ಶಿವಮೊಗ್ಗ (Shivamogga) : ಜಿಲ್ಲೆಯ ಶಿಕಾರಿಪುರ (Shikaripura) ತಾಲೂಕಿನ ಕೋಡಿಕೊಪ್ಪ ಗ್ರಾಮದಲ್ಲಿ ವಿನೂತನ ಹಾಲು ಕರೆವ ಸ್ಪರ್ಧೆಯನ್ನು (milking contest) ಪಶು ಸಂಗೋಪನಾ ಇಲಾಖೆ ಹಮ್ಮಿಕೊಂಡಿತ್ತು. ಹೈನುಗಾರಿಕೆ ಪ್ರೋತ್ಸಾಹ ನಿಟ್ಟಿನಲ್ಲಿ ಈ ತರಹದ ಸ್ಪರ್ಧೆ ಜಿಲ್ಲೆಯಲ್ಲಿ ಇದೇ ಮೊದಲು ಏರ್ಪಡಿಸಲಾಗಿತ್ತು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಕೋಡಿಕೊಪ್ಪ ಗ್ರಾಮದ ಹಸು ಹಾಲು ಡೇರಿ ಎದುರು ಮೂವತ್ತಕ್ಕೂ ಅಧಿಕ ಹಸುಗಳನ್ನ ನಿಲ್ಲಿಸಿ ಹಾಲು ಹಿಂಡಿ ಪಶು ಇಲಾಖೆ ಸಿಬ್ಬಂದಿ ಎದುರೇ ಅಳೆದು ಕೊಡಲಾಯಿತು. ಹೆಚ್ಚು ಹಾಲು ಹಿಂಡಿದ ಬೂದೇಶ್ ಎಂಬುವರಿಗೆ ಮೊದಲ ಬಹುಮಾನ, ಏಳು ಲೀಟರ್ ಹಾಲಿಗಾಗಿ ಮಂಜುನಾಥಯ್ಯ ಅವರ ಹಸು ಎರಡನೇ ಬಹುಮಾನ ಪಡೆಯಿತು. ಬಸವಣ್ಣನವರ ಹಸು ಮೂರನೇ ಬಹುಮಾನ ಪಡೆಯಿತು. ಭಾಗವಹಿಸಿದ ಎಲ್ಲರಿಗೂ ಸಮಾಧಾನಕರ ಬಹುಮಾನ ನೀಡಲಾಯಿತು. ನಾನಾ ಗಾತ್ರದ ಹಾಲು ತುಂಬುವ ಪಾತ್ರೆಗಳನ್ನ ಬಹುಮಾನವಾಗಿ ನೀಡಲಾಯಿತು.
ಇದನ್ನೂ ಓದಿ : Kannada sammelan/ ಭಟ್ಕಳದ ಇಬ್ಬರಿಗೆ ವಿಶೇಷ ಆಹ್ವಾನ
ಹಾಲು ಕರೆಯುವ ಸ್ಪರ್ಧೆ (milking contest) ಶಿವಮೊಗ್ಗ ಜಿಲ್ಲೆಯಲ್ಲಿ ಹೊಸದಾಗಿ ಬಂದ ಕಾರ್ಯಕ್ರಮ. ಯಾವ ಹಸು ಹೆಚ್ಚು ಹಾಲನ್ನು ನೀಡುತ್ತದೆ ಅಂತ ಹಸುವಿಗೆ ನಾವು ಬಹುಮಾನವನ್ನು ಕೊಡುತ್ತೇವೆ. ಇದು ರೈತರಿಗೆ ಉತ್ತೇಜನ ನೀಡುವ ಕಾರ್ಯಕ್ರಮ ಈ ಕಾರ್ಯಕ್ರಮದಿಂದ ರೈತರು ಸ್ಪರ್ಧಾತ್ಮಕ ಮನೋಭಾವದಿಂದ ಹಸುಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ಕೋಡಿಕೊಪ್ಪದ ಜನ ಚೆನ್ನಾಗಿ ಸ್ಪಂದನೆ ಮಾಡಿ ಹಾಲನ್ನ ಹಿಂಡಿಕೊಟ್ಟಿದ್ದಾರೆ. ಭಾಗವಹಿಸಿದ ಎಲ್ಲಾ ರೈತರಿಗೂ ಕೂಡ ಸಮಾಧಾನಕ ಬಹುಮಾನ ಜೊತೆಗೆ ಹಸುಗಳಿಗೆ ಕೆಲವು ಔಷಧಿಗಳನ್ನು ಕೊಟ್ಟಿದ್ದೇವೆ ಎಂದು ಶಿಕಾರಿಪುರದ ಪಶು ವೈದ್ಯಾಧಿಕಾರಿ ಡಾ. ರವಿಕುಮಾರ ತಿಳಿಸಿದ್ದಾರೆ.
ಇದನ್ನೂ ಓದಿ : ಡಿ. ೩೧ರಂದು ೧೧ನೇ ಕನ್ನಡ ಸಾಹಿತ್ಯ ಸಮ್ಮೇಳನ
ಮೊದಲ ಬಹುಮಾನ ಪಡೆದ ಬೂದೇಶ್ ಮಾತನಾಡಿ, ಊರಿನಲ್ಲಿ ಹಾಲಿನ ಡೇರಿ ತರಲು ಬಹಳಷ್ಟು ಕಷ್ಟಪಟ್ಟಿದ್ದೆವು. ಸುಮಾರು ನೂರು ಮನೆಗಳಿವೆ. ಜನರು ಎಲ್ಲರೂ ಹಸು ಕಟ್ಟಿ ಹಾಲು ಕರೆಯುತ್ತಾರೆ. ಹತ್ತು ಲೀಟರ್ ೨ ಎಂಎಲ್ ಹಾಲು ನೀಡಿದ್ದಕ್ಕಾಗಿ ನಮ್ಮ ಹಸುವಿಗೆ ಪ್ರಥಮ ಬಹುಮಾನ ನೀಡಿದ್ದಾರೆ. ಮನೆಯಲ್ಲಿ ಇನ್ನೂ ಒಂದು ಲೀಟರ್ ಹೆಚ್ಚಿಗೆ ಕೊಡುತ್ತಿತ್ತು. ಇಲ್ಲಿ ಕರೆತಂದಕ್ಕಾಗಿ ಸ್ವಲ್ಪ ಕಡಿಮೆಯಾಗಿದೆ. ಆದರೂ ಮೊದಲ ಪ್ರಶಸ್ತಿ ಬಂದಿದೆ ಎಂದು ಖುಷಿ ಪಟ್ಟರು.
ಈ ಸುದ್ದಿಯ ವಿಡಿಯೋವನ್ನು ಯೂಟ್ಯೂಬ್ ಚಾನೆಲ್, ಇನ್ಸ್ಟಾಗ್ರಾಂನಲ್ಲಿ ಮತ್ತು ಫೇಸ್ಬುಕ್ ನಲ್ಲಿ ವೀಕ್ಷಿಸಬಹುದು.
ವಿಡಿಯೋ ಸಹಿತ ಇದನ್ನೂ ಓದಿ : ಬಾವಿಗೆ ಬಿದ್ದ ಬಾಲಕನ ಕುಟುಂಬಸ್ಥರಿಂದ ಪ್ರತಿಭಟನೆ