಹಾಯಕ ಆಯುಕ್ತರಿಗೆ ಡಬ್ಲೂ.ಎಚ್. ಆರ್. ಆರ್.ಕೆ. ಫೌಂಡೇಶನ್ ವಿಶ್ವ ಮಾನವ ಹಕ್ಕು ಘಟಕದ ಜಿಲ್ಲಾ ಮತ್ತು ತಾಲೂಕು ಘಟಕದಿಂದ ಮನವಿ (memorandum) ಸಲ್ಲಿಸಲಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
೨೦೨೨ರ ನವೆಂಬರ್ ೨೪ ರಂದು ಸುಮಾರು ೮ ಕೋಟಿ ರೂ. ನಗರೋತ್ಥಾನ ಕಾಮಗಾರಿಯ ಪ್ರತಿಯನ್ನು ಸಿದ್ಧಪಡಿಸಲಾಗಿತ್ತು. ಕುಂದಾಪುರ ಮೂಲದ ಗುತ್ತಿಗೆದಾರ ನಾಗಯ್ಯ ಶೆಟ್ಟಿ ಎನ್ನುವವರಿಗೆ ಭಟ್ಕಳ ಪುರಸಭೆಯು ೨೦೨೨ರ ಡಿಸೆಂಬರ್ ೨೬ ರಂದು ಕಾಮಗಾರಿಯ ಪೂರ್ಣ ಪ್ರಮಾಣದ ಜವಾಬ್ದಾರಿಯ ಹಕ್ಕು ಪತ್ರವನ್ನು ನೀಡಿದ್ದಾರೆ. ಆದರೆ, ಈ ಹಕ್ಕು ಪತ್ರವನ್ನು ತೆಗೆದುಕೊಂಡ ಗುತ್ತಿಗೆದಾರ ಅಕ್ಟೋಬರ್ ೧೮ ರ ತನಕ ಯಾವುದೇ ಕಾಮಗಾರಿ ಪರಿಪೂರ್ಣ ಮಾಡಿಲ್ಲ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.
ಇದನ್ನೂ ಓದಿ : ಗೇರೆಣ್ಣೆ ತುಂಬಿದ ಟ್ಯಾಂಕರ್ ಪಲ್ಟಿ
ಹಲವು ಕಡೆ ಸಣ್ಣಪುಟ್ಟ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಆದರೆ, ಸತತ ಎರಡು ವರ್ಷಗಳ ಕಾಲವಾದರೂ ಇನ್ನೂ ಕಾಮಗಾರಿಗೆ ಚಾಲನೆ ಕೊಡದಿರುವುದಕ್ಕೆ ಕಾರಣವೇನು? ಈಗಾಗಲೇ ಪುರಸಭೆಯಿಂದ ೪ ಕೋಟಿ ೮೩ ಲಕ್ಷ ಹಣ ನಾಗಯ್ಯ ಶೆಟ್ಟಿ ಅವರ ಖಾತೆಗೆ ಜಮಾ ಆಗಿದೆ. ಆದರೂ ಈ ವ್ಯಕ್ತಿ ನಗರ ಭಾಗದಲ್ಲಿ ಅತ್ಯಂತ ಅವಶ್ಯಕವಾಗಿ ಇರುವ ಕಾಮಗಾರಿಯನ್ನು ಶುರು ಮಾಡದೇ ಇಂದು ನಾಳೆ ಎನ್ನುತ್ತಾ ಸುಳ್ಳು ಭರವಸೆ ಹಾಗೂ ಹಾರಿಕೆ ಉತ್ತರ ನೀಡುತ್ತಾ, ದಿನಗಳನ್ನು ದೂಡುತ್ತಿದ್ದಾರೆ ಎಂದು ದೂರಲಾಗಿದೆ.
ಇದನ್ನೂ ಓದಿ : ಕರಡಿ ದಾಳಿಯಿಂದ ವೃದ್ಧ ಗಂಭೀರ
ನಗರೋತ್ಥಾನ ಕಾಮಗಾರಿಯಲ್ಲಿ ಬಿಡುಗಡೆಯಾದ ೮ ಕೋಟಿ ವೆಚ್ಚದ ಈ ಕಾಮಗಾರಿಯಲ್ಲಿ ನಗರ ಭಾಗದ ಅತ್ಯಂತ ಅವಶ್ಯವಿರುವ ಚರಂಡಿ ಹಾಗೂ ರಸ್ತೆ ಮಾರ್ಗವಿದೆ. ಭಟ್ಕಳ ಹಿಂದೆಂದೂ ಕಾಣದ ರೀತಿಯಲ್ಲಿ ಮಳೆ ಬಂದಾಗ ಕಳೆದೆರಡು ವರ್ಷದಿಂದ ಅಪಾರ ಪ್ರಮಾಣದ ನೀರಿನ ಪ್ರವಾಹ ಬಂದು ಮನೆಯೊಳಗೆ ಅಂಗಡಿ ಮುಂಗಟ್ಟುಗಳು ಜಲಾವೃತವಾಗಿವೆ. ಇವೆಲ್ಲದಕ್ಕೂ ಮೂಲ ಕಾರಣ ಚರಂಡಿ ವ್ಯವಸ್ಥೆ ಸರಿಯಾಗದೇ ಇರುವುದು. ೯ ಭಾಗಗಳಲ್ಲಿ ಹತ್ತಾರು ಕಾಮಗಾರಿಗಳು ಅವಶ್ಯವಾಗಿ ಕಾರ್ಯ ಪ್ರಾರಂಭ ಮಾಡಬೇಕಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ : ಪ್ರೀತಿಸಿ ಮದುವೆಯಾಗಿ ಮನೆಬಿಟ್ಟು ಹೋದ ಮಗ ಹಾಸಿಗೆ ಹಿಡಿದ; ತಂದೆ ಆತ್ಮಹತ್ಯೆ
ಪುರಸಭೆ ಈ ಗುತ್ತಿಗೆದಾರರಿಗೆ ಕಾಮಗಾರಿ ಪರವಾನಿಗೆ ಕೊಟ್ಟು, ನಮ್ಮ ಕೆಲಸ ಆಯಿತೆಂಬಂತೆ ಕೈಕಟ್ಟಿ ಕುಳಿತಿದೆ. ಆದರೆ ಮಳೆಗಾಲದಲ್ಲಿ ಚರಂಡಿ ವ್ಯವಸ್ಥೆ ಸರಿ ಇಲ್ಲದ್ದರಿಂದ ಮನೆ ಮತ್ತು ಅಂಗಡಿ ಒಳಗೆ ನೀರು ಹೊಕ್ಕಿ ಅಪಾರ ಪ್ರಮಾಣದ ಹಾನಿ ಹಾಗೂ ಆರೋಗ್ಯ ಸಮಸ್ಯೆಯನ್ನು ಭಟ್ಕಳ ನಗರ ಭಾಗದ ಜನರು ಎದುರಿಸುತ್ತಿದ್ದಾರೆ. ಅದೂ ಅಲ್ಲದೆ, ಮಳೆಗಾಲ ಸಮಯದಲ್ಲಿ ಶಾಲಾ ಮಕ್ಕಳು ರೋಡಿನಲ್ಲಿ ನಡೆದುಕೊಂಡು ಹೋಗುವದು ಅಪಾಯಕಾರಿಯಾಗಿದೆ. ಪ್ರತಿ ರಸ್ತೆಯೂ ಹೊಂಡಗಳಾಗಿ ನೀರಿನಿಂದ ತುಂಬಿದೆ. ಇಲ್ಲಿ ಏನು ಬೇಕಾದರೂ ಅನಾಹುತ ಜರುಗಬಹುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಇಬ್ಬರು ನಾಪತ್ತೆ; ಪ್ರತ್ಯೇಕ ಪ್ರಕರಣ ದಾಖಲು
ಈಗಾಗಲೇ ಹಲವು ನಗರ ಭಾಗದವರು ಪುರಸಭೆ ವಿರುದ್ಧ ಪ್ರತಿಭಟಿಸಿ, ಮನವಿ ಸಲ್ಲಿಸಿದ್ದಾರೆ. ಆದರೂ ಕಾಮಗಾರಿ ಟೆಂಡರ್ ಪಡೆದ ಈ ವ್ಯಕ್ತಿ ಇನ್ನೂ ಪರಿಪೂರ್ಣವಾಗಿ ಕಾಮಗಾರಿಗೆ ಚಾಲನೆ ಕೊಡದೇ ಪೂರ್ಣಗೊಳಿಸುವ ಮನೋಭಾವನೆ ಹೊಂದಿಲ್ಲ. ಆದ ಕಾರಣ, ಗುತ್ತಿಗೆದಾರರಿಗೆ ತಾಕೀತು ನೀಡಿ ಸಂಬಂಧಪಟ್ಟ ಅಧಿಕಾರಿಗಳಿಂದ ಶಿಸ್ತಿನ ಕ್ರಮ ಜರುಗಿಸಲು ಮತ್ತು ಈ ಗುತ್ತಿಗೆದಾರರನ್ನು ಬದಲಾಯಿಸಿ, ಕೂಡಲೇ ಈ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಅಕ್ಟೋಬರ್ ೧೮ರಂದು ವಿವಿಧೆಡೆ ಅಡಿಕೆ ಧಾರಣೆ
ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ನಗರದ ಎಲ್ಲಾ ವಾರ್ಡಿನ ಜನತೆಯ ಜೊತೆಯಲ್ಲಿ ನಮ್ಮ WHR EX FOUNDATION (ವಿಶ್ವ ಮಾನವ ಹಕ್ಕುಗಳು )ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕಿನ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಸಂಬಂಧಪಟ್ಟ ಅಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ಮಾಡುವ ಸಿದ್ದತೆ ಮಾಡಲಿದ್ದೇವೆ. ಈ ಮನವಿ ಪತ್ರವನ್ನು ಸ್ವೀಕರಿಸಿದ 15 ದಿನಗಳ ಒಳಗಾಗಿ ನಮಗೆ ಇದರ ಬಗ್ಗೆ ಲಿಖಿತ ಮಾಹಿತಿ ನೀಡಬೇಕು ಎಂದು ಆಗ್ರಹಿಸಲಾಗಿದೆ.
ಇದನ್ನೂ ಓದಿ : ಜಾನುವಾರು ಮೈ ತೊಳೆಯಲು ಹೋದವ ನೀರುಪಾಲು
ಈ ಸಂದರ್ಭದಲ್ಲಿ ಡಬ್ಲೂ.ಎಚ್. ಆರ್. ಆರ್.ಕೆ. ಫೌಂಡೇಶನ್ ವಿಶ್ವ ಮಾನವ ಹಕ್ಕು ಘಟಕದ ಜಿಲ್ಲಾ ಘಟಕದ ಮಹಿಳಾ ಅಧ್ಯಕ್ಷೆ ಅರ್ಚನಾ ಜಯಪ್ರಕಾಶ ನಾಯಕ, ಜಿಲ್ಲಾ ಘಟಕದ ಪ್ರಮುಖ ಥೆರೆಸಾ ಡಿಸೋಜಾ ಶಿರಸಿ, ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀಧರ ನಾಯ್ಕ, ಪ್ರಧಾನ ಕಾರ್ಯದರ್ಶಿ ವಿವೇಕಾನಂದ ನಾಯ್ಕ, ಉಪಾಧ್ಯಕ್ಷ ಶ್ರೀನಿವಾಸ ನಾಯ್ಕ, ಸದಸ್ಯರಾದ ಪಾಂಡು ನಾಯ್ಕ, ದಿನೇಶ ನಾಯ್ಕ ಇದ್ದರು.