ಭಟ್ಕಳ: ಶುಕ್ರವಾರ ಸುರಿದ ಗಾಳಿ ಮಳೆಗೆ ಹಾನಿಯಾದ ತಾಲೂಕಿನ ವಿವಿಧೆಡೆ ಸಚಿವ ಮಂಕಾಳ ವೈದ್ಯ (Minister Mankal Vaidya) ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೇ ಸಂದರ್ಭದಲ್ಲಿ ಸಂತ್ರಸ್ತರಿಗೆ ಪರಿಹಾರ ವಿತರಣಾ ಪತ್ರ ನೀಡಿದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್‌ ಮಾಡಲು ಇಲ್ಲಿ ಒತ್ತಿ.

ಭಟ್ಕಳ ತಾಲೂಕಿನಾದ್ಯಂತ ಹಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ವಿವಿಧೆಡೆ ಮನೆಗಳಿಗೆ ಹಾನಿಯಾಗಿವೆ. ಇನ್ನೊಂದೆಡೆ ತೋಟ ಸೇರಿದಂತೆ ಕೃಷಿ ಭೂಮಿಗಳು ನಾಶವಾಗಿವೆ. ಶುಕ್ರವಾರ ಸಂಜೆ ಸುರಿದ ಭಾರಿ ಗಾಳಿ ಮಳೆಗೆ ತಾಲೂಕಿನ ಹಾಡವಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ನೂರಾರು ಅಡಿಕೆ ಮರಗಳು ಸೇರಿ ತೆಂಗಿನ ಮರಗಳು ಧರೆಗೆ ಉರುಳಿವೆ.

ವಿಡಿಯೋ ಸಹಿತ ಇದನ್ನೂ ಓದಿ : ಗಾಳಿ-ಮಳೆಗೆ ತೋಟ-ಮನೆ ಹಾನಿ

ಮಳೆಹಾನಿ ವೀಕ್ಷಣೆಗಾಗಿ ರವಿವಾರ ಸಚಿವ ಮಂಕಾಳ ವೈದ್ಯ (Minister Mankal Vaidya) ಅಧಿಕಾರಿಗಳೊಂದಿಗೆ  ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದರು. ಸಂತ್ರಸ್ತರ ಮನೆಗಳಿಗೆ ಭೇಟಿ ನೀಡಿ ಪರಿಹಾರ ಪತ್ರ ವಿತರಿಸಿದರು. ತಾಲೂಕಿನ ಹಾಡವಳ್ಳಿ, ಕೊಣಾರ, ಯಲ್ವಡಿಕವೂರು ಬೆಳ್ಕೆ ಹಾಗೂ ಮಾವಿನಕುರ್ವಾ ಪಂಚಾಯತ ವ್ಯಾಪ್ತಿಯಲ್ಲಿನ ಘಟನಾ ಸ್ಥಳಗಳಿಗೆ ಭೇಟಿ ನೀಡಿದರು.

ಇದನ್ನೂ ಓದಿ : Sunil Naik: ಹಾಡುವಳ್ಳಿಗೆ ಮಾಜಿ ಶಾಸಕ ಸುನೀಲ ನಾಯ್ಕ ಭೇಟಿ

ಈ ಸಂದರ್ಭದಲ್ಲಿ ಸಹಾಯಕ ಆಯುಕ್ತೆ ಡಾ.ನಯನ, ತಹಶೀಲ್ದಾರ ನಾಗರಾಜ ನಾಯ್ಕಡ ಮತ್ತಿತರ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.