ಭಟ್ಕಳ (Bhatkal): ಮನೆಯಲ್ಲಿದ್ದ ಯುವತಿಯೊರ್ವಳು ನಾಪತ್ತೆಯಾಗಿರುವ (young woman missing) ಘಟನೆ ಭಟ್ಕಳ ತಾಲೂಕಿನ ಮಾರುಕೇರಿ ಪಂಚಾಯತ ವ್ಯಾಪ್ತಿಯಲ್ಲಿ ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ನಾಪತ್ತೆಯಾದ ಯುವತಿಯನ್ನು ೨೦ ವರ್ಷದ ಮಮತಾ ನಾರಾಯಾಣ ಗೊಂಡ ಎಂದು ಗುರುತಿಸಲಾಗಿದೆ. ಈಕೆ ನ.೪ರಂದು ಸೋಮವಾರ ಬೆಳಿಗ್ಗೆ ೯ ಗಂಟೆಯಿಂದ ಮಧ್ಯಾಹ್ನ ೧ ಗಂಟೆಯ ನಡುವಿನ ಅವಧಿಯಲ್ಲಿ ಮನೆಯಲ್ಲಿ ಒಬ್ಬಳೆ ಇದ್ದಾಗ ಎಲ್ಲಿಯೋ ಹೋಗಿ ಕಾಣಿಯಾಗಿದ್ದಾಳೆ (young woman missing). ತನ್ನ ಮಗಳನ್ನು ಹುಡುಕಿಕೊಡುವಂತೆ ಯುವತಿಯ ತಂದೆ ನಾರಾಯಣ ಗೊಂಡ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ದೂರು (complaint) ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಯುವತಿ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ :  ಹೆಜ್ಜೇನು ದಾಳಿಗೆ ವೃದ್ಧೆ ಬಲಿ